ದೆಹಲಿ, ನ.24: ರಾಷ್ಟ್ರ ರಾಜಧಾನಿಯಲ್ಲಿ ಅತಿದೊಡ್ಡ ಮಟ್ಟದ ಮಾದಕ ವಸ್ತುಗಳನ್ನುNCB (ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ) ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆಯ ಮೂಲಕ ವಶಪಡಿಸಿಕೊಳ್ಳಲಾಗಿತ್ತು. ದಾಳಿಯಲ್ಲಿ 262 ಕೋಟಿ ರೂ. ಮೌಲ್ಯದ 328 ಕೆಜಿ ಮೆಥಾಂಫೆಟಮೈನ್ (ಮೆಥ್ / ಐಸ್) ಜಪ್ತಿ ಮಾಡಲಾಗಿತ್ತು. NCB ಹಾಗೂ ದೆಹಲಿ ಪೊಲೀಸರು, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ದೆಹಲಿಯ ತೋಟದ ಮನೆಯೊಂದಕ್ಕೆ ಕೂಡ ದಾಳಿಯನ್ನು ಮಾಡಲಾಗಿತ್ತು. ಈ ವೇಳೆ ಭಾರೀ ಮೌಲ್ಯದ ಡ್ರಗ್ಸ್ಗಳು ಸಿಕ್ಕಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಾಲ್ಯಾಂಡ್ ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಇನ್ನು ಈ ಕಾರ್ಯಚರಣೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾದ ಮಂಗ್ರೌಲಿ ಗ್ರಾಮದ ನೋಯ್ಡಾ ಸೆಕ್ಟರ್ -5ರ ನಿವಾಸಿ 25 ವರ್ಷದ ಶೇನ್ ವಾರಿಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇದೀಗ ಈ ಕಾರ್ಯಚರಣೆ ವೇಗ ಸಿಕ್ಕಿದೆ. ಮಾರಾಟ ವ್ಯವಸ್ಥಾಪಕ ಎಂದು ವಾರಿಸ್, ನಕಲಿ ಸಿಮ್ ಕಾರ್ಡ್‌ಗಳು, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ, ಇದರ ಜತೆಗೆ ವಿದೇಶಿ ಮೂಲದ ಕಿಂಗ್‌ಪಿನ್‌ನೊಂದಿಗೆ ಸಂಪರ್ಕವನ್ನು ಕೂಡ ಹೊಂದಿದ್ದ ಎಂದು ಹೇಳಲಾಗಿದೆ. ನ.20ರಂದು ಶೇನ್ ವಾರಿಸ್ನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಇನ್ನು ಪೋರ್ಟರ್ ಡೆಲಿವರಿ ರೈಡರ್ ಮೂಲಕ ಎಸ್ತರ್ ಕಿನಿಮಿ ಎಂಬ ಮಹಿಳೆ ಈ ಮಾದಕ ವಸ್ತುಗಳನ್ನು ಸಾಗಿಸಿದ್ದಾಳೆ ಎಂದು ಹೇಳಲಾಗಿದೆ. ಈ ಮಹಿಳೆಗೆ ವಾರಿಸ್ ತನ್ನ ಸಂಪರ್ಕ ಸಂಖ್ಯೆಗಳು, ವಿಳಾಸ ಮತ್ತು ಇತರ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದ ಎಂದು ಹೇಳಲಾಗಿದೆ. ಇಬ್ಬರು ಸೇರಿ ವಿದೇಶಕ್ಕೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.


