ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದ ಶ್ರೀ ಸಿದ್ದ ಶಂಕರಾನಂದ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ರೂಪದಲ್ಲಿ ಪ್ರೋತ್ಸಾಹಧನ ನೀಡಿ ಮಾತನಾಡಿದ ಅವರು, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಮುಂದಿನ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಗ್ರಾಮದ ಹೆಸರು ಹಾಗೂ ಸಂಸ್ಥೆ ಹೆಸರು ತರುವುದರ ಜೊತೆಗೆ ತಂದೆ-ತಾಯಿಗಳ ಕನಸನ್ನು ನನಸು ಮಾಡಬೇಕು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮದು, ಕಲಾವತಿ, ಪ್ರಿಯಾಂಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆ ಆಡಳಿತ ಸದಸ್ಯರಾದ ಎಲ್.ವಿ.ಕುಲಕರ್ಣಿ. ಭೀಮಣ್ಣ ಹೇರೂರ, ಅಲ್ಲಿಸಾಬ ಬಂಕಲಗಿ, ಡಾ.ಸಂಗು ಅಗಸರ, ಶಾಂತು ಮರಡಿ, ಗುರುರಾಜ ಕುಲಕರ್ಣಿ, ಕಾಳಪ್ಪ ಅಗಸರ, ರಾಮಣ್ಣ ಬಲುಂಡಗಿ, ಮುಖ್ಯಗುರು ಅರುಣ ನಾಯ್ಕೋಡಿ, ದಾನಮ್ಮ ಶಿಂಪಿ, ರಾಜು ಯಡ್ರಾಮಿ, ಅಶ್ವೀನಿ ಲಮಾಣಿ ಸೇರಿದಂತೆ ಪಾಲಕರು ಇದ್ದರು
