ಬಳ್ಳಾರಿ,ಅ.13..: ಪ್ರತಿ ವರ್ಷ ಅ.೦೧ರಂದು ನಡೆಯಲಿರುವ ರಾಷ್ಟಿçÃಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಿಮಿತ್ತ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಶಾಖೆ ಮತ್ತು ಬಿಮ್ಸ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಎ.ಎಸ್.ಎಂ ಕಾಲೇಜಿನಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿ, ಜಿಪಂ ಸಿಇಓ ಹ್ಯಾರಿಸ್ ಸುಮೇರ್ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಮಹಿಳೆಯರು ತಮ್ಮ ವೈಯಕ್ತಿಕ ಜೀವನದಲ್ಲಿ ಬಹಳ ತೊಂದರೆಗಳಿAದ ಬಳಲುತ್ತಿದ್ದು ಇಂತಹ ಕಷ್ಟಕರ ವಾತಾವರಣದಲ್ಲಿ ರಕ್ತದಾನ ಮಾಡುವುದು ಒಂದು ಅದ್ಬುತ. ತಮ್ಮ ಜೀನವದಲ್ಲಿ ಮಹಿಳೆಯರು ರಕ್ತದಾನ ಮಾಡುವುದು ನೋಡುತ್ತಿರುವುದು ಮೊದಲನೆಯ ಬಾರಿ ಎಂದು ತಿಳಿಸಿ, ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿ, ರೆಡ್‌ಕ್ರಾಸ್ ಸಂಸ್ಥೆ ಉಪಸಭಾಪತಿ ಡಾ||.ಎಸ್.ಜೇ.ವಿಮಹಿಪಾಲ್ ರಕ್ತದಾನದ ಮಹತ್ವನ್ನು ತಿಳಿಸಿದರು.ಡಾ||.ಇಂದ್ರಾಣಿ, ಡ್ಯಾಪ್ಕೊಅಧಿಕಾರಿ, ಡಾ||.ಬಿಂದುರಾಣಿ, ಕತ್ಯಾಯಣಿ., ಎ.ಎಸ್.ಎಂಕಾಲೇಜು, ಬಳ್ಳಾರಿ. ದುಪಂ ಸತೀಶ್, ಪ್ರಾಂಶುಪಾಲರು, ಎ.ಎಸ್.ಎಂ.ಕಾಲೇಜು, ಬಳ್ಳಾರಿ. ಎಂ.ಎ.ಷಕೀಬ್, ಕಾರ್ಯಾದರ್ಶಿ, ರೆಡ್‌ಕ್ರಾಸ್ ಸಂಸ್ಥೆ. ಬಿ.ದೇವಣ್ಣ, ನಿರ್ದೇಶಕ, ರಕ್ತದಾನ ಸಮಿತಿ, ಪ್ರೋ.ಕುಪ್ಪಗಲ್ಲು ವೀರೇಶ್, ಈ.ಸಿ ಸದಸ್ಯರು. ಮತ್ತು ಡಾ||.ಸೈಯಿದಾತನ್ವೀರ್, ಕಾರ್ಯಕ್ರಮ ಅಧಿಕಾರಿ ರಿಜ್ವಾನ ಮೈನುದ್ದೀನ್, ಕೋಆರ್ಡಿನೇಟರ್, ವೈ.ಆರ್.ಸಿ ಉಪಸ್ಥಿತರಿದದರು. ರೆಡ್‌ಕ್ರಾಸ್ ಸದಸ್ಯರಾದ ಉಮಾ ಮಹೇಶ್ವರಿ, ಪಿ.ವಾಸು, ಸಮೀರ್ ಸೇಟ್, ತಾಹೇರ್ ಸೇಟ್, ಶಿವಸಾಗರ್ ಮತ್ತು ಎಂ.ವಲಿ ಬಾಷಾ ಇದ್ದರು.