ಬೆಂಗಳೂರು 29 ಜನವರಿ 2026ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ಶಿಬಿರ -2026 (ಆರ್ ಡಿಸಿ -2026) ನಲ್ಲಿ ಕರ್ನಾಟಕ ಮತ್ತು ಗೋವಾದ ಎನ್ ಸಿಸಿ ನಿರ್ದೇಶನಾಲಯ ಸತತ 2ನೇ ಬಾರಿಗೆ ಪ್ರತಿಷ್ಠಿತ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ದೇಶಾದ್ಯಂತ 17 ನಿರ್ದೇಶನಾಲಯಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಒಟ್ಟಾರೆ, ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆರ್ ಡಿಸಿ -2026ನಲ್ಲಿ ಭಾಗವಹಿಸಿದ್ದ ಎಲ್ಲ 16 ನಿರ್ದೇಶನಾಲಯಗಳನ್ನು ಹಿಂದಿಕ್ಕಿ ಕರ್ನಾಟಕ ಮತ್ತು ಗೋವಾದ ಕೆಡೆಟ್ ಗಳು ಅತ್ಯುತ್ತಮ ಪಥಸಂಚಲನ , ಫೈರಿಂಗ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರದರ್ಶನಗಳನ್ನು ನೀಡಿದ್ದಾರೆ. ಈ ಗಮನಾರ್ಹ ಸಾಧನೆಯು ನಿರ್ದೇಶನಾಲಯದ ಸ್ಥಿರ ಶ್ರೇಷ್ಠತೆ, ಶಿಸ್ತು ಹಾಗೂ ಉನ್ನತ ತರಬೇತಿ ಮಾನದಂಡಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ರಕ್ಷಣಾ ಸಚಿವಾಲಯದ ಪ್ರಕಾರ, ವರ್ಷವಿಡೀ ವ್ಯಾಪಕ ಶ್ರೇಣಿಯ ಎನ್ ಸಿಸಿ ಚಟುವಟಿಕೆಗಳಲ್ಲಿ ಸ್ಥಿರವಾದ ಬಹುವಿಧದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ನಿರ್ದೇಶನಾಲಯಕ್ಕೆ ಪ್ರಧಾನಮಂತ್ರಿಗಳ ಬ್ಯಾನರ್ ಮತ್ತು ಟ್ರೋಫಿಯನ್ನು ನೀಡಲಾಗುವುದು. ಮೌಲ್ಯಮಾಪನ ಮಾನದಂಡಗಳಲ್ಲಿ ಪ್ರಮುಖವಾಗಿ ಸಂಘಟಿತ ಶಿಬಿರಗಳು ಮತ್ತು ಸ್ಪರ್ಧೆಗಳಲ್ಲಿನ ಕಾರ್ಯಕ್ಷಮತೆ ಶಿಸ್ತಿನ ಮಾನದಂಡಗಳು , ಎನ್ ಸಿಸಿ ಪ್ರಮಾಣಪತ್ರ ಪರೀಕ್ಷೆಗಳಲ್ಲಿನ ಫಲಿತಾಂಶಗಳು ಮತ್ತು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗಾಗಿ ಆಯ್ಕೆಯಾದ ಕೆಡೆಟ್ ಗಳ ಸಂಖ್ಯೆ ಒಳಗೊಂಡಿದೆ.
ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದ್ದು, ಅದು ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್ ಶಿಪ್ , ಅಖಿಲ ಭಾರತ ವಾಯುಸೈನಿಕ ಶಿಬಿರ, ಅಖಿಲ ಭಾರತ ನೌಕಾ ಸೈನಿಕ ಶಿಬಿರ, ಐಡಿಯಾ ಮತ್ತು ಇನೋವೇಷನ್ ಸ್ಪರ್ಧೆ ಮತ್ತು ಆರ್ ಡಿಸಿ -2026 ಸೇರಿದಂತೆ ಹಲವು ಪ್ರತಿಷ್ಠಿತ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಗಳಿಸುತ್ತಾ ಬಂದಿದೆ. ಆ ಮೂಲಕ ಎನ್ ಸಿಸಿ ತರಬೇತಿಯ ಎಲ್ಲ ವಿಭಾಗಗಳಲ್ಲೂ ಮುಂಚೂಣಿಯಲ್ಲಿದೆ.
ಪ್ರಧಾನಮಂತ್ರಿಗಳ ಬ್ಯಾನರ್ ಅನ್ನು ಕರ್ನಾಟಕ ಮತ್ತು ಗೋವಾ ಎನ್ ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್, ನವದೆಹಲಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಮೈದಾನದಲ್ಲಿ 2026ರ ಜನವರಿ 28ರಂದು ನಡೆದ ಆರ್ ಡಿಸಿ -2026 ಸಮಾರೋಪ ಸಮಾರಂಭವಾದ ಪ್ರಧಾನಮಂತ್ರಿಗಳ ಎನ್ ಸಿಸಿ Rallyಯಲ್ಲಿ ಅಧಿಕೃತವಾಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಏರ್ ಕಮಾಂಡರ್ ಎಸ್. ಬಿ. ಅರುಣ್ ಕುಮಾರ್, ಸತತ ಎರಡನೇ ವರ್ಷ ಚಾಂಪಿಯನ್ ನಿರ್ದೇಶನಾಲಯದ ಕಿರೀಟವನ್ನು ಪಡೆದಿರುವುದು ಕೆಡೆಟ್ ಗಳ ಹಾಗೂ ಸಿಬ್ಬಂದಿಗಳ ವೃತ್ತಿಪರತೆ, ಸ್ಥಿತಿಸ್ಥಾಪಕತ್ವ ಮತ್ತು ಎಲ್ಲದಕ್ಕೂ ಸಿದ್ಧವಾಗಿರುವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಈ ಯಶಸ್ಸು ಸಾಮೂಹಿಕ ಕಠಿಣ ಪರಿಶ್ರಮ ನಿಖರ ತರಬೇತಿ ಮತ್ತು ಅಚಲ ಬದ್ಧತೆಯ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಮತ್ತು ಗೋವಾ ರಾಜ್ಯದಾದ್ಯಂತ ಇರುವ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ದೃಢ ಬೆಂಬಲ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳ ನೆರವು ಇದಕ್ಕೆ ಕಾರಣವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ