ಬಳ್ಳಾರಿ,ಜು.19: ಜರ್ಮನ್ ಸರ್ಕಾರದಿಂದ ಮಾನ್ಯತೆ ಹೊಂದಿದ ಮೆ.ಟ್ಯಾಲೆಂಟ್ ಆರೇಂಜ್ ಸಂಸ್ಥೆ ವತಿಯಿಂದ ಜರ್ಮನಿಯಲ್ಲಿ ನರ್ಸ್ ಆಗಿ ಉದ್ಯೋಗಾವಕಾಶ ಹೊಂದಲು ಅರ್ಹ ಬಿಎಸ್ಸಿ ಅಥವಾ ಜಿಎನ್‍ಎಂ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಕಮಲ್‍ಷಾ ಅಲ್ತಫ್ ಅಹ್ಮದ್ ತಿಳಿಸಿದ್ದಾರೆ.
ಅರ್ಹತೆಗಳು:
ನಸಿರ್ಂಗ್ ಪೂರ್ಣಗೊಳಿಸಿದ ಆಸಕ್ತ ಉದ್ಯೋಗಾಂಕ್ಷಿಗಳು ಬಿಎಸ್ಸಿ, ಜಿಎನ್‍ಎಂ ವಿದ್ಯಾರ್ಹತೆ ಹೊಂದಿರಬೇಕು. 38 ವರ್ಷದೊಳಗಿನ ಮಹಿಳೆ, ಪುರುಷ ಅಭ್ಯರ್ಥಿಗಳಾಗಿರಬೇಕು. ಅನುಭವುಳ್ಳ ಅಥವಾ ಹೊಸಬರು ಅರ್ಜಿ ಸಲ್ಲಿಸಬಹುದು.
ಕಡ್ಡಾಯವಾಗಿ ಭಾರತೀಯ ನಸಿರ್ಂಗ್ ಲೈಸೆನ್ಸ್ ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು ಮಕ್ಕಳನ್ನು ಹೊಂದಿದಲ್ಲಿ ತಮ್ಮೊಡನೆ ಕರೆದೊಯ್ಯುವ ಅವಕಾಶ ಇರುವುದಿಲ್ಲ.
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೇರಳ ರಾಜ್ಯದ ತಿರುವನಂತಪುರ ತರಬೇತಿ ಕೇಂದ್ರದಲ್ಲಿ 08 ತಿಂಗಳ ಕಾಲ ಜರ್ಮನ್ ಭಾಷೆಯ ತರಬೇತಿ ನೀಡಲಿದ್ದು, ಸಂಸ್ಥೆ ವತಿಯಿಂದ ಊಟ, ವಸತಿ ಮತ್ತು ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಲ್ಲಚೆರವು ಪ್ರದೇಶದ ಕೌಲ್‍ಬಜಾರ್‍ನ ಮಹಮ್ಮದೀಯ ಕಾಲೇಜು ಹಿಂಭಾಗದ ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ದೂ.08392-254875 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ