ನಯನಾ ಎಚ್.ಎ ಅವರು ಅಖಿಲ ಭಾರತ ಕರ್ತವ್ಯ ಪಥಕ್ಕೆ ಆಯ್ಕೆ

Ravi Talawar
ನಯನಾ ಎಚ್.ಎ ಅವರು ಅಖಿಲ ಭಾರತ ಕರ್ತವ್ಯ ಪಥಕ್ಕೆ ಆಯ್ಕೆ
WhatsApp Group Join Now
Telegram Group Join Now
ಧಾರವಾಡ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎ.ಹನುಮಂತಪ್ಪ ಮತ್ತು ಎಮ್.ರೇಣುಕಾ ದಂಪತಿಯ ಪುತ್ರಿ ನಯನಾ ಎಚ್.ಎ ಅವರು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ-2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲು ಅಖಿಲ ಭಾರತ ಕರ್ತವ್ಯ ಪಥದಲ್ಲಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ ಪಡೆಯುತ್ತಿದ್ದಾರೆ ಮತ್ತು 2/24 ಎನ್‍ಸಿಸಿ ಬೆಟಾಲಿಯನ್‍ನೊಂದಿಗೆ ಸಂಯೋಜಿತರಾಗಿದ್ದಾರೆ.
ನಯನಾ ಎಚ್.ಎ ಅವರಿಗೆ 1 ನೇ ವರ್ಷದ ಎನ್‍ಸಿಸಿಯಿಂದ ಮತ್ತು ಇಲ್ಲಿಯವರೆಗೆ ANO ಕ್ಯಾಪ್ಟನ್ ವಾಯ್. ಎಸ್.ರಾವುತ್ ಸರ್ ಹೆಚ್ಚು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ.  ಮತ್ತು ಮಾಜಿ RDC ಕೆಡೆಟ್ ವಿನಾಯಕ್ ಹತ್ತೂರೆ ಹಿರಿಯರಿಂದ ಮಾರ್ಗದರ್ಶನ ಪಡೆದಿದ್ದಾರೆ.
WhatsApp Group Join Now
Telegram Group Join Now
Share This Article