ಮೋದಿ ನೇತೃತ್ವದ ಹೊಸ ಸರ್ಕಾರ ಒಂದು ವರ್ಷದಲ್ಲಿ ಪತನ: ಸಂಜಯ್ ಸಿಂಗ್

Ravi Talawar
ಮೋದಿ ನೇತೃತ್ವದ ಹೊಸ ಸರ್ಕಾರ ಒಂದು ವರ್ಷದಲ್ಲಿ ಪತನ: ಸಂಜಯ್ ಸಿಂಗ್
WhatsApp Group Join Now
Telegram Group Join Now

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಒಂದು ವರ್ಷದಲ್ಲಿ ಪತನವಾಗಲಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಭಾನುವಾರ ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಸರ್ಕಾರ ಆರು ತಿಂಗಳಿಂದ ಒಂದು ವರ್ಷದ ಅವಧಿಯನ್ನು ಹೊಂದಿದೆ. ಇದು ಇದಕ್ಕಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದರು.

ಒಂದು ಎನ್‌ಡಿಎ ಸರ್ಕಾರ ಕೇವಲ 13 ದಿನಗಳ ಕಾಲ ಮತ್ತು ಇನ್ನೊಂದು 13 ತಿಂಗಳೊಳಗೆ ಪತನಗೊಂಡ ಉದಾಹರಣೆಗಳನ್ನು ಉಲ್ಲೇಖಿಸಿದ ಸಂಜಯ್ ಸಿಂಗ್, ಕೇಂದ್ರದ ಹೊಸ ಸರ್ಕಾರವು ಇದೇ ರೀತಿಯ ಭವಿಷ್ಯ ಹೊಂದಿದೆ. ಮೋದಿ ಎನ್ ಡಿಎ ಮಿತ್ರಪಕ್ಷಗಳ ಆಶೋತ್ತರ ಈಡೇರಿಸಲ್ಲ. ಅವರು ರಾಜಕೀಯ ಪಕ್ಷಗಳನ್ನು ಒಡೆಯುವ ತಮ್ಮ ಧೋರಣೆಯನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.

ಟಿಡಿಪಿ ಮತ್ತು ಜೆಡಿಯುಗೆ ಹೇಳಬಯಸುತ್ತೇನೆ, ನೀವೇ ಸ್ಪೀಕರ್ ಮಾಡಿ, ಇಲ್ಲದಿದ್ದರೆ ನಿಮ್ಮ ಪಕ್ಷದ ಎಷ್ಟು ಸಂಸದರು ಪಕ್ಷ ತ್ಯಜಿಸಿ ಬಿಜೆಪಿ ಸೇರುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಸಿಂಗ್ ಹೇಳಿದರು. ಮೋದಿ 2.0 ಸಂಪುಟದ ಎಲ್ಲ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ರಾಷ್ಟ್ರಪತಿ ಭವನದಲ್ಲಿ ಸಂಪುಟ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

WhatsApp Group Join Now
Telegram Group Join Now
Share This Article