ಕಾರ್ಖಾನೆಯ ಪುನಶ್ಚೇತನ ಕುರಿತು ಚರ್ಚೆ ನಡೆಸಿದ ನೂತನ ನಿರ್ದೇಶಕರು

Ravi Talawar
ಕಾರ್ಖಾನೆಯ ಪುನಶ್ಚೇತನ ಕುರಿತು ಚರ್ಚೆ ನಡೆಸಿದ ನೂತನ ನಿರ್ದೇಶಕರು
WhatsApp Group Join Now
Telegram Group Join Now
ಎಂ.ಕೆ.ಹುಬ್ಬಳ್ಳಿ: ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪ್ಯಾನಲ್‌ನ ನಿರ್ದೇಶಕರು ಮಂಗಳವಾರ ಸಭೆ ಸೇರಿ ಕಾರ್ಖಾನೆಯ ಪ್ರಸ್ತುತ ಸ್ಥಿತಿ ಮತ್ತು ಪುನಶ್ಚೇತನ ಕುರಿತು ಚರ್ಚಿಸಿದರು.
ನೂತನ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು.ಮೊದಲು ವಿಘ್ನ ವಿನಾಶಕ ಶ್ರೀ ಗಣಪತಿ ಹಾಗೂ ಈ ಭಾಗದ ಶಕ್ತಿದೇವತೆ ಶ್ರೀ ಬಂಡೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಾಯಿತು.
ನಂತರ ಕಾರ್ಖಾನೆಯ ಎಲ್ಲ ವಿಭಾಗಗಳಿಗೆ ತೆರಳಿ ಪ್ರಸ್ತುತ ಸ್ಥಿತಿಗತಿಗಳ ಕುರಿತು  ಪರಿಶೀಲನೆ ನಡೆಸಲಾಯಿತು.ಮುಂದಿನ ಹಂಗಾಮಿಗೆ ಸಂಬಂಧಿಸಿದಂತೆ ಸಮಗ್ರ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆ ನಡೆಸಿ, ಕಾರ್ಖಾನೆಯ ಪುನಶ್ಚೇತನದ ಕುರಿತಂತೆ ಚರ್ಚಿಸಲಾಯಿತು.
WhatsApp Group Join Now
Telegram Group Join Now
Share This Article