ಬಳ್ಳಾರಿ,ಅ.27 ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪನಮನ ಸಲ್ಲಿಸಲಾಯಿತು. ಎಸ್ .ಪಿ.ಸಕ೯ಲ್ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಮಾತನಾಡಿದರು, ಮಹರ್ಷಿ ವಾಲ್ಮೀಕಿ ಅವರು ಮೊದಲಿಗೆ ಕಳ್ಳನಾಗಿದ್ದ ವಾಲ್ಮೀಕಿ ಒಬ್ಬ ಗುರುಗಳ ಮಾತುಗಳಿಂದ ಮನಪರಿವತ೯ನೆಗೊಂಡು, ನಾನು ಒಬ್ಬ ಒಳ್ಳೆಯ ವ್ಯಕ್ತಿಯಾಗಬೇಕೆಂದು ನಿಧಾ೯ರ ಮಾಡಿ, ಅವರದೇ ಆದ ಒಂದು ಪುಸ್ತಕವನ್ನು ಬರೆದರು, ಅದು ಈಗ ಹಿಂದೂ ಧರ್ಮದವರ ಪವಿತ್ರ ಗ್ರಂಥವಾಗಿ " ಸಂಪೂರ್ಣ ರಾಮಾಯಣ" ಎಂಬ ಗ್ರಂಥವಾಗಿ ಪ್ರಶಸ್ತಿ ಪಡೆಯಿತು. ಆಗೇ ಅವರ ತತ್ವಗಳು, ಚಿಂತೆನೆಗಳನ್ನು ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು, ಮತ್ತು ಅವರ ಆದರ್ಶಗಳನ್ನು ಪರಿಪಾಲನೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಘಟಕದ ಅಧ್ಯಕ್ಷರಾದ ಹೊನ್ನೂರು ಸ್ವಾಮಿ (ವಂಡ್ರಿ), ರಾಮಾಂಜೀನಿ, ಜಿಲ್ಲಾ ಕಾರ್ಯದರ್ಶಿ ಮಧುರೈ ವಿಜಯ್ ಕುಮಾರ್, ಮಹಿಳಾ ಅಧ್ಯಕ್ಷರಾದ ಪುಷ್ಪ, ಕಂಪ್ಲಿ ತಾಲ್ಲೂಕು ಅಧ್ಯಕ್ಷರಾದ ಮೇಘರಾಜ್, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ರವಿಕುಮಾರ್, ಅಶೋಕ್ ಸಂಗನಕಲ್ಲು, ರಮೇಶ್, ಬಾಷಾ, ಕಿರಣ್ ಕುಮಾರ್,ಬಸವ ಹವಂಬಾವಿ, ಹೊನ್ನೂರು ಅಲಿ, ದಿವಾಕರ್,ಜಮೀಲಾ ಬೇಗಂ, ಶಬಾನಾ, ರೆಹಮತ್,ಸ್ವಾತಿ, ಲಕ್ಷ್ಮೀ, ಇಂದಿರಾ, ಶಮೀಮ್ ಬಾನು, ಹಾಗೂ ಇತರ ಕಾಯ೯ಕತ೯ರುಗಳು ಉಪಸ್ಥಿತರಿದ್ದರು.