LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಸಂಗ್ರಹಿತ ಅಧಿಕೃತ ಲಿಂಗಾಯತ ಧರ್ಮದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಹಂಚಲಾಗುವುದು : ಡಾ.ಎಸ್ ಎಮ್ ಜಾಮದಾರ

​ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಆಯೋಜಿಸಲಾಗಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಸಂಬಂಧಿಸಿದಂತೆ ಮಹತ್ವದ ವಿಚಾರ ವಿನಿಮಯ, ಕೃತಿಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸತ್ಕಾರ ಕಾರ್ಯಕ್ರಮವು  ಬುಧವಾರ ( ೧೨/೦೮/೨೦೨೬) ಮಹಾಂತೇಶ ನಗರದ ಮಹಾಂತ ಭವನದಲ್ಲಿ "ಮಾಸಿಕ ಅನುಭಾವ ಗೋಷ್ಠಿ" ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

     ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ಶರಣೆ ಶ್ರೀದೇವಿ ನರಗುಂದ ಅವರು  " ನಿಜಸುಖಿ ಹಡಪದ ಅಪ್ಪಣ್ಣ" ಅವರ ವಿಷಯ ಮಂಡಿಸುತ್ತಾ, ೧೨ನೇ ಶತಮಾನದ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಶಿವಶರಣ ಹಡಪದ ಅಪ್ಪಣ್ಣನವರ ಜೀವನ ಹಾಗೂ ತತ್ತ್ವಗಳನ್ನು ಸ್ಮರಿಸಿದರು. "ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದವರಾದ ಹಡಪದ ಅಪ್ಪಣ್ಣನವರು ಶ್ರಮದ ಗೌರವ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಕಾಯಕದ ಮೂಲಕ ಎತ್ತಿಹಿಡಿದವರು. ಕಷ್ಟದ ಸಂದರ್ಭದಲ್ಲೂ ನಿಷ್ಠೆಯಿಂದ ಬದುಕನ್ನು ನಡೆಸಬೇಕು ಎಂಬುದು ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು. ಕಷ್ಟಪಟ್ಟು ದುಡಿಯುವ ಕಾಯಕಪ್ರಜ್ಞೆ, ಸತ್ಯ ಶುದ್ಧ ಕಾಯಕದಿಂದ ಬಂದ ಆದಾಯ ಮತ್ತು ದಾಸೋಹ ಭಾವನೆಗಳು ಅವರ ವೈಚಾರಿಕ ಬದುಕಿಗೆ ಆಧಾರವಾಗಿದ್ದವು. ಅಪ್ಪಣ್ಣನವರು ಅನುಭಾವ ಮಂಟಪದ ಅನುಭವೀ ಚೇತನರಾಗಿದ್ದಲ್ಲದೆ, ಜಗಜ್ಯೋತಿ ಬಸವಣ್ಣನವರ ನೆರಳಿನಂತೆ ನೆರವಾದ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನೆರವೇರಿಸಿದರು. ಶರಣರು ಇವರನ್ನು 'ನಿಜಸುಖಿ' ಎಂದು ಕೊಂಡಾಡಿದ್ದಾರೆ. ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಹಾಗೂ ಬಸವಣ್ಣನವರ ನೇತೃತ್ವದಲ್ಲಿ ನಡೆದ ಅನುಭವ ಮಂಟಪವು ಜಗತ್ತಿನ ಮೊದಲ ಪ್ರಜಾಪ್ರಭುತ್ವದ ಸಂಸತ್ತಾಗಿದ್ದು, ಬಸವಣ್ಣನವರು ೧೨ನೇ ಶತಮಾನದ ಸಂವಿಧಾನ ಶಿಲ್ಪಿಯಾಗಿದ್ದರು. ಈ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮೇಶ್ವರರು, ಮದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಅಮುಗೆ ರಾಯಮ್ಮ, ಕಾಯಕದ ಶರಣರು ಹಾಗೂ ಅವರ ಧರ್ಮಪತ್ನಿಯರೂ ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶವಿತ್ತು," ಎಂದು ಶರಣೆ ಶ್ರೀದೇವಿ ನರಗುಂದ ಅವರು ವಿಸ್ತೃತವಾಗಿ ತಿಳಿಸಿದರು.

news_1786620380_0_994.webp

 

     ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಗಳಾದ ಡಾ. ಜಾಮದಾರ ಅವರು ಮಾತನಾಡಿ, "ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹಾಸಭಾವು ನಿರಂತರವಾಗಿ ಶ್ರಮಿಸುತ್ತಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ಐತಿಹಾಸಿಕ ಹಾಗೂ ವೈಜ್ಞಾನಿಕ ಸಾಕ್ಷಾಧಾರಗಳನ್ನೊಳಗೊಂಡ ಸಮಗ್ರ ಮನವಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಸಂಗ್ರಹಿತ ಲಿಂಗಾಯತ ಧರ್ಮದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಹಂಚಲಾಗುವುದು," ಎಂದು ತಿಳಿಸಿದರು.

   ಇದೇ ಶುಭ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷರೂ ಹಾಗೂ ಜಾ.ಲಿಂ.ಮಹಾಸಭಾದ ಜಿಲ್ಲಾ ಪ್ರಧಾನ ಕಾಯ್ಯದರ್ಶಿಗಳಾದ ಶರಣ ಅಶೋಕ ಮಳಗಲಿ ಅವರು ರಚಿಸಿದ "ಲಿಂಗಾಯತ ಧರ್ಮದ ತ್ರಿವಿಧ ತತ್ವಗಳು" ಹಾಗೂಖಾನಾಪೂರ  ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಸಕರಾದ ಡಾ. ಅಡವೇಶ ಇಟಗಿ ಅವರು ರಚಿಸಿದ "ಬೆವರು ಹನಿ" ಕವನ ಸಂಕಲನ ಕೃತಿಗಳನ್ನು ವೇದಿಕೆಯಲ್ಲಿದ್ದ ಪೂಜ್ಯರು ಹಾಗೂ ಗಣ್ಯರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

    " ಬತ್ತಿದ ಕಣ್ಣುಗಳಲ್ಲಿ ಬತ್ತದ ಭರವಸೆ " ಎಂಬ ವಿಶೇಷ  ಪತ್ರಿಕಾ ವರದಿಗೆ  ರಾಜ್ಯ ಮಟ್ಟದ ಅತ್ಯುತ್ತಮ ಪತ್ರಿಕಾ ಪ್ರಶಸ್ತಿಗೆ ಭಾಜನರಾದ 'ಪ್ರಜಾವಾಣಿ' ಪತ್ರಿಕೆಯ ಉಪ ಸಂಪಾದಕರಾದ ಶರಣ ಸಂತೋಷ ಚಿನಗುಡಿ ಅವರನ್ನು ಹಾಗೂ ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ಶರಣೆ ಸರಳಾ ಹೇರೆಕರ ಅವರನ್ನು ಮಹಾಸಭಾದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಘನವಾಗಿ ಸತ್ಕರಿಸಲಾಯಿತು.

     news_1786620381_1_642.webp

     ಇಂದಿನ ಪ್ರಸಾದ ದಾಸೋಹಿಗಳಾದ ಶರಣ ಡಾ. ಅಡವೇಶ ಇಟಗಿ ಅವರು ಷಟ್ ಸ್ಥಲ ಧ್ವಜಾರೋಹಣ ನಡೆಸಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಬಸವರಾಜ ರೊಟ್ಟಿ ಅವರು ಮಾತನಾಡಿ, ಜಾಗತಿಕ ಲಿಂಗಾಯತ ಮಹಾಸಭಾವು ಸಮಾಜದ ಸಂಘಟನೆ ಹಾಗೂ ಶರಣ ತತ್ತ್ವಗಳ ಪ್ರಸಾರಕ್ಕಾಗಿ ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ವಿವಿಧ ಧಾರ್ಮಿಕ ಮತ್ತು ವೈಚಾರಿಕ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು.

    ​ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, "ಮಕ್ಕಳಲ್ಲಿ ವಚನ ಸಾಹಿತ್ಯ, ಶರಣ ಸಂಸ್ಕೃತಿ ಹಾಗೂ ವೈಚಾರಿಕ ಚಿಂತನೆಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಪೋಷಕರು ಇಂತಹ ಅನುಭಾವ ಗೋಷ್ಠಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ತಪ್ಪದೇ ಕರೆತಂದು, ಭಾಗವಹಿಸುವಂತೆ ಪ್ರೇರೇಪಿಸಬೇಕು," ಎಂದು ಕರೆ ನೀಡಿದರು.

       ಶರಣ ಎಸ್ ಜಿ. ಸಿದ್ನಾಳ ಅವರು ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶರಣೆ ವೀಣಾ ಮಠದ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭದಲ್ಲಿ ಮಹಾಸಭಾದ ಶರಣೆಯರು ವಚನ ಪ್ರಾರ್ಥನೆ ಮಾಡಿದರು. ಚಂದ್ರಪ್ಪ ಬೂದಿಹಾಳ ಮತ್ತು ಸುಜಾತಾ ಮತ್ತಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಶರಣೆ ಜಯಶ್ರೀ ನ್ಯಾಮಗೌಡ ಅವರು ಶರಣು ಸಮರ್ಪಣೆ ಸಲ್ಲಿಸಿದರು.

          ಕಾರ್ಯಕ್ರಮದಲ್ಲಿ  ಸುಜಾತಾ ಮತ್ತಿಕಟ್ಟಿ,ರತ್ನಾ ಬೆಣಚಮರ್ಡಿ,ಭಾಗ್ಯ ಶ್ರೀ ಬೆಣಚಮರ್ಡಿ,ಕಾವೇರಿ ಕಿಲಾರಿ.ಸುಲೋಚನಾ ವಸ್ತ್ರದ ಪ್ರೀತಿ ಮಠದ ರಾಜಶೇಖರ ಬೆಲ್ಲದ, ಪರುಶೆಟ್ಟಿ ದಂಪತಿ.ಚಂದ್ರಪ್ಪ ಬೂದಿಹಾಳ,ಎಫ್ ಆರ್ ಪಾಟೀಲ್ ,ಈರಣ್ಣ ಚಿನಗುಡಿ,ಮೋಹನ ಪಾಟೀಲ, ಪ್ರವೀಣಕುಮಾರ ಚಿಕಲಿ,ಬಸವರಾಜ ಮಿಂಡೋಳ್ಳಿ,ಕೆಂಪಣ್ಣ ರಾಮಾಪೂರಿ, ಶಂಕರ ಶೆಟ್ಟಿ, ಬಿ.ಡಿ. ಪಾಟೀಲ, ತ್ರಿವೇಣಿ ಪಾಟೀಲ,ಚೌಬಾರಿ ಸರ್,ಅನೂಷಾ  ಬಶೆಟ್ಟಿ,ಶೊಭಾ ಶಿವಳ್ಳಿ, ಸುರೇಶ ನರಗುಂದ, ಸುಧಾ ರೊಟ್ಟಿ, ಅಲ್ಲದೇ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ವಿವಿಧ ಬಡಾವಣೆಗಳ ಶರಣರು, ಸಮುದಾಯದ ಪ್ರಮುಖರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಲ್ಯಾಬ್ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಸೇರಿ ಗಣ್ಯರಿಂದ ಪೂಜೆ**ಶ್ರೀ ವರದ ಶಂಕರ ಪೂಜೆ ಮತ್ತು ಮಹಾಪ್ರಸಾದ**ರೈತರಿಂದ ಮತ್ತು ಬಿಜೆಪಿಯಿಂದ  ಲೋಡ್ ಶೆಡ್ಡಿಂಗ್ ವಿರೋಧಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ. ತನವ್ ಮೋಹನ್ ಗೆ ವರ್ಷದ ಕನ್ನಡಿಗ ಪ್ರಶಸ್ತಿರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪಿ.ಟಿ. ಪರಮೇಶ್ವರ ನಾಯ್ಕ ಪ್ರವಾಸಸಮಾಜ ಸಂಘಟನೆಯಲ್ಲಿ ಹಾನಗಲ್ ಕುಮಾರಸ್ವಾಮಿಗಳ ಕೊಡುಗೆ ಅನನ್ಯ-ಪ್ರೊ ಮಿಥುನ ಅಂಕಲಿ ಅಭಿಮತಬಳ್ಳಾರಿ: ಕಂಪ್ಲಿ ಮತ್ತು ಕುಡುತಿನಿ ವ್ಯಾಪ್ತಿಯ 3 ಗ್ರಾಮಗಳಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ - ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಮಾದಕ ವ್ಯಸನಮುಕ್ತ ಸಮಾಜದಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ: ಡಾ. ವೀರೇಂದ್ರ ಕುಮಾರ್ ಕರೆಗುಣಾತ್ಮ ಶಿಕ್ಷಣ, ಒಳ್ಳೆಯ ಸಂಸ್ಕಾರ ನೀಡುವುದು ಶಿಕ್ಷಕರ ಆಧ್ಯ ಕರ್ತವ್ಯ: ಶಾಸಕ ಂiಶವಂತರಾಯಗೌಡ ಪಾಟೀಲಬರ ಪೀಡಿತ ತಾಲೂಕು ಘೋಷಣೆ ಶೇ.೨೦೦ ಖಚಿತ-ಶಾಸಕ ನಾಡಗೌಡ