ಕೆಮಿಸ್ಟ್ರಿ ಆಫ್ ಕರಿಯಪ್ಪ ಸೂತ್ರಧಾರ ಕುಮಾರ್ ನಿರ್ದೇಶನದ ಹೊಸ ಚಿತ್ರ   ಲವ್ ಯೂ ಮುದ್ದು 

Ravi Talawar
ಕೆಮಿಸ್ಟ್ರಿ ಆಫ್ ಕರಿಯಪ್ಪ ಸೂತ್ರಧಾರ ಕುಮಾರ್ ನಿರ್ದೇಶನದ ಹೊಸ ಚಿತ್ರ   ಲವ್ ಯೂ ಮುದ್ದು 
WhatsApp Group Join Now
Telegram Group Join Now
     ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಕುಮಾರ್ ಈಗ ಹೊಸ ಸಿನಿಮಾ ಘೋಷಿಸಿದ್ದಾರೆ. ಕುಮಾರ್‌ ಅವರ ಹೊಸ ಪ್ರಯತ್ನಕ್ಕೆ ‘ಲವ್ ಯೂ ಮುದ್ದು’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.
     ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ. ಮಹಾರಾಷ್ಟ್ರದಲ್ಲಿ ನಡೆದ  ಪ್ರೇಮದ   ಘಟನೆಯನ್ನು ಕುಮಾರ್ ಅವರು ಸಿನಿಮಾ ರೂಪಕ್ಕಿಳಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
     ‘ಲವ್ ಯೂ ಮುದ್ದು’ ಸಿನಿಮಾದಲ್ಲಿ ನಾಯಕನಾಗಿ ಸಿದ್ದು ನಟಿಸುತ್ತಿದ್ದು, ನವನಟಿ ರೇಷ್ಮಾ ನಾಯಕಿಯಾಗಿದ್ದಾರೆ. ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
     ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ 45 ದಿನಗಳ ಶೂಟಿಂಗ್ ನಡೆಸಲಾಗಿದೆ. ಕಿಶನ್ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಕಿಶನ್ ಟಿಎನ್ ‘ಲವ್ ಯೂ‌ ಮುದ್ದು’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ  ಲಕ್ಷ್ಮಿಕಾಂತ್ ಟಿಎಸ್ ಸಾಥ್ ಕೊಟ್ಟಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿಎಸ್ ದೀಪು ಸಂಕಲನ ಚಿತ್ರಕ್ಕಿದೆ.
WhatsApp Group Join Now
Telegram Group Join Now
Share This Article