ನ್ಯಾನೋ ಯೂರಿಯಾ, ಡಿಎಪಿ ಬಳಕೆ ಹೆಚ್ಚಾಗಲಿ:ಮಂಜುಳಾ

Pratibha Boi
ನ್ಯಾನೋ ಯೂರಿಯಾ, ಡಿಎಪಿ ಬಳಕೆ ಹೆಚ್ಚಾಗಲಿ:ಮಂಜುಳಾ
WhatsApp Group Join Now
Telegram Group Join Now

ಜಮಖಂಡಿ: ಬಿತ್ತನೆ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದಂತೆಯೇ ರಸಗೊಬ್ಬರಗಳ ಬೇಡಿಕೆ ಹೆಚ್ಚ್ಚಾತ್ತದೆ. ರೈತರು ಹೆಚ್ಚಾಗಿ ನೇರ ರಸಗೊಬ್ಬರಗಳ ಬಳಕೆ ಮಾಡುಬದರಿಂದ ರಸಗೊಬ್ಬರಗಳ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಉಪಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಇಫ್ಕೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪ್ರಗತಿಪರ ರೈತ ರುದ್ರಪ್ಪ ಮಲ್ಲಪ್ಪ ಝುಲಪಿ ತೋಟದಲ್ಲಿ ಗೋವಿನಜೋಳ ಬೆಳೆಯಲ್ಲಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ ಬಳಕೆ ಕುರಿತು ದ್ರೋಣ ಮೂಲಕ ಸಿಂಪರಣೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಸಮಸ್ಯೆಗಳನ್ನು ಗಮನಿಸಿರುವ ಇಫ್ಕೋ ಸಂಸ್ಥೆ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಯೂರಿಯಾ ಮತ್ತು ಡಿ.ಎ.ಪಿ ದ್ರಾವಣವನ್ನು ತಯಾರಿಸಿದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿಗಳ ಬಳಕೆಯಿಂದ ಶೇ.೫೦ರಷ್ಟು ರಸಗೊಬ್ಬರಗಳ ಬಳಕೆ ಕಡಿತಗೊಳದಳುವ ಮೂಲಕ ಬೆಳೆ ಗುಣಮಟ್ಟ ಮತ್ತು ಇಳುವರಿ ಹೆಚ್ಚಾಗಲಿದೆ ಎಂದರು.
ನ್ಯಾನೋ ಗೊಬ್ಬರಗಳು ಪರಿಸರ ಸ್ನೇಹಿಯಾಗಿದ್ದು, ವಾತಾವರಣ ವೈಪರಿತ್ಯದ ದುಷ್ಪರಿಣಾಮ ತಡೆಗಟ್ಟುತ್ತದೆ. ಅರ್ಧ ಲೀಟರಿನ ಕೇವಲ ಒಂದು ಬಾಟಲ್ ಒಂದು ಚೀಲ ರಸಗೊಬ್ಬರಕ್ಕೆ ಸಮವಾಗಿದೆ. ನ್ಯಾನೋ ಗೊಬ್ಬರ ಬಳಕೆಯಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಕೃಷಿ ಕಾರ್ಮಿಕರ ಅವಲಂಬನೆ ಕಡಿತಗೊಳಿಸುವ ಮೂಲಕ ಸಮಯ ಉಳಿತಾಯವಾಗಲಿದೆ. ಡ್ರೋಣ ಯಂತ್ರವನ್ನು ಬಾಡಿಗೆ ಪಡೆದು ನ್ಯಾನೋ ಗೊಬ್ಬರ ಸಿಂಪರಣೆ ಹಾಗೂ ಕೀಟನಾಶಕಗಳ ಸಿಂಪರಣೆ ಮಾಡಬಹುದು. ರೈತರು ನೇರ ಗೊಬ್ಬರಗಳ ಬದಲಾಗಿ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಾಗಿ ಮಾಡಬೇಕೆಂದರು.
ಇಪ್ಕೋ ಸಂಸ್ಥೆಯ ಧರೆಪ್ಪ ರಾಮತೀರ್ಥ ಮಾತನಾಡಿ, ನ್ಯಾನೋ ಯೂರಿಯಾ ಮತ್ತು ಡಿ.ಎ.ಪಿ ಸಿಂಪರಣೆಗೆ ನಮ್ಮನ್ನು ಅಥವಾ ರೈತ ಸಂಪರ್ಕಕ್ಕೆ ಸಂಪರ್ಕಿಸಿದಲ್ಲಿ ನಿಮ್ಮ ತೋಟಕ್ಕೆ ಬಂದು ಸಿಂಪರಣೆ ಮಾಡಿಕೊಡುತ್ತೇವೆ. ಒಂದು ಎಕರೆ ಸಿಂಪರಣೆ ಮಾಡಲು ನಾಲ್ಕು ನೂರಗಳನ್ನು ಬಾಡಿಗೆ ಪಡೆಯಲಾಗುವದು. ಡ್ರೋಣ ಯಂತ್ರವು ೧೦ ಲೀ ಸಾಮರ್ಥ್ಯ ಹೊಂದಿದ್ದು, ಒಂದು ಎಕರೆ ಪ್ರದೇಶವನ್ನು ಕೇವಲ ೧೦ ನಿಮಿಷದಲ್ಲಿ ಸಿಂಪರಣೆ ಮಾಡುತ್ತದೆ. ಕಬ್ಬು, ಗೋವಿನಜೋಳ, ತೊಗರಿ, ಉದ್ದು, ಹೆಸರು ಇನ್ನಿತರೆ ಬೆಳೆಗಳಿಗೆ ಸಿಂಪರಣೆ ಮಾಡಬಹುದು ಎಂದರು.
ಕೃಷಿ ಅಧಿಕಾರಿ ಶಂಕರರಾವ ಪವಾರ, ಆತ್ಮಯೋಜನೆ ತಾಲೂಕ ತಾಂತ್ರಿಕ ವ್ಯವಸ್ಥಾಪಕ ಮೋಹಿನ ಜಮಖಂಡಿ ಪ್ರಾತ್ಯಕ್ಷಿಕೆಯ ಉಸ್ತುವಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧಿಕಾರಿ ಸಂಜೀವ ಜೋಶಿ, ಬಸವರಾಜ ಕೊಂಗವಾಡ, ಪ್ರಗತಿಪರ ರೈತರಾದ ಬಸಪ್ಪ ಗೋಠೆ, ಮಂಜುನಾಥ ಗಲಗಲಿ, ಬಸವರಾಜ ಪಾಟೀಲ, ಶ್ರೀಶೈಲ ಭೂಮಾರ, ಪಂಡಿತ ಝುಲಪಿ, ರುದ್ರಪ್ಪ ಮರೆಗುದ್ದಿ, ಕರೆಪ್ಪ ಮಂಟೂರ, ಈಶ್ವರಯ್ಯ ರೂಗಿ, ವಿಜಯ ಝುಲಪಿ, ಶ್ಯಾಮಲಾ ಹೆಗ್ಗೂರ ಸಹಿತ ಹೋಬಳಿಯ ಎಲ್ಲ ಕೃಷಿ ಸಖಿಯರು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article