ಪೇರಲ ಬೆಳೆದು ಕೈ ತುಂಬ ಆದಾಯ ಪಡೆದ ಕಾಗವಾಡ ರೈತ ಅಶೋಕ !!
ಕಾಗವಾಡ:* ಮನರೇಗಾ ಯೋಜನೆಯಡಿ ತೈವಾನ್ ಪಿಂಕ್ ಪೇರಲ ಬೆಳೆದು ಕಾಗವಾಡ ತಾಲೂಕಿನ ರೈತರೊಬ್ಬರು ಕೇವಲ 10 ತಿಂಗಳಲ್ಲಿ 10 ಲಕ್ಷ ಆದಾಯ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.
ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ರೈತ ಅಶೋಕ ಮಾಳಿ ಎಂಬ ಕೃಷಿಯಲ್ಲಿ ಅಮೋಘ ಸಾಧನೆಗೈದು ಎಲ್ಲರ ಹಬ್ಬೆರುವಂತೆ ಮಾಡಿದ್ದಾರೆ.
1 ಲಕ್ಷ ಅನುದಾನ: ಮನರೇಗಾ ಯೋಜನೆಯಡಿ ಸನ್ 2024-25 ಸಾಲಿನಲ್ಲಿ ಪೇರಲ ಬೆಳೆಯಲು ರೈತ ಅಶೋಕ ಅವರು ಅರ್ಜಿ ಸಲ್ಲಿಸಿದ್ದರು. ಕ್ರಿಯಾ ಯೋಜನೆ ಅನುಮೋದನೆ ಬಳಿಕ ಸ್ಥಳೀಯ ಏಜೆಂಟರ್ ಸಹಾಯದಿಂದ ಆಂದ್ರ ಪ್ರದೇಶದಿಂದ 40 ರೂ ಒಂದರಂತೆ ಒಟ್ಟು 56 ಸಾವಿರ ರೂ ವ್ಯಯಿಸಿ 1400 ಸಸಿಗಳ ತಂದು 1.5 ಎಕರೆ ಪ್ರದೇಶದಲ್ಲಿ 6*4 ಅಡಿಗೆ ಒಂದರಂತೆ 1400 ಸಸಿಗಳ ನಾಟಿ ಮಾಡಿದ್ದಾರೆ.
ಸಾವಯುವ ಗೊಬ್ಬರ ಬಳಕೆ ಮಾಡಿದ್ದು, ಬಾವಿಯಿಂದ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿಗಾಗಿ 60 ಸಾವಿರ ರೂ. ಹಾಗೂ 45 ಸಾವಿರ ತಿಪ್ಪೆ ಗೊಬ್ಬರ, ಸೇರಿದಂತೆ ಸಸಿಗಳ ಪೋಷಣೆಗೆ 10 ತಿಂಗಳ ಅವಧಿಯಲ್ಲಿ 4 ಲಕ್ಷ ರೂ. ವ್ಯಯಿಸಿದ್ದಾರೆ. ಸದ್ಯ ಮೊದಲ ಫಸಲಿನಲ್ಲಿ 22 ಟನ್ ಹಣ್ಣು ಕೈ ಸೇರಿದ್ದು, ನೆರೆಯ ಗೋವಾ/ ಕೊಲ್ಹಾಪೂರ ಮೂಲದ ಹಣ್ಣಿನ ವ್ಯಾಪಾರಿಗಳಿಗೆ ಪ್ರತಿ ಕೆಜಿಗೆ 45.50 ರೂ. ದಂತೆ ಮಾರಾಟ ಮಾಡಿ ಒಟ್ಟು 10 ಲಕ್ಷ ರೂ. ಆದಾಯ ಪಡೆದಿದ್ದಾರೆ.
ನರೇಗಾ ಕೂಲಿಕಾರರಿಗೆ ಸಹಕಾರ: ಮನರೇಗಾ ಯೋಜನೆಯಡಿ 15 ಜನರಿಗೆ 15 ದಿನಗಳ ಕಾಲ ಕೆಲಸ ಮಾಡುವ ಮೂಲಕ 231 ಮಾನವ ದಿನಗಳ ಸೃಜನೆ ಮಾಡಲಾಗಿದೆ. 349 ರೂ. ದಂತೆ 80 ಸಾವಿರ ರೂ ಕೂಲಿ ಮೊತ್ತ ಪಡೆದುಕೊಂಡು ಗುಂಡಿ ತೋಡಿ ಸಸಿಗಳ ನಾಟಿ ಮಾಡಿದ್ದಾರೆ.
ಈ ಮುಂಚೆ ದ್ರಾಕ್ಷಿ ಬೆಳೆ ಮಾಡಿದ್ದರು ಹವಾಮಾನ ವೈಪರಿತ್ಯದಿಂದಾಗಿ ನಷ್ಟ ಅನುಭವಿಸಿ ಬಳಿಕ 3 ವರ್ಷ ಕಬ್ಬು ಬೆಳೆದಿದ್ದು, ಪ್ರತಿ ಬಾರಿ 50 ರಿಂದ 60 ಟನ್ ಕಬ್ಬು ಬೆಳೆದು 1 ರಿಂದ 1.50 ಲಕ್ಷ ಹಣ ಆದಾಯ ಪಡೆಯುತ್ತಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಕಾರದಿಂದ ಇದೇ ಮೊದಲ ಬಾರಿಗೆ ನರೇಗಾ ಯೋಜನೆಯಡಿ ಪೇರಲ ಬೆಳೆದಿದ್ದಾರೆ.
“ಕೋಟ್”
ದ್ರಾಕ್ಷಿ ಬೆಳೆ ನಷ್ಟ ಅನುಭವಿಸಿದ್ದರಿಂದ 3 ಲಕ್ಷದವರೆಗೆ ಸಾಲ ಮಾಡಿಕೊಂಡಿದ್ದೆ ಸದ್ಯ ಪೇರಲ ಬೆಳೆ ಕೈ ಹಿಡಿದ ಹಿನ್ನೆಲೆ ಎಲ್ಲ ಸಾಲ ತೀರಲಿದೆ. ಉಳಿದ ಹಣ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸುವೆ_ *ಅಶೋಕ ಮಾಳಿ( ರೈತ ಫಲಾನುಭವಿ)
ತೋಟಗಾರಿಕೆ ಬೆಳೆ ಬೆಳೆಯಲು ಮನರೇಗಾ ಯೋಜನೆ ಉತ್ತೇಜನ ನೀಡುತ್ತಿದ್ದು, ಇದರ ಲಾಭ ಪಡೆದು ರೈತರು ಆರ್ಥಿಕವಾಗಿ ಸದೃಢವಾಗಬೇಕು_ *ವೀರಣ್ಣ ವಾಲಿ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ, ಕಾಗವಾಡ.