ಬೆಂಗಳೂರು, : ಕರ್ನಾಟಕದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಮುಂದೇನು ಮಾಡೋದಪ್ಪ ಎನ್ನುವ ಗೊಂದಲ ಇತ್ತು. ಕಳೆದ ವರ್ಷದಿಂದ ಮೂರು ಮೂರು ಸಲ ಪರೀಕ್ಷೆ ಬರೆಯುವ ಅವಕಾಶ ಶಿಕ್ಷಣ ಇಲಾಖೆ ಕಲ್ಪಿಸಿ ಕೊಟ್ಟಿತ್ತು. ಇಷ್ಟಾದರೂ ಫಲಿತಾಂಶದಲ್ಲಿ ಅಂತಹ ವ್ಯತ್ಯಯ ಏನು ಕಂಡು ಬಂದಿಲ್ಲ. ಇದೇ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ದೂರ ಇರಬಾರದು ಎಂದು ರಾಜ್ಯ ಶಿಕ್ಷಣ ಇಲಾಖೆ ಹೊಸ ಪ್ಲಾನ್ ಮಾಡಿದ್ದು, ಅನುತ್ತೀರ್ಣರಾದವರು ಕೂಡ ಶಾಲೆಗೆ ಹೋಗಬಹುದಾಗಿದೆ. ಈ ವರ್ಷದಿಂದ ಎಸ್ಎಸ್ಎಲ್ ಸಿ ಸೇರಿದಂತೆ ಪ್ರೌಢ ಶಿಕ್ಷಣದವರೆಗೆ ವಿದ್ಯಾರ್ಥಿಗಳು ಫೇಲ್ ಆದರೂ ಸಹ ಮುಂದಿನ ತರಗತಿಗೆ ಹೋಗಲು ಮತ್ತೆ ಅವಕಾಶ ನೀಡಲು ಇಲಾಖೆ ಮುಂದಾಗಿದೆ. ಈ ಮೂಲಕ ಆಂಧ್ರ ಪ್ರದೇಶದ ಮಾದರಿ ಅನುಸರಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ಲಾನ್ ಮಾಡಿದೆ.
SSLC, PUC ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್; ಫೇಲ್ ಆದರೂ ಮುಂದಿನ ತರಗತಿಗೆ ಅವಕಾಶ
ಹೌದು.. SSLC, ದ್ವಿತೀಯಪಿಯುಸಿ ಫೇಲಾದ್ರು ದಾಖಲಾತಿ ನೀಡಲು ಮುಂದಾಗಿದೆ. ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ವಿನೂತನ ಪ್ರಯತ್ನವಾಗಿದೆ. ಪ್ರತೀ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಮೊಟಕುಗೊಳಿಸ್ತಾರೆ. ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಬಾರದು ಎಂದು ಈ ವಿಶೇಷ ಮಾದರಿಯನ್ನು ಜಾರಿಗೆ ತರಲು ಚಿಂತನೆ ಮಾಡಲಾಗಿದೆ.