ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ನಾಟಕೋತ್ಸವ ಸಮಾರೋಪ ಸಮಾರಂಭ

Ravi Talawar
ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ನಾಟಕೋತ್ಸವ ಸಮಾರೋಪ ಸಮಾರಂಭ
WhatsApp Group Join Now
Telegram Group Join Now

ಬೆಳಗಾವಿ: ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಹವ್ಯಾಸಿ ತಂಡದ ಕಲಾವಿದರು ತಮ್ಮನ್ನು ಕಳೆದ ೨೯ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸಂಘಟನೆಯ ರಂಗ ಚಟುವಟಿಕೆಯನ್ನು ಬೆಳಗಾವಿಯವರೆಗೂ ವಿಸ್ತರಿಸಿರುವದು ಸಂತೋಷದ ವಿಷಯ ಇದು ನಗರದ ಸಾಂಸ್ಕೃತಿಕ ಜೀವನಕ್ಕೆ ಹೊಸ ಉಸಿರು ನೀಡುತ್ತದೆ. ಸ್ಥಳಿಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರಕುತ್ತದೆ. ಮತ್ತು ಪ್ರೇಕ್ಷಕರಿಗೆ ನಾಟಕ ಕಲೆಯ ಸವಿಯನ್ನು ಅನುಭವಿಸುವ ಅವಕಾಶ ಸಿಗುತ್ತದೆ. ಇಂತಹ ಚಟುವಟಿಕೆಗಳು ಬೆಳಗಾವಿಯನ್ನು ಕಲೆ-ಸಂಸ್ಕೃತಿಯ ಕೇಂದ್ರವಾಗಿ ರೂಪಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ಈ ನಿಟ್ಟಿನಲ್ಲಿ ದಿವಂಗತ ಏಣಗಿ ಬಾಳಪ್ಪನವರನ್ನು ಸ್ಮರಿಸಿಕೊಳ್ಳುವ ನಿಮಿತ್ಯ ಅವರ ಹೆಸರಿನಲ್ಲಿ *ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ* ನಾಟಕೋತ್ಸವವನ್ನು ದಿ:೦೭-೧೧-೨೦೨೫ ರಿಂದ ೦೯-೧೧-೨೦೨೫ರ ವರೆಗೆ ಮೂರು ದಿನಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ , ರಂಗ ಸೃಷ್ಟಿ ಕಲಾತಂಡ ಬೆಳಗಾವಿ ಇವರು ಕನ್ನಡ ಭವನ ಸಹಯೋಗದೊಂದಿಗೆ ಬೆಳಗಾವಿಯ ನೆಹರು ನಗರದ ರಾಮದೇವ್ ಹೋಟೆಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ಏರ್ಪಡಿಸಿದ್ದರು.

ಈ ನಾಟಕೋತ್ಸವವನ್ನು ಸಾಹಿತಿ ದಿವಂಗತ ಎಸ್. ಎಲ್. ಭೈರಪ್ಪ, ರಂಗರ್ಮಿಗಳಾದ ದಿವಂಗತ ಯಶವಂತ ಸರದೇಶಪಾಂಡೆ, ದಿವಂಗತ ರಾಜು ತಾಳಿಕೋಟಿ, ದಿವಂಗತ ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ದಿವಂಗತ ಶ್ರೀಮತಿ ಅನ್ನಪರ್ಣ ಅಶೋಕ ಮಳಗಲಿ ಇವರುಗಳಿಗೆ ಅರ್ಪಿಸಿರುವದು ಅತ್ಯಂತ ಅರ್ಥಪೂರ್ಣವಾದ ಕೃತ್ಯ. ಅವರು ಕಲೆ, ಸಾಹಿತ್ಯ ಮತ್ತು ರಂಗಭೂಮಿ ಲೋಕಕ್ಕೆ ನೀಡಿದ ಕೊಡುಗೆ ಅಪ್ರತಿಮ. ಈ ಉತ್ಸವದ ಮೂಲಕ ಅವರ ಸ್ಮೃತಿಯನ್ನು ಜೀವಂತವಾಟ್ಟುಕೊಳ್ಳುವದರ ಜೊತೆಗೆ ಅವರ ಆತ್ಮದ ಆಶೀರ್ವಾದವನ್ನು ಪಡೆದಂತಾಗುತ್ತದೆ. ಇಂಥಹ ಸ್ಮರಣಾರ್ಥ ನಾಟಕೋತ್ಸವಗಳು ಅವರ ಸಾಧನೆಗೆ ಗೌರವ ಸಲ್ಲಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತವೆ.

ಶುಕ್ರವಾರ ದಿನಾಂಕ ೭-೧೧-೨೫ ರಿಂದ ಪ್ರಾರಂಭವಾದ ನಾಟಕೋತ್ಸವ ರವಿವಾರ ದಿನಾಂಕ ೯-೧೧-೨೫ ರ ವರೆಗೆ ಮೂರು ದಿನಗಳ ಕಾಲ ಜರುಗಿತು. ಈ ಸಂದರ್ಭದಲ್ಲಿ ರಂಗಸಂಪದ ಬೆಳಗಾವಿ ಹವ್ಯಾಸಿ ನಕ್ಷತ್ರ ಯಾತ್ರಿಕರು ಅದರಂತೆ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ ಹವ್ಯಾಸಿ ತಂಡದಿಂದ ಹಾಲು ಬಟ್ಟಲದೊಳಗಿನ ಪಾಲು ಮತ್ತು ನೆಲಮುಗಿಲು ಹೀಗೆ ಮೂರು ನಾಟಕಗಳು ಪ್ರರ್ಶನಗೊಂಡವು. ನಾಟಕಗಳ ವೀಕ್ಷಣೆಗೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ನಾಟಕೋತ್ಸವ ಯಶಸ್ವಿಯಾಗಿರುವದಕ್ಕೆ ಸಾಕ್ಷಿಯಾದರು. ಇದೇ ಸಂರ್ಭದಲ್ಲಿ ನಾಟಕಕಾರ ರಂಗ ನರ್ದೇಶಕ ಝಕೀರ ನದಾಫ ರಚನೆಯ ನೆಲಮುಗಿಲು ಮತ್ತು ಹಾಲು ಬಟ್ಟಲದೊಳಗಿನ ಪಾಲು ನಾಟಕ ಕೃತಿ ಲೋಕರ್ಪಣೆಗೊಂಡಿತು.

ರವಿವಾರ ದಿನಾಂಕ ೦೯.೧೧.೨೦೨೫ ರ ಸಮಾರೋಪ ಸಮಾರಂಭದ ಗೌರವರ್ಪಣೆ ಕಾರ್ಯಕ್ರಮದಲ್ಲಿ ಶ್ರೀಯುತ ಎಲ್.ಎಸ್. ಶಾಸ್ತ್ರಿ. ಸಾಹಿತಿಗಳು ಬೆಳಗಾವಿ. ಶ್ರೀಯುತ ಯ.ರು. ಪಾಟೀಲ. ಸಾಹಿತಿಗಳು ಬೆಳಗಾವಿ. ಶ್ರೀಯುತ ಬಸವರಾಜ ರೊಟ್ಟಿ. ಜಿಲಾ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ. ಶ್ರೀಯುತ ಮಧುಕರ ಗುಂಡೇನಟ್ಟಿ. ಸಾಹಿತಿಗಳು ಬೆಳಗಾವಿ. ಶ್ರೀಯುತ ರವಿ ಕೊಟಾರಗಸ್ತಿ. ಸಾಹಿತಿಗಳು ಬೆಳಗಾವಿ. ಶ್ರೀಯುತ ಆನಂದ ಪುರಾಣಿಕ. ನಿವೃತ್ತ ಬ್ಯಾಂಕ್ ಅಧಿಕಾರಿಗಳು. ಶ್ರೀಯುತ ಎಸ್.ಎ. ಅರಕೇರಿ. ಹಿರಿಯ ರಂಗ ಕಲಾವಿದರು ಬೆಳಗಾವಿ. ಶ್ರೀಯುತ ಅರವಿಂದ ಹುನಗುಂದ. ನಿವೃತ್ತ ಬ್ಯಾಂಕ್ ಅಧಿಕಾರಿಗಳು ಬೆಳಗಾವಿ. ಶ್ರೀಯುತ ರವಿ ಭಜಂತ್ರಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ಶ್ರೀಯುತ ಆನಂದ ಭಿಂಗೆ. ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಖಾನಾಪುರ ಇವರು ಭಾಗವಹಿಸಿದ್ದರು.
ಈ ಮೂರು ದಿನಗಳ ನಾಟಕೋತ್ಸವ ನಿಜಕ್ಕೂ ಸಾರ್ಥಕವಾಗಿದೆ. ಇಂಥಹ ಉತ್ಸವಗಳು ಕಲೆ ಸಂಸ್ಕೃತಿ ಮತ್ತು ಸಮಾಜದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವದರ ಜೊತೆಗೆ ಪ್ರೇಕ್ಷಕರಿಗೆ ನಾಟಕದ ಮೂಲಕ ಜೀವನ ಮೌಲ್ಯಗಳು, ಭಾವನೆಗಳು ಹಾಗೂ ಚಿಂತನೆಗಳ ಹೊಸದಾರಿ ತೋರಿಸುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು.

 

 

WhatsApp Group Join Now
Telegram Group Join Now
Share This Article