ರನ್ನ ಬೆಳಗಲಿ: ಏ.24., ಸ್ಥಳೀಯ ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ಮತ್ತು ತಾಲೂಕ ಆಡಳಿತ, ತಾಲೂಕ ಸ್ವೀಪ್ ಸಮಿತಿ ಮುಧೋಳ ಹಾಗೂ ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಮತದಾನ ಜಾಗೃತಿಗಾಗಿ ಸೈಕಲ್ ಜಾತಾ ಮತ್ತು ಪ್ರತಿಜ್ಞಾವಿಧಿ
ಬೋಧನಾ ಕಾರ್ಯಕ್ರಮ ಜರುಗಿತು.
ಮತದಾನ ಜಾಗೃತಿಯ ಸೈಕಲ್ ಜಾತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹುಲ್ಲುಮನಿ ತಿಮ್ಮಣ್ಣ ಮುಧೋಳ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳು ಮೇ ೭ ರಂದು ತಪ್ಪದೆ ಮತದಾನ ಮಾಡೋಣ ರಾಷ್ಟ್ರದ ಭದ್ರತೆಗೆ ಕೈಜೋಡಿಸೋಣ, ಚುನಾವಣೆ ಪ್ರಜಾ ಪ್ರಭುತ್ವದ ಮಹತ್ವದ ಘಟ್ಟವಾಗಿದೆ.
ಆದರಿಂದ ಇಲ್ಲಿ ಸೇರಿದ ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಅದರೊಂದಿಗೆ ಮತದಾನ ಮಾಡುವಂತೆ ಎಲ್ಲರನ್ನು ಪ್ರೇರೇಪಿಸಬೇಕು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಲಾರದೆ. ಸಂವಿಧಾನ ನೀಡಿದ ಮಹತ್ವದ ವರದಾನವಾದ ಮತದಾನದ ಹಕ್ಕನ್ನು, ಎಲ್ಲರೂ ಮತ ದಾನ ಮಾಡುವ ಮೂಲಕ, ದೇಶದ
ಭದ್ರತೆಗೆ ಕೈಜೋಡಿಸೋಣ ಎಂಬ ವಿಚಾರವನ್ನು ತಿಳಿಸಿದರು.
ಮುಧೋಳ ತಾಲೂಕ ದಂಡಾಧಿಕಾರಿಗಳಾದ ವಿನೋದ ಹತ್ತಳ್ಳಿ ತಶಿಲ್ದಾರರು ಮಾನವ ಸರಪಳಿಯ ನಿರ್ಮಿಸಿ, ಸೇರಿದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿ ಸಮೂಹಕ್ಕೆ, ಅಧಿಕಾರಿ ಮತ್ತು ಸಾರ್ವಜನಿಕರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ನಂತರ ವಿದ್ಯಾರ್ಥಿಗಳ ಜೊತೆಗೆ ಎಲ್ಲಾ ಅಧಿಕಾರಿಗಳು ಸೈಕಲ್ ತುಳಿಯುತ್ತಾ ಮತದಾನ ಜಾಗೃತಿಯ ಘೋಷವಾಕ್ಯಗಳನ್ನು
ಹೇಳುತ್ತಾ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ವಿಶೇಷ ಮತಗಟ್ಟೆಗಳಿಗೆ ಭೇಟಿಕೊಟ್ಟು
ಮತಗಟ್ಟೆಗಳ ವ್ಯವಸ್ಥೆಯನ್ನ ವೀಕ್ಷಣೆ ಮಾಡಿದರು.
ರನ್ನ ಬೆಳಗಲಿಯ ಪಟ್ಟಣದಲ್ಲಿ &quoಣ;ಪ್ರತಿಶತ ಮತದಾನ ರನ್ನ ಬೆಳಗಲಿ ಪಟ್ಟಣದ ವಾಗ್ದಾನ&quoಣ; ಎಂದು ಹೇಳಿ ಎಲ್ಲರೂ ಕಡ್ಡಾಯ ವಾಗಿ ಮತದಾನ ಮಾಡಲು ಪ್ರೇರೇಪಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ನಾಮದೇವ ಲಮಾಣಿ, ಚುನಾವಣಾ ಸೆಕ್ಟರ್ ಆಫೀಸರಾದ ಎಸ್.ಎಂ. ಸುತಾರ, ಗ್ರಾಮ ಆಡಳಿತಾಧಿಕಾರಿಯದ ಬಿ .ಎಂ. ಪಾಟೀಲ, ಸ್ಕೌಟ್ ಮಾಸ್ಟರ್ ಎಸ್.ಬಿ.ರಡರಟ್ಟಿ, ಪಿ.ಡಿ.ನಾಗನೂರು, ಎಸ್.ಎಲ್.ಕಟಾರಿ, ಆರ್.ಎ. ತಳವಾರ, ರಮೇಶ ಪಾಟೀಲ, ಬಾಬು ಜಕಾತಿ, ರಾಜು ಮುಗಳಖೊಡ,ಸಚಿನ ಕಾಸರ, ಎಸ್.ಬಿ.ಚೌದ್ರಿ, ವಿಠ್ಠಲ ಪೂಜೇರಿ, ರವಿ ಭಜಂತ್ರಿ, ಬಾಳಪ್ಪ ಹೊಸೂರ, ಸೈದು ಮಾಂಗ, ಗಿರೀಶ ಮೇತ್ರಿ, ಪುಟ್ಟು ದೊಡ್ಡಮನಿ ಮತ್ತು ಪತ್ರಕರ್ತರಾದ ರಾಘವೇಂದ್ರ ನೀಲಣ್ಣವರ, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಅಧಿಕಾರಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.