ಇಂಡಿ : ನಗರದ ನಿವೃತ್ತ ಸರಕಾರಿ ನೌಕರರ ಸಭಾಭವನದಲ್ಲಿ ಮಾಸಿಕ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ನೌಕರರನ್ನು ಸ್ವಾಗತಿಸಿ, ಸದಸ್ಯತ್ವವನ್ನು ನೀಡಲಾಯಿತು.
ನಿವೃತ್ತ ನೌಕರರಿಗೆ ನಗರದ ಸ್ಪಂದನ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಆರ್ ಟಿ ಕೊಳೇಕರ, ವಿನುತಾ ಬಿರಾದಾರ,ವಿದ್ಯಾ ಬೋರಗಿ,ಶ್ರೀಶೈಲ ನಂದೂರ ಹಾಗೂ ಪ್ರಹ್ಲಾದ್ ಇವರು ಎಲ್ಲ ನಿವೃತ್ತ ನೌಕರರಿಗೆ ಉಚಿತವಾಗಿ ಬಿಪಿ ಮತ್ತು ಶುಗರ್ ಪರೀಕ್ಷಿಸಿ,ಸಲಹೆ ಸೂಚನೆಗಳನ್ನು ನೀಡಿ, ಸಂಬಂಧ ಪಟ್ಟವರಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸಿದರು.
ಸಭೆಯಲ್ಲಿ ಕಾರ್ಯದರ್ಶಿ ಎಸ್ ವಿ ಹೂಗಾರ ಎಲ್ಲರನ್ನೂ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಕೆ ವಿ ಪಾಟೀಲ, ಆರ್ ಬಿ ಹೊಸಮನಿ, ಆರ್ ಎಂ ಮೇತ್ರಿ, ಜಿ ಎಸ್ ವಾಲಿ, ಸಿ ಎಂ ಉಪ್ಪಿನ, ಎಚ್ ಎಸ್ ಗೋಟ್ಯಾಳ, ನೂತನ ಸದಸ್ಯರಾದ ಆರ್ ವಿ ಪಾಟೀಲ, ಜಿ ಜಿ ಬರ್ಡೋಲ, ಎ ವಿ ಸಾಲಿಮಠ, ಕೆ ಜಿ ನಾಟೀಕಾರ ಹಾಗೂ ಎಸ್ ಎಸ್ ಅಂಗಡಿವಾಡಿ ಉಪಸ್ಥಿತರಿದ್ದರು.