ನೇಸರಗಿ,04. ಇಲ್ಲಿನ ಪ್ರತಿಷ್ಠಿತ ಶ್ರೀ ವೀರಭದ್ರೇಶ್ವರ ದೇವರ ಪ್ರತಿವರ್ಷದಂತೆ ನಡೆಯುವ ಜಾತ್ರಾ ಮಹೋತ್ಸವವು ಮೇ 13 ರಿಂದ ಮೇ 17 ರ ವರೆಗೆ ನಡೆಯಲಿದ್ದು, ಅಂದು ಬೆಳಿಗ್ಗೆ ರುದ್ರಾಭಿಷೇಕ, ಸಹಸ್ರ ಭೀಲ್ವಾರ್ಚನೆ, ಮಹಾಪ್ರಸಾದ, 4 ಗಂಟೆಗೆ ಕಳಸರೋಹಣ ನೆರವೇರುವದು. ಮೇ 14 ರಂದು ಗ್ರಾಮದ ವತಿಯಿಂದ ಉಡಿ ತುಂಬುವದು,4 ಗಂಟೆಗೆ ನೇಸರಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹುಲೊಳ್ಳಿಹಟ್ಟಿಯ ಅಡವಿ ಸಿದ್ದೇಶ್ವರ ನಾಟ್ಯ ಸಂಗದಿಂದ ರಾಧಾ ಕೃಷ್ಣ ಬೈಲಾಟ ನಡೆಯಲಿದೆ.
ಮೇ 15 ರಂದು ಬೆಳಿಗ್ಗೆ 7 ಕ್ಕೆ ನೇಸರಗಿ ಮಲ್ಲಾಪುರ ಕೆ ಏನ್ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಹಣಬರಹಟ್ಟಿ ಹಿರೇಮಠದ ಬಸವಲಿಂಗ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ಡಾ. ಎಸ್ ಬಿ. ಗೆಜ್ಜಿ ಕುಟುಂಬದವರಿಂದ ನೆರವೇರುವ ಉಚಿತ ರವಿ ಗುಗ್ಗಳೋತ್ಸವ ನೆರವೇರುವದು. ಈ ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಕಲ್ಲೋಳಿ ಪಟ್ಟಣದ ಹಾಗೂ ನೇಸರಗಿ ಪುರವಂತರಿಂದ ಮತ್ತು ಜೈ ಹನುಮಾನ ಮಜಲ್ ಇವರಿಂದ ಒಡಪು, ವಿರಾಗಾಷೆ ವಿಶೇಷ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರುವದು.
ಮಹಾ ರಥೋತ್ಸವ ಬರುವ ಹಾದಿಯಲ್ಲಿ ರಂಗೋಲಿ ಬಿಡಿಸಿ ಮದ್ಯಾನ 3 ಗಂಟೆಗೆ ಮಹಾ ರಥೋತ್ಸವ ಅದ್ದೂರಿಯಾಗಿ ಜರುಗುವದು.ಅಂದು ರಾತ್ರಿ 9 ಕ್ಕೆ ನೇಸರಗಿ ಗೆಳೆಯರ ಬಳಗ ಮತ್ತು ರಾಘವೇಂದ್ರ ಯುತ್ ಕ್ಲಬ ನೇಸರಗಿ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಮಂದಿರ ಪ್ರೌಢಶಾಲಾ ಆವರಣದಲ್ಲಿ ರೋಣ ತಾಲೂಕಿನ ಕೊತಬಾಳ ಗ್ರಾಮದ ಜೀವನ ಜ್ಯೋತಿ ಜಾನಪದ ವೈವಿದ್ಯಮಯ ಕಲಾ ತಂಡದಿಂದ ಜಾನಪದ ಸಂಜೆ ಜರಗುತ್ತದೆ.ಮೇ 16 ರಂದು ಸಂಜೆ 6 ಗಂಟೆಗೆ ವಿದ್ಯಾಮಂದಿರ ಪ್ರೌಢ ಶಾಲೆಯಲ್ಲಿ ರತಿಕಾ ನೃತ್ಯ ನಿಕೇತನ ವಿಧುಷಿ ಶ್ರೀಮತಿ ನಾಗರತ್ನ ಹಡಗಲಿ ಇವರ ವಿದ್ಯಾರ್ಥಿಗಳಿಂದ ಭರತ ನಾಟ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಲಿವೆ.
ಮೇ 17 ರಂದು ಸಂಜೆ 6 ಕ್ಕೆ ಕಳಸ ಇಳಿಸುವದು, ಗುಡಿ ಓಣಿಯ ಹುಡುಗರಿಂದ ಲಕ್ಷ ದೀಪೋತ್ಸವ ನಡೆಯಲಿದೆ. ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯಲಿದ್ದು, ಮೇ 15 ರಂದು ನಡೆಯುವ ಉಚಿತ ರವಿ ಗುಗ್ಗುಳೋತ್ಸವದಲ್ಲಿ ಪಾಲ್ಗೊಳುವವರು ದಿ.12-05-2024 ರ ಒಳಗಾಗಿ ಕಮಿಟಿ ಪುರವಂತರನ್ನು ಸಂಪರ್ಕಿಸಿರಿ ಮೊಬೈಲ್ ನಂ.9535883527/7026211363 ಇವರನ್ನು ಸಂಪರ್ಕಿಸಿರಿ.