ಹೊಸಪೇಟೆ : ಧಾರ್ಮಿಕತೆ ಎನ್ನುವುದು ಗುಡಿ ಗುಂಡಾರಗಳನ್ನು ಸುತ್ತುವುದರಿಂದ ಬರುವಂತಹುದಲ್ಲ, ಧಾರ್ಮಿಕತೆ ಕುಟುಂಬಗಳಲ್ಲಿ ಪರಸ್ಪರ ಗೌರವ ,ಪ್ರೀತಿ, ಹಾಗು ಸೇವಾ ಮನೋಭಾವ ಬೆಳೆಸುವುದರಿಂದ ಬರುವಂತಹುದು. ಮನೆಗಳಲ್ಲಿ ಹಿರಿಯರಿಗೆ ಗೌರವ ,ಸಹೋದರ- ಸಹೋದರಿಯರಲ್ಲಿ ಪ್ರೀತಿ ತೋರಿಸುವದರಿಂದ ಸಮಾಜಿಕ ಜೀವನದಲ್ಲಿಯೂ ಇತರರ ಬಗ್ಗೆ ಕರುಣೆ ಮತ್ತು ಪ್ರೀತಿಯ ಭಾವನೆಗಳು ಹುಟ್ಟುತ್ತವೆ , ಇಂತಹ ಭಾವನೆಗಳು ತನ್ನ ಕುಟುಂಬದಲ್ಲಿ ಬೆಳೆದಿದ್ದರಿಂದ " ತೆರೆಸಾ " ಎಲ್ಲರಿಗೆ ತಾಯಿಯಾಗುವಂತ ಭಾಗ್ಯ ಪಡೆದರು. ಎಂದು ವಂದನೀಯ ಗುರುಗಳಾದ ಫಾ:ಎಂ. ಬಿ .ವಿನ್ಸೆಂಟ್ ಲಿಟ್ಲ ಪ್ಲವರ್ ಕಾನ್ವೆಂಟ್ ನಲ್ಲಿ, ಮದರ್ ತೆರೆಸಾ ಅವರ ಜನ್ಮ ಜಯಂತಿ ನಿಮಿತ್ತ ನಡೆದ ಪ್ರಾರ್ಥನಾ ಸಭೆಯಲ್ಲಿ ತಮ್ಮ ಪ್ರವಚನ ದಲ್ಲಿ ' ಸೇವೆ ' ಯಿಂದಾಗಿ ಧಾರ್ಮಿಕತೆ ಹೇಗೆ ಬೆಳೆಯುತ್ತದೆ ಎಂಬ ಬಗ್ಗೆ ಹೇಳಿದರು.
ತೆರೆಸಾ ತಮ್ಮ 15 ನೇ ವಯಸ್ಸಿ ನಿಂದಲೇ ಸಾಮಾಜಿಕ ಸೇವೆ ಸಲ್ಲಿಸಿದರು. ಇದು ಕುಟುಂಬದಲ್ಲಿ ಬೆಳೆಯುವಂತ ಪರಿಸರದಿಂದಾಗಿ ಆರಂಭವಾಗುತ್ತದೆ ಎಂದು ಅವರು ಮನವರಿಕೆ ಮಾಡಿದರು.ತೆರೆಸಾ' ಬಾಲ್ಯದಿಂದ ಸೇವೆ ಮಾಡುತ್ತಾ ಬಂದಿರುವುದರಿಂದ ಇಂದು ಅವರನ್ನು ಜಗತ್ತೇ ಕೊಂಡಾಡುವಂತಾಗಿದೆ, ಈ ಅನುಕರಣೆ ಕ್ರೈಸ್ತ ಸಮಾಜದಲ್ಲಿ ಮಾತ್ರ ಅಲ್ಲ ಯಾವುದೇ ಜಾತಿ, ಧರ್ಮ ಹೊರತಾಗಿ ಪ್ರತಿಯೊಬ್ಬರಲ್ಲಿ ಬರಬೇಕಿದೆ, ಅದಾಗ್ಯ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಆಗಬಹುದು ಎಂದರು. ಈ ಪ್ರಾರ್ಥನಾ ಕೂಟಕ್ಕೆ ಫಾ: ಭಗವಂತರಾಜ್, ಪಾ: ಪ್ರಾನ್ಸಿಸ್ ಮೈಕಲ್, ಪಾ: ನೆಲಸನ್ ಮೆನ್ಜೆಸ್, ಟಿ.ಬಿ.ಡ್ಯಾಂ ನಿಂದ ಪಾ: ಚಿನ್ನಪ್ಪ, ,ಕೂಡ್ಲಿಗಿಯಿಂದ ಪಾ: ಡಿಸೆಲ್ ರಾಜ್,ಪಾ: ಸ್ಟಿ ಪೆನ್, ಪಾ: ಪ್ರನ್ಸಿಸ್ ಸೇವಿಯರ್, ಮುಂತಾದವರು ಬಾಗವಹಿಸಿದ್ದರು.