ನೆಹರು ಯುವಕೇಂದ್ರ: ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಆಹ್ವಾನ

Ravi Talawar
ನೆಹರು ಯುವಕೇಂದ್ರ: ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಆಹ್ವಾನ
WhatsApp Group Join Now
Telegram Group Join Now


ಬಳ್ಳಾರಿ,ಮೇ 15: ನೆಹರು ಯುವ ಕೇಂದ್ರ ವತಿಯಿಂದ ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಅರ್ಹ ಯುವ ನಾಗರಿಕರಿಂದ ಆಹ್ವಾನಿಸಲಾಗಿದೆ.

ಯುವ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ಕಾರ್ಯಕ್ರಮವು ದೇಶದಾದ್ಯಾಂತ ಯುವಕರನ್ನು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಸಕ್ರಿಯವಾಗಿ ಪ್ರೇರೇಪಿಸುತ್ತಿದೆ. ಈ ದೇಶವ್ಯಾಪಿ ಆಹ್ವಾನವು ತುರ್ತು ಪರಿಸ್ಥಿತಿಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟಿçÃಯ ಕಾರಣಕ್ಕಾಗಿ ಮಹತ್ವಪೂರ್ಣ ಪಾತ್ರವಹಿಸಲು ಯುವ ನಾಗರಿಕರನ್ನು ಸಶಕ್ತಗೊಳಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯು ಉತ್ತಮ ತರಬೇತಿ ಪಡೆದ, ಸ್ಪಂದಿಸುವ ಮತ್ತು ಆತ್ಮ ಸ್ಥೆöÊರ್ಯದಿಂದಿರುವ ಸ್ವಯಂಸೇವಕರ ದಳವನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ನೈಸರ್ಗಿಕ ವಿಪತ್ತುಗಳು, ಅಪಘಾತಗಳು, ಸಾರ್ವಜನಿಕ ತುರ್ತು ಪರಿಸ್ಥಿತಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಲ್ಲಿ ನಾಗರಿಕ ಆಡಳಿತದ ಪೂರಕವಾಗಿರುತ್ತದೆ.

ಇದರಲ್ಲಿ ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಾಚರಣೆಗಳು, ಪ್ರಾಥಮಿಕ ಚಿಕಿತ್ಸೆ ಮತ್ತು ತುರ್ತು ಆರೈಕೆ, ಸಂಚಾರ ನಿರ್ವಹಣೆ, ಜನಸಮೂಹ ನಿಯಂತ್ರಣ, ಸಾರ್ವಜನಿಕ ಭದ್ರತೆ, ಮತ್ತು ವಿಪತ್ತು ಪ್ರತಿಕ್ರಿಯೆ ಮತ್ತು ಪುನಶ್ಚೇತನ ಕಾರ್ಯಗಳಲ್ಲಿ ಸಹಾಯ ಮಾಡುವುದು ಒಳಗೊಂಡಿದೆ. ಸಿದ್ಧತೆಯುಳ್ಳ ಮತ್ತು ತರಬೇತಿಯಾದ ನಾಗರಿಕ ಪಡೆ ಇದ್ದು, ಮೈ ಭಾರತ ತನ್ನದಾದ ಕೊಡುಗೆ ನೀಡಲು ಬದ್ಧವಾಗಿದೆ.

ಮೈ ಭಾರತ ತನ್ನ ಚುರುಕಾದ ಯುವ ಸ್ವಯಂಸೇವಕರ ಜಾಲದೊಂದಿಗೆ ಜೊತೆಗೆ ಎಲ್ಲಾ ಉತ್ಸಾಹಭರಿತ ಯುವ ನಾಗರಿಕರನ್ನು ಈ ಮಹತ್ವದ ಕಾರ್ಯಕ್ಕಾಗಿ ಮುಂದೆ ಬಂದು ಮೈ ಭಾರತ ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಕರೆ ನೀಡಿದೆ.

ಆಸಕ್ತ ಸ್ವಯಂಸೇವಕರು ಅಧಿಕೃತ ಮೈ ಭಾರತ ಪೋರ್ಟಲ್ https://mybharat.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿ ಎನ್.ರಂಜನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article