ಬಾಶ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್, ಹೆವ್‌ಲೆಟ್ ಪ್ಯಾಕರ್ಡ್ ಎಂಟರ್‌ಪ್ರೈಸಸ್, ಮ್ಯಾಥ್‌ವರ್ಕ್ಸ್, ಕೋರೀಇಎಲ್ ಟೆಕ್ನಾಲಜೀಸ್, ಎಎಂಡಿ ಮತ್ತು ಇನ್ವೆಂಟುರಿಸ್ ಟೆಕ್ನಾಲಜೀಸ್ ಸಂಸ್ಥೆಗಳ ಹಿರಿಯ ತಜ್ಞರು ಮಾರ್ಗದರ್ಶನ ನೀಡಲಿದ್ದು, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇದರಿಂದ ಸ್ಪರ್ಧಾರ್ಥಿಗಳಿಗೆ ನವೀನ ತಂತ್ರಜ್ಞಾನ ಮತ್ತು ವೃತ್ತಿಪರ ಮಾರ್ಗದರ್ಶನ ಲಭ್ಯವಾಗಲಿದೆ.
20 ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳಿAದ 189 ಕ್ಕೂ ಹೆಚ್ಚು ಪ್ರಾಜೆಕ್ಟ್ಗಳ ಅಬ್ಸ್ಟ್ರಾಕ್ಟ್ಗಳನ್ನು ಸ್ವೀಕರಿಸಲಾಗಿದೆ. ಬನ್ನಾರಿ ಅಮ್ಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೃತ ವಿಶ್ವವಿದ್ಯಾಪೀಠಂ, ಕೆ.ಎಲ್.ಇ. ಟೆಕ್ನಾಲಜಿಕಲ್ ಯೂನಿವರ್ಸಿಟಿ, ಪಿ.ಎಸ್.ಜಿ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ಹಾಗೂ ಆತಿಥೇಯ ಬಿಐಟಿಎಂ ತಂಡಗಳು ಭಾಗವಹಿಸುತ್ತಿವೆ.
ಸ್ಪರ್ಧೆಯ ವಿಮರ್ಶೆ ನವೀನತೆ, ಪರಿಣಾಮ, ತಾಂತ್ರಿಕ ಕಾರ್ಯನಿರ್ವಹಣೆ ಮತ್ತು ತಂಡದ ಕಾರ್ಯಪದ್ಧತಿಯನ್ನು ಆಧರಿಸಿರುತ್ತದೆ. ವಿಜೇತರಿಗೆ ರೂ.50,000 ನಗದು ಬಹುಮಾನ, ಪ್ರಮಾಣಪತ್ರಗಳು ಮತ್ತು ಗೌರವ ನೀಡಲಾಗುವುದು. ಈ ಮೂಲಕ ನಿಯೋನೆಕ್ಸಸ್ 36.0 ರಾಷ್ಟ್ರಮಟ್ಟದ ವಿದ್ಯಾರ್ಥಿ ಪ್ರತಿಭೆಯನ್ನು ಉತ್ತೇಜಿಸಿ, ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ.