ಇಂಡಿ : ಧರ್ಮಸ್ಥಳ ಸಂಘವು ಕೇವಲ ಸಾಲ ಕೊಡುವದಷ್ಟೇ ಅಲ್ಲದೆ ನೂರಾರು ಜನಪಯೋಗಿ ಯೋಜನೆ ಕೈಗೆತ್ತಿ ಕೊಂಡಿದೆ. ವಯೋವೃದ್ದರಿಗೆ ಮಾಶಾಸನವನ್ನು ನೀಡಿ ಸಹಕರಿಸುತ್ತಿದೆ ಎಂದು ನಟರಾಜ ಎಂ.ಎಲ್ ಹೇಳಿದರು.
ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸದಾಗಿ ಮಂಜುರಾದ ಮಾಶಾಸನ ಪತ್ರ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ೯೩ ನಿರ್ಗತಿಕ ವೃದ್ದ ಮಹಿಳೆಯರು ಮಾಶಾಸನ ನೀಡಿದ್ದು ಅಂಜುಟಗಿ ಗ್ರಾಮದಲ್ಲಿ ಇಂದು ಐದು ಮಹಿಳೆಯರಿಗೆ ನೀಡಿದೆ. ಇದರಿಂದ ಅವರಿಗೆ ಪ್ರತಿ ತಿಂಗಳು ರೂ ಒಂದು ಸಾವಿರ ಜೀವಿತ ಅವಧಿಯ ವರೆಗೂ ಬರುತ್ತದೆ ಎಂದರು.
ಗುರುಬಾಯಿ ಇಚ್ಚೂರ್, ಕಾಂತಬಾಯಿ ಅಗಸನಾಳ, ಮರೆಂಬು ಬಳಿಗಾರ, ಪಾರ್ವತಿ ವಾಲಿ ಇವರಿಗೆ ಮಾಶಾಸನ ಪತ್ರ ವಿತರಿಸಲಾಯಿತು.
ಅಣ್ಣಾರಾಯ ರೇವಪ್ಪ ಬಬಲಾದಿ, ವಿಜಯಕುಮಾರ ಪೈಗೊಂಡ, ಶಂಕರ ದಡ್ಡಣ್ಣವರ್,ಸಾಯಿಕುಮಾರ ಬನಪಟ್ಟಿ, ಸುರೇಸ ಮಾದರ, ಬಂಡೆಪ್ಪ ಅಲ್ಲಬಗೊಂಡ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ ಎಸ್.ಎಂ, ವಲಯ ಮೇಲ್ವಿಚಾರಕಿ ಅಶ್ವಿನಿ ಸಂಗೋಳಿ, ಸೇವಾ ಪ್ರತಿನಿಧಿ ಸೇವಾ ಸಾಬ್ಳೆ,ಸಿದ್ದಲಿಂಗ ಮಡಿವಾಳ, ಮತ್ತಿತರಿದ್ದರು.
ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸದಾಗಿ ಮಂಜುರಾದ ಮಾಶಾಸನ ಪತ್ರ ವಿತರಿಸಿ ನಟರಾಜ ಮಾತನಾಡಿದರು.
