ಮಹಾಲಿಂಗಪುರ: ಎಂದೆಂದಿಗೂ ಶಾಂತಿ ಬಯಸಿ ಬದುಕು ಸಾಗಿಸುವ ದೇಶ ನಮ್ಮದು. ಯುದ್ಧ ಎಂಬ ಶಬ್ದ ಅಪಾಯಕಾರಿಯಾಗಿದ್ದು, ಎರಡೂ ದೇಶಗಳ ಅಭಿವೃದ್ಧಿ ವಿ?ಯದಲ್ಲಿ ಮಾರಕ. ನೆರೆಯ ರಾ? ಪಾಕಿಸ್ತಾನ ಇದನ್ನು ಅರ್ಥೈಸಿ ಜನರ ಹಿತ ಬಯಸಿ ರಾಜಕಾರಣ ಮಾಡಬೇಕು ಎಂದು ಕಾಂಗ್ರೆಸ್ ಕಮಿಟಿ ಜಿಲ್ಲಾಧ್ಯಕ್ಷ ಎಸ್. ನಂಜಯ್ಯನಮಠ ಹೇಳಿದರು.
ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿ ಗೃಹದಲ್ಲಿ ಪತ್ರಕತ್ರರೊಂದಿಗೆ ಮಾತನಾಡಿದ ಎಲ್ಲದಕ್ಕೂ ಯುಧ್ಧವೇ ಪರಿಹಾರವಲ್ಲ, ಏನೇ ಇದ್ದರೂ ಮಾತುಕತೆಗಳ ಮೂಲಕ ತಾರ್ಕಿಕ ಅಂತ್ಯ ಕಾಣಬೇಕು. ಇದಕ್ಕೆ ನಮ್ಮ ದೇಶದ ಪ್ರಧಾನಿಗಳು ಮಾನವೀಯ ನೆಲೆಯಲ್ಲಿ ಸಮ್ಮತಿಸಿದ್ದಾರೆ.ಇ?ಗಿಯೂ ಪಾಕಿಸ್ತಾನ ಕದನ ವಿರಾಮ ದಿಕ್ಕರಿಸಿ ಮತ್ತೆ ಮತ್ತೆ ಸೆಲ್ ದಾಳಿಗಳನ್ನು ಮಾಡುವ ಮೂಲಕ ದೇಶದ ಭದ್ರತೆಗೆಗೆ ಸವಾಲು ಹಾಕುತ್ತಿದೆ. ಇ?ಕ್ಕೆ ಇದು ಸೀಮಿತಗೊಳ್ಳದೆ ಹೋದರೆ ನಮ್ಮ ದೇಶವೂ ಕೂಡ ೧೯೭೧ ರಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಆದೇಶದಂತೆ ಲಾಹೋರ್ ಹೊಕ್ಕು ಹೇಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತೋ, ಹಾಗೆ ಮತ್ತೊಮ್ಮೆ ಅವರಿಗೆ ಕೇಂದ್ರ ಪಾಠ ಕಲಿಸಬೇಕು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ.
ಈ ವಿ?ಯಕ್ಕೆ ನಮ್ಮ ಕೇಂದ್ರಿಯ ಎ.ಆಯ್. ಸಿ. ಸಿ ಮತ್ತು ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಇದಕ್ಕೆ ರಾಜ್ಯ ಸಂಪುಟವೂ ಸಮ್ಮತಿ ಸೂಚಿಸಿದೆ. ಕೇಂದ್ರ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಮತ್ತು ಆಮದು, ರಪ್ತು ಸ್ತಗಿತದ ನಿರ್ಧಾರ ಕಾರಣದಿಂದ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕ್ಕೊಳ್ಳನವೆಂಬ ವಾದಕ್ಕೆ ಪಾಕಿಸ್ತಾನ ಬಂದಿದೆ.ಇದು ಸಹ ನಮ್ಮ ದೇಶದ ಜಯ.
ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ನಮ್ಮ ದೇಶದ ?ರತ್ತುಗಳಿಗೆ ಮನ್ನಣೆ ಸಿಕ್ಕರೆ ಮಾತ್ರ ಯುಧ್ಧಕ್ಕೆ ತಿಲಾಂಜಲಿ.ಇಲ್ಲವಾದರೆ ಅವರಿಗೆ ತಕ್ಕ ಪಾಠ ಕಲಿಸಲು ದೇಶ ಸನ್ನದ್ಧವಾಗಬೇಕು. ಈ ಸಮಯ ನಾವು ರಾಜಕಾರಣ ಮಾಡದೆ ಸೇನೆಗೆ ಬಲ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಉತ್ತೂರು, ಬಾಗಲಕೋಟ ಜಿಲ್ಲಾ ಕಾಂಗ್ರೇಸ ಸಮೀತಿ ಕಿಸಾನ ಘಟಕದ ಜಿಲ್ಲಾಧ್ಯಕ್ಷ ಆನಂದ ಹಟ್ಟಿ. ತೇರದಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಪಾದ ಗುಂಡಾ ಮುಖಂಡರಾದ ಪ್ರಕಾಶ ಮಮದಾಪೂರ, ಮತ್ತು ವಿಠ್ಠಲ ಹೊಸಮನಿ ಇದ್ದರು.