ಇಂಡಿ: ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಆವರಣದಲ್ಲಿ ಭಾರತೀಯ ಕಿಸಾನ ಸಂಘ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಬೇಟಿ ನೀಡಿ ಸಾಂತ್ವಾನ ಹೇಳಿ ಸತ್ಯಾಗ್ರಹ ನೀರತರ ರೈತರನ್ನು ಮನವಲಿಸುವ ಮೂಲಕ ಸತ್ಯಾಗ್ರಹ ಕೈ ಬಿಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ರೈತರು ನೀಡಿ ಶಾಸಕರು ಭರವಸೆ ನೀಡಿದ್ದರಿಂದ ಸತ್ಯಾಗ್ರಹ ನೀರತ ರೈತ ಮುಖಂಡರಿಗೆ ಎಳನೀರು ಕುಡಿಸುವ ಮೂಲಕ ಧರಣಿ ಸತ್ಯಾಗ್ರಹವನ್ನು ಸಂಪನ್ನಗೊಳಿಸಿದರು.
ಧರಣಿ ನೀರತ ರೈತರನ್ನುದ್ದೇಶಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಇಂಡಿ ತಾಲೂಕು ತಿವೃ ಬರಗಾಲ ಛಾಯೆ ಆವರಿಸಿದ್ದರಿಂದ ತಾಲೂಕಿನ ರೈತ ವರ್ಗ ತಿವೃ ಸಂಷ್ಟದಲ್ಲಿದೆ. ಇದನ್ನು ಕಂಡು ಸರ್ಕಾರ ತಿವೃ ಬರ ಘೊಷಣೆ ಮಾಡಿದ್ದು ಇದರಿಂದ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಸಿಗಲಿದೆ. ಇಂತಹ ಗ್ಯಾರೆಂಟಿ ಯೋಜನೆಗಳ ಮದ್ಯ ರಾಜ್ಯದಲ್ಲಿ ಭ್ರಹತ ನೀರಾವರಿ ಯೋಜನೆ ಎಲ್ಲಿಯಾದರು ನಡೆದಿದ್ದರೆ ಅದು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಾಗಿದೆ ಎಂದರು.
ನಿಮ್ಮ ಹೋರಾಟಗಳು ಸಮಂಜಸವಾಗಿದ್ದು ಸರ್ಕಾರದ ಗಮನ ಸೆಳೆಯವ ಕಾರ್ಯ ಮಾಡಿರುವುದು ಸ್ವಾಗತಾರ್ಹವಾಗಿದೆ. ರೈತ ಕುಟುಂಬದಿಂದ ಬಂದ ನಾನು ನಿಮ್ಮ ಹೊರಾಟಕ್ಕೆ ಬೆನ್ನೆಲುಬಾಗಿದ್ದೆನೆ. ರೈತ ಪರವಾದ ನಿಮ್ಮ ಈ ಹೋರಾಟಕ್ಕೆ ರಾಜ್ಯ ಸರ್ಕಾರ ನಿಮ್ಮ ಪರವಾಗಿ ಕೇಲಸ ಮಾಡುತ್ತದೆ. ಅಂದು೭೪ ಟಿಎಂಸಿ ನೀರು ನೀಗದಿ ಮಾಡಿದ್ದರಿಂದ ಇಂದು ಇಂತಹ ನೀರಾವರಿ ಯೋಜನೆಗಳನ್ನು ಜಾರಿಗೆ ಬಂದಿವೆ. ಇದಕ್ಕೆ ಸಿದ್ದರಾಮಯ್ಯನವರು ಸಹಕರಿಸಿದ್ದಾರೆ. ಇನ್ನು ಯೋಜನೆಯ ಅವಧಿ ಮುಗಿದಿಲ್ಲ ಮುಗಿದ ಬಳಿಕ ಹೋರಾಟ ಅನಿವಾರ್ಯ ಆದರೆ ಈಗ ಆ ಯೋಜನೆ ಪ್ರಗತಿ ಹಂತದಲ್ಲಿದೆ. ನೀರಾವರಿ ಯೋಜನಾ ಪ್ರದೇಶದ ಕೊನೆ ಹಂತದಲ್ಲಿ ಹುಟ್ಟಿದ್ದರಿಂದ ಸ್ವಲ್ಪ ತೊಂದರೆ ಅನುಭವಿಸುವುದು ಸ್ವಾಭಾವಿಕ. ಕೊನೆ ಪಂಕ್ತಿ ಉಟ ಮಾಡುವು ಒಂದೇ ಕೊನೆ ಭಾಗದಲ್ಲಿ ಇರುವುದು ಒಂದೇ ಹಾಗಾಗಿ ತೊಂದರೆ ಅನುಭವಿಸುವುದು ಸ್ವಾಭಾವಿಕ ಎಂದರು.
ಬಾಕ್ಸ್: ಗ್ಯಾರೆಮಟಿ ಯೊಜನೆಗಳ ಮಧ್ಯ ಇಂದು ಕರ್ನಾಟಕ ರಾಜ್ಯದಲ್ಲಿ ಇಂತಹ ಭೃಹತ ಮೋತ್ತದ ಏಕೈಕ ಯೋಜನೆ ನಡೆದಿದ್ದರೆ ಅದು ಇಂಡಿಯಲ್ಲಿ ಮಾತ್ರ ಎನ್ನುವುದನ್ನು ಯಾರು ಮರೆಯಬಾರದು. ಇದರಿಂದ ಇಂಡಿ-ಚಡಚಣ ಭಾಗದ ರೈತರ ಶೇಕಡಾ ೮೦ ರಷ್ಟು ನೀರಾವರಿಯಾಗಲಿದೆ. ಇದಕ್ಕೆ ಅನುಮೋದನೆ ನೀಡಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ ಶಿವಕುಮಾರ ಅವರಿಗೆ ಅಭಿನಂದಿಸುತ್ತೆನೆ. ಯಶವಂತರಾಯಗೌಡ ಪಾಟೀಲ ಶಾಸಕರು ಇಂಡಿ.
ಭಗವಂತ ನೀಡಿದಷ್ಟು ನಿಮ್ಮ ಬೇಡಿಕೆ ಸಮಂಜಸವಾಗಿದ್ದು ಬಿತ್ತಿದ ಬೆಳೆ ಬಾರದೆ ತೊಂದರೆ ಅನುಭವಿಸುತ್ತಿರುವುದು ಗೊತ್ತಿರುವ ಸಂಗತಿ. ಈಗಾಗಲೆ ಬಹುತೇಕ ಕೆರಗಳಿ ನೀರು ಹರಿಸಲಾಗುತ್ತಿದ್ದು ನಮ್ಮ ಭಾಗದ ರೈತರಿಗೆ ಇದರಿಂದ ಅನುಕೂಲವಾಗಿಲ್ಲ. ಆದ್ದರಿಂದ ನಿರಂತರವಾಗಿ ಕೆರಗಳಿಗೆ ನೀರು ಹರಿಸಬೇಕು. ರೇವಣ ಸಿದ್ದೇಶ್ವರ ಏತ ನೀರಾವರಿಯ ಎರಡನೇ ಹಂತದ ಕಾಮಾಗಾರಿ ತ್ವರಿತವಾಗಿ ಪ್ರಾರಂಭಿಸಬೇಕು. ಸಮರ್ಪಕವಾಗಿ ಮಳೆ ಬಾರದೆ ತಿವೃ ತೊಂದರೆಯಲ್ಲಿ ನಮ್ಮ ರೈತರು ಇದ್ದಾರೆ. ಈಗಾಗಲೆ ತಮ್ಮ ಸಮಸ್ಯ ಕುರಿತು ಗಂಭಿರ ಚಿಂತನೆ ಮಾಡಲಾಗಿದು ತ್ವರಿತವಾಗಿ ಆಯಾ ಕೆರೆಗಳಿಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಲಿಂಬೆ ಅಭಿವೃದ್ದಿ ಮಂಡಲಿ ಅಧ್ಯಕ್ಷ ಭೀಮಣ್ಣ ಕವಲಗಿ, ಬಾಬುಸಾವಕಾರ ಮೇತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋರಾಟದಲ್ಲಿ ರಾಚೋಟೇಶ್ವರ ಸ್ವಾಮಿಜಿಯವರು, ಭಾರತಿಕೀಸಾನ ಸಂಘದ ಉತ್ತರ ಪ್ರಾಂತದ ಗುರುನಾಥ ಬಗಲಿ, ಈರಪ್ಪ ಗೊಟ್ಯಾಳ, ಸೋಮಶೇಖರ ಬ್ಯಾಳಿ, ನಾಗಪ್ಪ ಮಕಣಿ, ಚನ್ನಪ್ಪ ಮಿರಗಿ, ಅಂಬಣ್ಣ ಪಂತೊಜಿ, ದಶಗೀರ ಬಾಗವಾನ, ಸಿದ್ದು ಸಾವುಕಾರ ಮೇತ್ರಿ ಇತರರು ಇದ್ದರು.