LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Vijayanagara

*ನಿವೃತ್ತ ಕಾರ್ಮಿಕರ ಹೆಚ್ಚುವರಿ ಪಿಂಚಣಿ: ಅಗತ್ಯ ದಾಖಲೆ ಸಲ್ಲಿಸಿದ ಬಳಿಕ ಕ್ರಮ — ಪ್ರವೀಣ್*

ವಿಜಯನಗರ  : ನಿವೃತ್ತ ಕಾರ್ಮಿಕರ ಹೆಚ್ಚುವರಿ ಪಿಂಚಣಿ ಕುರಿತು ಆಡಳಿತ ವರ್ಗದಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಪ್ರಾಂತದ ಭವಿಷ್ಯ ನಿಧಿ ಆಯುಕ್ತ ಪ್ರವೀಣ್ ತಿಳಿಸಿದರು.
ಸಂಡೂರು ತಾಲೂಕಿನ ದೋಣಿಮಲೆಯಲ್ಲಿ ಸೆ.19ರಂದು ನಡೆದ ಎನ್‌ಎಂಡಿಸಿ ನಿವೃತ್ತ ನೌಕರರ ಕಾರ್ಮಿಕರ ಕಲ್ಯಾಣ ಸಂಘ (ಕರ್ನಾಟಕ)ದ 12ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳ ಆಗಮನದ ಬಳಿಕ ಕೆ. ವೀರಣ್ಣ ಅವರ ಪ್ರಾರ್ಥನಾ ಗೀತೆಯೊಂದಿಗೆ ಸಭೆ ಆರಂಭವಾಯಿತು. ಸಂಘದ ಅಧ್ಯಕ್ಷ ಎಂ.ಸಿ. ಜೈನ್ ಸ್ವಾಗತಿಸಿದರು. ಉಪಾಧ್ಯಕ್ಷ ಡಿ.ಎಸ್. ವೇಲು ಅವರು ಸಂಘದ ಕಾರ್ಯಚಟುವಟಿಕೆಗಳು, ಪ್ರಗತಿ ಹಾಗೂ ಆಡಳಿತ ವರ್ಗದಿಂದ ದೊರೆಯುತ್ತಿರುವ ಸಹಕಾರದ ಕುರಿತು ವಿವರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಾಥ್ ಅವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಸಭೆಯ ಅನುಮೋದನೆ ಪಡೆದರು. ಬಳಿಕ ಸಂಘದ ಕಾರ್ಯದರ್ಶಿ ಆರ್.ಜಿ. ಮಲ್ಲಿಕಾರ್ಜುನ ಅವರು ನಿಧನರಾದ ನಿವೃತ್ತ ಕಾರ್ಮಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ನಡೆಸಿದರು.
2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದ ಮಲ್ಲಿಕಾರ್ಜುನ ಅವರು, ಹೆಚ್ಚುವರಿ ಪಿಂಚಣಿ ಪಡೆಯುವ ಕುರಿತು ಭವಿಷ್ಯ ನಿಧಿ ಕಚೇರಿಯಿಂದ ಅಗತ್ಯ ಮುಜರಾಯಿ/ಅನುಮೋದನೆ ಸಂಬಂಧಿತ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
ಸಂಘದ ಖಜಾಂಚಿ ವೀರಭದ್ರಪ್ಪ ಅವರು 2025-26ನೇ ಸಾಲಿನ ವಾರ್ಷಿಕ ಆಯವ್ಯಯ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.
ದೋಣಿಮಲೆ ಕಬ್ಬಿಣ ಅದಿರು ಗಣಿಯ ಮುಖ್ಯ ವ್ಯವಸ್ಥಾಪಕ ಪಿ. ರಾಮಯ್ಯನ್ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ನಿವೃತ್ತ ಕಾರ್ಮಿಕರು ಸಲ್ಲಿಸಿದ ಸೇವೆ ಹಾಗೂ ಶ್ರಮವನ್ನು ಸ್ಮರಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಪಿ. ರಾಮಯ್ಯನ್ ಹಾಗೂ ಮಹಾಪ್ರಬಂಧಕ (ಮಾನವ ಸಂಪನ್ಮೂಲ) ಜಿ. ವೇಲುವಸಂತನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
75 ವರ್ಷ ಪೂರೈಸಿದ ಹಿರಿಯ ನಿವೃತ್ತ ಕಾರ್ಮಿಕರನ್ನು ಸಹ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯ ಕೆ.ಟಿ. ಸೋಮಶೇಖರ್ ಅವರು ರಾಷ್ಟ್ರೀಯ ಸಂಘರ್ಷ ಸಮಿತಿಯ ಹೋರಾಟದ ರೂಪುರೇಷೆಗಳ ಕುರಿತು ವಿವರಿಸಿದರು. ಕಾರ್ಮಿಕ ಮುಖಂಡರಾದ ಕರಿಬಸಪ್ಪ ಹಾಗೂ ಕೆ. ತಿಪ್ಪೇಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ಜಂಟಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.
ಕೊನೆಯಲ್ಲಿ ಸಂಘದ ಕಾರ್ಯದರ್ಶಿ ಆರ್.ಜಿ. ಮಲ್ಲಿಕಾರ್ಜುನ ವಂದನಾರ್ಪಣೆ ಸಲ್ಲಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಕಂಗ್ರಾಳಿ ಕೆ.ಎಚ್‌ನಲ್ಲಿ ₹20 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ–ರುಕ್ಮಾಯಿ ಮಂದಿರದ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ*      ಚೆನ್ನೈನಲ್ಲಿ ನಡೆಯುವ  ರಾಷ್ಟ್ರಮಟ್ಟದ " ವುಶು" ಚಾಂಪಿಯನ್ಶಿಪ್ ಗೆ _ಜಿಲ್ಲೆಯ 5 ಪಟುಗಳು ಅಯ್ಕೆ .ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ ‘ಪ್ರಜಾಸೇವೆ': ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ.ಬಳ್ಳಾರಿಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ ಸುಸೂತ್ರ: ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಖುದ್ದು ಭೇಟಿ, ಪರಿಶೀಲನೆಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿ ಚಾಂದಿನಿ ನೇಮಕಸಹಕಾರಿಗಳ ಸಹಕಾರವೇ ಸಹಕಾರ ಚಳವಳಿಯ ಯಶಸ್ವಿ : ಶ್ರೀಮತಿ ಪಲ್ಲೇದ ಮೈತ್ರಿ ಕೊಣ್ಣೂರ ಗ್ರಾಮ ಅಭಿವೃದ್ದಿ ಕುರಿತು ಡಿಸಿ, ಸಿಇಓ ಜಂಟಿ ಸಭೆ ೭೨ ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ ಶಾಸಕ ಜೆ.ಟಿ.ಪಾಟೀಲ