ಬೆಳಗಾವಿ ಜ., ೦೭- ಕೆಎಲ್‌ಇ ಸಂಸ್ಥೆಯ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ಬಿ.ಕಾಂ. ಅಂತಿಮವರ್ಷದ ಎನ್‌ಸಿಸಿ ಕೆಡೆಟ್ ಧೀರಜ್ ಭಾವಿಮನೆ ಗಣರಾಜ್ಯೋತ್ಸವ ಪರೇಡ್‌ಗೆ(ಆರ್.ಡಿ.ಸಿ.ಕ್ಯಾಂಪ್) ಆಯ್ಕೆಯಾಗಿದ್ದಾನೆ. ಬೆಂಗಳೂರಿನ ಅಂತಿಮ ಸುತ್ತಿನ ಆರ್‌ಡಿಸಿ ಕ್ಯಾಂಪ್‌ದಲ್ಲಿ ಧೀರಜ್ ಭಾವಿಮನೆ ಆಯ್ಕೆಯಾಗಿದ್ದ. ಜನವರಿ 26 ರಂದು ನವದೆಹಲಿಯಲ್ಲಿ ಜರುಗಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕ ಮತ್ತು ಗೋವಾ ಡೈರೋಕ್ಟರೇಟ್ ಘಟಕವನ್ನು ಪ್ರತಿನಿಧಿಸಲಿದ್ದಾನೆ.
ಕೆಡೆಟ್ ಧೀರಜ್ ಭಾವಿಮನೆಗೆ 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡಿAಗ್ ಆಫೀಸರ್ ಕರ್ನಲ್ ಸುನೀಲ್ ದಾಗರ, ಲೆಫ್ಟನಂಟ್ ಕರ್ನಲ್ ಸಿದ್ಧಾರ್ಥ ರೇಡೂ ಲಿಂಗರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ, ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ ತರಬೇತಿ ನೀಡಿದ್ದರು. ಈತನ ಸಾಧನೆಗೆ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಪ್ರಾಚಾರ್ಯರಾದ ಡಾ.ಎಚ್.ಎಸ್.ಮೇಲಿನಮನಿ, 26 ಕರ್ನಾಟಕ ಬಟಾಲಿಯನ್ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಎನ್‌ಸಿಸಿ ಕೆಡೆಟ್ ಧೀರಜ್ ಭಾವಿಮನೆ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ


