ಬಳ್ಳಾರಿ,ಫೆ.18: ಮಹಾರಾಷ್ಟ್ರದ ಪುಣೆನÀಲ್ಲಿ ನಡೆದ ಫೆಡರೇಷನ್ ಎಂಡ್ಯುರನ್ಸ್ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಅಥ್ಹೇನಾ ರೋಲರ್ ಸ್ಕೆಟಿಂಗ್ ಕ್ಲಬ್ ಅನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ಮುಖ್ಯ ತರಬೇತುದಾರ ರವಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ತರಬೇತುದಾರರಾದ ಲೆಪಾಕ್ಷಿ ಮತ್ತು ಮಧನ್ ಕುಮಾರ್ ಅವರ ಸಮರ್ಪಿತ ಪರಿಶ್ರಮದಿಂದ ಈ ಯಶಸ್ಸು ಸಾಧ್ಯವಾಗಿದೆ.
ಚಿನ್ನದ ಪದಕ ವಿಜೇತ: ಪೊಲೀಸ್ ಜಿಮ್ಖಾನ್ ಪಾರ್ವತಿ ನಗರದ ವಿದ್ಯಾರ್ಥಿ ಮೋಹ್ಸಿನ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಬಳ್ಳಾರಿಯ ಗೌರವವನ್ನು ಹೆಚ್ಚಿಸಿದ್ದಾರೆ.
ಬೆಳ್ಳಿ ಮತ್ತು ಕಂಚಿನ ಪದಕ ವಿಜೇತ: ಬಾಲಬೋಧಿನಿ ಶಾಲೆ, ಗಾಂಧಿ ನಗರ ವಿದ್ಯಾರ್ಥಿ ಮೆಘನ್ ಅವರು ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ತನೂಶ್ರೀ, ಭುವಿತ್ ನಿಗಮ್, ವಿಜಯ್ ರಾಜ್ ಕೆ, ಆರಾಧ್ಯ, ಆರಾದ್ಯ, ಅಭಿರಾಮ್, ಕೆ ಹರ್ಷಿತ್, ಪ್ರಥಮ್ ಬಿ ಎಂ, ಆರ್ಯನ್ ಪಾಟೀಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


