ನೇಸರಗಿ. 2023 ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷದ ಶಾಸಕರಾಗಿ ನಮ್ಮ ಸಹೋದರ ಬಾಬಾಸಾಹೇಬ ಪಾಟೀಲ ಅವರು ಆಯ್ಕೆಯಾಗಿ 2024 ನೇ ವರ್ಷದಲ್ಲಿ ಹೆಮ್ಮೆಯ ತಾಯಿ ಚನ್ನಮ್ಮಾಜಿಯ 200 ನೇ ಸ್ವಾತಂತ್ರ್ಯ ವಿಜಯೋತ್ಸವ ( ಕಿತ್ತೂರು ಉತ್ಸವದ) ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದರು. ಈಗ ನಾನು ಪ್ರಥಮ ಕಿತ್ತೂರು ತಾಲೂಕಾ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಆಯ್ಕೆಯಾಗಿ ಪೂಜ್ಯ ಮುರಗೋಡ ಶ್ರೀ ಮಹಾಂತೇಶ ಶಿವಯೋಗಿಗಳು ಸ್ಥಾಪಿಸಿದ ಬಿಡಿಸಿಸಿ ಬ್ಯಾಂಕಿನ 100 ನೇ ವರ್ಷದ ಶತಮಾನೋತ್ಸವ ಸಮಾರಂಭದಲ್ಲಿ ಬ್ಯಾಂಕಿನ ನಿರ್ದೇಶಕನಾಗಿ ಆಯ್ಕೆ ಅಗಿದ್ದು ಹೆಮ್ಮೆ ತಂದಿದೆ ಎಂದು ನೂತನ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.
ಅವರು ನೇಗಿನಹಾಳ ಗ್ರಾಮದ ತಮ್ಮ ಗೃಹ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಕಿತ್ತೂರು ತಾಲೂಕಿನ ಪಿಕೆಪಿಎಸ್ ಸದಸ್ಯರು, ಅಧ್ಯಕ್ಷರು, ರೈತರ ಹಾಗೂ ಕಾರ್ಯಕರ್ತರ, ಬೆಂಬಲಿಗರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಹೋದರ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸಹಾಯ ಸಹಕಾರದಿಂದ ಡಿಸಿಸಿ ಬ್ಯಾಂಕ ನಿರ್ದೇಶಕ ಅಗಿದ್ದು ಅವರೆಲ್ಲರಿಗೂ ನಾನು ಅಭಿನಂದಿಸುತ್ತೇನೆ ಎಂದರು.
ನಾನು ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಪದವಿಗೆ ಅಸೆ ಪಡದೆ ಹಿರಿಯರ ಮಾರ್ಗದರ್ಶನದಲ್ಲಿ ಪಿಕೆಪಿಎಸ್ ಸಹಕಾರಿ ಸಂಘಗಳ ಆಫೀಸ್ ಕಟ್ಟಡ ನಿರ್ಮಾಣಕ್ಕೆ ಆದ್ಯತೆ, ರೈತರ ಪತ್ತು ಹೆಚ್ಚಳ, ಗೋಡಾವನ ನಿರ್ಮಾಣ, ಬೀಜ, ರಸಗೊಬ್ಬರಗಳು ಉತ್ತಮ ಗುಣಮಟ್ಟದಲ್ಲಿ, ಸರಿಯಾದ ಸಮಯದಲ್ಲಿ ರೈತರಿಗೆ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಚುನಾವಣೆಯಲ್ಲಿ ನಮ್ಮ ಪರವಾಗಿ 7 ಜನ ಕ್ರಾಸ್ ಮತ ಹಾಕಿದ್ದಾರೆ ಆದರೆ ಬಸವರಾಜ ಪರವಣ್ಣವರ ಅವರ ಹೆಸರನ್ನು ಮಾತ್ರ ಪ್ರಸ್ತಾಪ ಮಾಡುತ್ತಿದ್ದಾರೆ, ಉಳಿದ 6 ಜನರ ಹೆಸರನ್ನು ಬಹಿರಂಗಪಡಿಸಲಿ ನೋಡೋಣ. ಅವರೆಲ್ಲ ನಮ್ಮ ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿವೃದ್ಧಿಗೆ ಒತ್ತು ಕೊಟ್ಟು ನಮಗೆ ಬೆಂಬಲಿಸಿದ್ದಾರೆ. ಅವರ ಕ್ರಿಯಾಶೀಲತೆಗೆ ತಕ್ಕಂತೆ ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲೆ ಇದ್ದು ಅದರ ಸಲುವಾಗಿ ಚುನಾವಣಾ ಪೂರ್ವದಲ್ಲಿ ಕಟ್ಟಡ ಇಲ್ಲದ 10 ಪಿಕೆಪಿಎಸ್ ಸಹಕಾರಿ ಸಂಘಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ನೀಡಿದ್ದು, ಮುಂದಿನ ದಿನಮಾನಗಳಲ್ಲಿ ಎಲ್ಲ 32 ಪಿಕೆಪಿಎಸ್ ಸಂಘಗಳಿಗೆ ಕಟ್ಟಡ ನಿರ್ಮಾಣ, ಗೋಡಾವನ ನಿರ್ಮಾಣ, ಉನ್ನತ ಮಟ್ಟದ ಬೀಜ ರಸಗೊಬ್ಬರ ವಿತರಣೆಗೆ ಕ್ರಮ, ಕಿತ್ತೂರು ತಾಲೂಕಿನ ರೈತರ ಪತ್ತು ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಡಿಸಿಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.


