LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Belagavi

ಅಥಣಿ: ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ವಿಮಾ ಪರಿಹಾರ ಚೆಕ್ ಹಾಗೂ ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ


ಅಥಣಿ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಹಕಾರ ತತ್ವದ ಅಡಿಯಲ್ಲಿ ಗ್ರಾಹಕರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಸದಸ್ಯರ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಸೇವೆಯನ್ನು ನೀಡುತ್ತಾ ಭೂಮಿ ಆರ್. ಎನ್. ಎ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ವರ್ಷದಲ್ಲಿ ೨೧ ಲಕ್ಷ, ೨೦ ಸಾವಿರ ರೂ. ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ರಾವಸಾಹೇಬ ಐಹೊಳೆ ಹೇಳಿದರು. 
 ಅವರು ಪಟ್ಟಣದ ವೈಭವ ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಮಿ ಆರ್. ಎನ್. ಎ. ಸೌಹಾರ್ದ ಸಹಕಾರಿ ಸಂಘದ ನಾಲ್ಕನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸೌಹಾರ್ದ ಸಹಕಾರಿ ಸಂಘವು ೨೦೨೩ ರಲ್ಲಿ ಕೇವಲ ಮೂರು ನೂರು ಜನ ಸದಸ್ಯರ ಶೇರು ಬಂಡವಾಳದೊಂದಿಗೆ ಆರಂಭವಾಗಿ ಇಂದು ೧೧೦೮ ಜನ ಸದಸ್ಯರ ಬಲ ಹೊಂದಿದೆ. ೨೪ ಲಕ್ಷ ೨೩ ಸಾವಿರ ರೂ.ಶೇರು ಬಂಡವಾಳ ಹೊಂದಿದೆ.
ಸಂಘವು ೧೧ ಕೋಟಿ ೨೧ ಲಕ್ಷ ರೂ. ವಹಿವಾಟಿನೊಂದಿಗೆ ೧೦ ಕೋಟಿ ೧೫ ಲಕ್ಷ ರೂ. ಠೇವಣಿ ಸಂಗ್ರಹಿಸುವ ಗುರಿ ಮುಟ್ಟಿದ್ದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸು. ೯ ಕೋಟಿ ೪೧ ಲಕ್ಷ ರೂಪಾಯಿ ಸಾಲ ಸೌಲಭ್ಯವನ್ನು ವಿತರಿಸಲಾಗಿದೆ. ಸಾಲಮರುಪಾವತಿ ಕೂಡಾ  ಪ್ರಗತಿದಾಯಕವಾಗಿದ್ದು, ಸಂಘವು ಲೆಕ್ಕಪರಿಶೋಧನೆ ವರ್ಗೀಕರಣದಲ್ಲಿ "ಅ " ವರ್ಗದಲ್ಲಿ ಇರುವುದು ನಮ್ಮೆಲ್ಲರಿಗೆ ಸಂತಸ. 
 ನಮ್ಮ ಸಹಕಾರಿ ಸಂಘವು ತಾಲೂಕಿನ ತಾoವಶಿ ಗ್ರಾಮದಲ್ಲಿ ಎರಡನೇ ಶಾಖೆಯನ್ನು ಆರಂಭಿಸುವ ಮೂಲಕ ಗಣಕೀಕೃತ ಸೌಲಭ್ಯ ಹೊಂದಿದೆ, ಸಿ ಎಸ್ ಸಿ ಸೇವೆಯೊಂದಿಗೆ ಇ - ಸ್ಟ್ಯಾಂಪ್ ಸೌಲಭ್ಯವನ್ನು ಆರಂಭಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 
 ಉಪಾಧ್ಯಕ್ಷ ಸಚಿನ ಹಳ್ಳದಮಳ ಮಾತನಾಡಿ ನಮ್ಮ ಸೌಹಾರ್ದ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದುವ ಮೂಲಕ ಸಾಲ ಸೌಲಭ್ಯ ಪಡೆದುಕೊಂಡಿರುವ ಸದಸ್ಯರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಜೀವ ವಿಮೆ ಮತ್ತು ಕ್ರೆಡಿಟ್ ಎಕ್ಸೆಸ್ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಳೆದ ವರ್ಷ ಸಾಲಗಾರರ ಮರಣದ ನಂತರ ಅವರ ವಾರಸುದಾರರಿಗೆ ವಿಮೆ ಹಣವನ್ನು ವಿತರಿಸಲಾಗಿದ್ದು,  ಈ ಬಾರಿಯೂ ರಾಜೇಂದ್ರ ಮನೋಹರ ಕೋರೆ ಅವರ ವಾರಸುದಾರರಿಗೆ ೫೦ ಸಾವಿರ ರೂ ಪರಿಹಾರ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.
 ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ ಮಾತನಾಡಿ ಸಹಕಾರಿ ಸಂಘವು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಪ್ರಗತಿಯತ್ತ ಮುಂದೆ ಸಾಗುತ್ತಿದೆ. ಸಹಕಾರಿ ಸಂಘದ ಮೂಲಕ ಇನ್ನಷ್ಟು ಆರ್ಥಿಕ ನೆರವು ಮತ್ತು ಸಾಮಾಜಿಕ ಸೇವೆಗಳು ನಿರಂತರವಾಗಿ ಜರುಗಲಿ ಎಂದು ಶುಭ ಹಾರೈಸಿದರು. 
 ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ದತ್ತಾ ವಾಸ್ಟರ್, ನ್ಯಾಯವಾದಿ ಎನ್ ಕೆ ಪಾಟೀಲ, ಮಹಾಂತೇಶ ಕವಲಾಪುರೆ ಮಾತನಾಡಿದರು.  
ಇದೇ ಸಂದರ್ಭದಲ್ಲಿ ವಿವಿಧ ಶಾಲೆಯ ಬಡ ವಿದ್ಯಾರ್ಥಿಗಳಿಗೆ  ಸಂಘದಿಂದ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. 
 ಸಮಾರಂಭದಲ್ಲಿ ಸಹಕಾರಿ ಸಂಘದಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಆಕಸ್ಮಿಕ ಮೃತಪಟ್ಟ ಗ್ರಾಹಕರ ವಾರಸುದಾರರಿಗೆ ಸಾಲವಿಮೆ ಪರಿಹಾರದ ಚೆಕ್ ವಿತರಿಸಲಾಯಿತು. ಸಕಾಲಕ್ಕೆ ಸಾಲಮರು ಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸುತ್ತಿರುವ ಸದಸ್ಯರಿಗೆ, ಠೇವಣಿದಾರರಿಗೆ ಸನ್ಮಾನಿಸಲಾಯಿತು. 
 ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರಾದ ಅಶೋಕ ಮಾನೆ, ಬೀರಪ್ಪ ಯಕ್ಕಂಚಿ, ಬಸವರಾಜ ಹಳ್ಳದಮಳ, ಫಿರೋಜ್ ಕೆಮಲಾಪುರ, ವಿಜಯ ಕುಮಾರ ಗಡದೆ, ಅಪ್ಪಾಸಾಬ ವಾಘಮೋರೆ, ಖಾನಸಾಬ ಚೌದರಿ, ಶಂಕರ್ ಪೂಜಾರಿ, ಅಶೋಕ ಕಟಗೇರಿ, ಇರಾವತಿ ಕವಲಾಪುರಿ, ವಿದ್ಯಾ ಐಹೊಳೆ, ಬಸವರಾಜ ಹೊಸಳೆ, ಕಾರ್ಯ ನಿರ್ವಾಹಕ ಶ್ರೀಧರ ಮಿರಜಕರ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಹಾಗೂ ಸಹಕಾರಿ ಸಂಘದ ಸದಸ್ಯರು, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು  ಉಪಸ್ಥಿತರಿದ್ದರು. ಅನಿಲ ಪಾಟೀಲ ಸ್ವಾಗತಿಸಿದರು, ಅಪ್ಪಾಸಾಬ ಲಖಗೌಡರ ನಿರೂಪಿಸಿದರು. ಶ್ರೀಧರ ಮಿರಜಕರ ವಂದಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವನ್ಯಜೀವಿಗಳಿಗೂ ಮಾನವರಂತೆ ಮನಸ್ಸಿದೆ, ಅವುಗಳನ್ನು ಪ್ರೀತಿಸೋಣ: ಡಿಎಫ್‌ಒ ಮಲ್ಲಿನಾಥ ಕುಸನಾಳದೈನಂದಿನ ಜೀವನದಲ್ಲಿ ಪ್ರಾಣಾಯಾಮದಿಂದ ಆರೋಗ್ಯ ಮತ್ತು ಮನಃಶಾಂತಿ: ಅಮೃತಾಂನಂದ ಮಹಾಸ್ವಾಮಿಗಳ ಬೋಧನೆಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ 59ನೇ ಜನ್ಮದಿನದ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಶಿಬಿರಕೊಪ್ಪಳದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದ ಸಾಮೂಹಿಕ ಪಿಂಡ ಪ್ರದಾನ ಹಾಗೂ ಪಿತೃ ತರ್ಪಣಬಳ್ಳಾರಿಯ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ  11ನೇ ವರ್ಷದ ಶರನ್ನವರಾತ್ರಿ ಉತ್ಸವ ಇಂದು ಹನುಮಾನ್ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಮೂಳೆಯ ಗುಣಮಟ್ಟ ಕಡಿಮೆ ಇರುವ ರೋಗಿಗಳಲ್ಲಿ ಆಂಕರ್‌ರಹಿತ ರಿಪೇರ್‌ಗೆ ನೆರವಾಗುವ ಸಾಧನ ಅಭಿವೃದ್ಧಿಹೊಸಪೇಟೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಗ್ರಾಮೀಣ ಕ್ರೀಡೆಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ: ಶಾಸಕ ವಿಶ್ವಾಸ ವೈದ್ಯಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇ?ರು: ಧರೆಪ್ಪ ಸಾಂಗ್ಲೀಕರ