LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮರೋಳ ಎತ್ತಿನೀರಾವರಿ ಪಶ್ಚಿಮ ಕಾಲುವೆಗೆ ನೀರು ಹರಿಸಲು ಆಗ್ರಹ: ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಹುನಗುಂದ; ನದಿ ಪಾತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರೂ ಮರೋಳ ಏತ ನೀರಾವರಿ ಜಾಕ್‌ವೆಲ್ ಮೂಲಕ ಪಶ್ಚಿಮ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಚಿತ್ತರಗಿ ಮತ್ತು ಗಂಗೂರ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.   ಪಟ್ಟಣದ ಕೃಷ್ಣಾ ಭಾಗ್ಯ ಜಲನಿಗಮ ಮರೋಳ ಏತ ನೀರಾವರಿ ಪಶ್ಚಿಮ ಕಾಲುವೆ ಕಚೇರಿಯಿಂದ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗೆ ಜಡಿದು ಪ್ರತಿಭಟನೆ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡ ಚಿತ್ತರಗಿ ಗ್ರಾಪಂ ಮಾಜಿ ಅಧ್ಯಕ್ಷ ಮಾಹಾಂತೇಶ ಬಾರಡ್ಡಿ ಮಾತನಾಡಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡಿ ರೈತರ ಬದುಕು ಹಸಿರಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾದ ಈ ನೀರಾವರಿ ಯೋಜನೆಯು ಅಧಿಕಾರಿಗಳ ನಿರ್ಲಕ್ಷದಿಂದ ರೈತಾಪಿ ವರ್ಗ ಬೇಸತ್ತಿದ್ದಾರೆ. ಈ ಯೋಜನೆಯನ್ನು ನಂಬಿ ರೈತರು ಸಾಕಷ್ಟು ಖರ್ಚು ಮಾಡಿ ಕೃಷಿ ಚಟುವಟಿಕೆ ಮತ್ತು ಬಿತ್ತನೆ ಮಾಡಿದ ಬೆಳೆಗಳು ನೀರಲ್ಲದೆ ಒಣಗುತ್ತಿವೆ. ಅಧಿಕಾರಿಗಳ ನಿರ್ಲಕ್ಷದಿಂದ ೮ರಿಂದ ೧೬ನೇ ಕಿಮಿವರೆಗೆ ಮುದ್ದೇಬಿಹಾಳ ರಸ್ತೆಗೆ ಹೊಂದಿರುವ ಮುಖ್ಯ ಕಾಲುವೆಯಲ್ಲಿ ಹೂಳು ತುಂಬಿ, ಗಿಡಗಂಟೆಗಳು ಬೆಳೆದು ಕಾಲುವೆ ನೀರು ರೈತರ ಜಮೀನಿಗೆ ನುಗ್ಗಿ ಕೃಷಿ ಭೂಮಿ ಹಾಳಾಗುತ್ತಿವೆ ಎಂದು ಬಾರಡ್ಡಿ ಆರೋಪಿಸಿದರು.   ರೈತರ ಆಶಾದಾಯಕವಾಗಿರುವ ಮರೋಳ ಏತ ನೀರಾವರಿ ಯೋಜನೆಯಿಂದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದರು.
ರೈತ ಮುಖಂಡ ಮಲ್ಲಣ್ಣ ಬಿಸರಡ್ಡಿ ಮಾತನಾಡಿ ಕಾಲುವೆಗಳಲ್ಲಿ ಗಿಡಗಂಟಿ ಬೆಳೆದು, ಹೂಳು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮವಾಗಿ ಯೋಜನೆಯ ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ನೀರು ತಲುಪದೆ, ಮತ್ತೊಂದೆಡೆ ನೀರು ಪೋಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸಿ ರೈತರ ಬೆಳೆಗಳಿಗೆ ನೀರು ಒದಗಿಸುವಂತೆ ಕಳೆದ ಸೆಪ್ಟಂಬರ ೧೮ರಂದು ಇದೆ ಕಚೇರಿ ಮುಂದ ಪ್ರತಿಭಟನೆ ನಡೆಸಿದಾಗ ಎರಡು ದಿನಗಳಲ್ಲಿ ಕಾಲುವೆಗೆ ನೀರು ಹರಿಸುವದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೆ ಹನಿ ನೀರೂ ಕೂಡಿ ಹರಿಸಿರುವದಿಲ್ಲ. ಸ್ವಚ್ಛತೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ನೀರು ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆಯ ನೀರು ಕೊನೆಯ ಹಂತದ ಜಮೀನುಗಳಿಗೂ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
ಮಹಾಂತೇಶ ನಾಲತವಾಡ ಮಾತನಾಡಿ ನೀರಿನ ಅಸಮರ್ಪಕ ನಿರ್ವಹಣೆಯಿಂದ ಬೆಳೆಗಳಿಗೆ ತೊಂದರೆಯಾಗುತ್ತಿದ್ದು, ರೈತರು ಆರ್ಥಿಕ ಸಂಕ? ಎದುರಿಸುವಂತಾಗಿದೆ. ನೀರು ಪೋಲಾಗುವುದನ್ನು ತಡೆಯಲು ಕಾಲುವೆಗಳ ದುರಸ್ತಿ, ಸ್ವಚ್ಛತೆ ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.   ಮುತ್ತಪ್ಪ ನಾಲತವಾಡ, ಮಹಾಂತೇಶ ನಾಲತವಾಡ, ಮುತ್ತು ಕಾಮಾ, ಮಹಾಂತೇಶ ಚೌಡಾಪೂರ, ಲಕ್ಷ್ಮಣ್ಣ ಕೈರವಾಡಗಿ, ಹನಮಂತ ಹಾದಿಮನಿ, ಹನಮಂತ ಬಜಂತ್ರಿ, ಶಿವಾನಂದ ಹಾದಿಮನಿ,  ಶಿವು ಆಸಂಗಿ, ಮಾಜಿ ಸೈನಿಕರಾದ ಮಲ್ಲಪ್ಪ ದ್ಯಾವನಗೌಡ್ರ, ಸುದೀರ ಪಾಟೀಲ, ಸಂಗಣ್ಣ ಮಿಠ್ಠಲಕೋಡ ಸೇರಿದಂತೆ ಇತರರು ಭಾಗವಹಿಸಿದ್ದರು.   ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಬೇಕು, ಎಲ್ಲ ರೈತರ ಭೂಮಿಗೂ ಕಾಲುವೆ ನೀರು ಸರಾಗವಾಗಿ ಹರಿಯಬೇಕು. ಅಲ್ಲಿಯವರೆಗೆ ಕಚೇರಿಗೆ ಮತ್ತು ಮರೋಳ ಏತನೀರಾವರಿ ಜಾಕವೆಲ್‌ಗೆ ಬೀಜ ಜಡಿಯುತ್ತೇವೆ. ಪ್ರತಿಭಟನಕಾರರು.   ಮರೋಳ ಏತ ನೀರಾವರಿ ಕಾಲುವೆಯುದ್ದಕ್ಕೂ ಕೆಲವು ಕಡೆ ನೀರು ಸೋರಿಕೆ, ಹೂಳು ತುಂಬಿರುವದು, ಗಿಡಗಂಟೆಗಳು ಬೆಳೆದು ತೆಪ್ಪದಂತೆ ನಿಂತು ನೀರು ಹರಿಯದಿರುವದು ಹೀಗೆ ಹಲವಾಉ ಸಮಸ್ಯೆಗಳಿಂದ ಕಾಲುವೆ ಕೆಲ ಕಡೆ ಸಮರ್ಪಕವಾಗಿ ನೀರು ಹರಿಯಲು ತೊಂದರೆಯಾಗಿದೆ. ತಕ್ಷಣವೆ ಈ ಎಲ್ಲ ಸಮಸ್ಯೆಗಳಿಗೆ ಕ್ರಮ ಕೈಗೊಂಡು ಅ೮ರವಳಗೆ ಸಮರ್ಪಕ ನೀರು ಹರಿಸುತ್ತೇವೆ. ಮಂಜುನಾಥ ಗುತ್ತೇದಾರ ಸಹಾಯಕ ಅಭಿಯಂತರ  ಕೆಬಿಜೆಎನ್‌ಎಲ್ ಪಶ್ಚಿಮ ಕಾಲುವೆ ಹುನಗುಂದ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ