ಬೆಳಗಾವಿ, ಏ.28: ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾಕಾವು ಮತ್ತಷ್ಟು ಹೆಚ್ಚಾಗಿದ್ದು, ನಿನ್ನೆಯಷ್ಟೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ.
ಇನ್ನು ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಹಿನ್ನೆಲೆ ಇಂದು(ಏ.27) ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಜಗದೀಶ್ ಶೆಟ್ಟರ್ , ಬಿಜೆಪಿ ಕಾರ್ಯಕರ್ತರು ಮೋದಿ ಸ್ವಾಗತಿಸಿದರು. ಇಂದು ರಾತ್ರಿ ಕಾಕತಿ ಬಳಿಯ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಹೌದು, ನಾಳೆ ಒಂದೇ ದಿನ ಪ್ರಧಾನಿ ಅವರು ಬೆಳಗಾವಿ, ದಾವಣಗೆರೆ, ಹೊಸಪೇಟೆ, ಶಿರಸಿ ಸೇರಿದಂತೆ ನಾಲ್ಕು ಕಡೆ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 10.55ಕ್ಕೆ ಹೋಟೆಲ್ನಿಂದ ಹೊರಡುವ ಪ್ರಧಾನಿ ಮೋದಿ, ಬೆಳಗ್ಗೆ 11 ಗಂಟೆಗೆ ಮಾಲಿನಿ ಸಿಟಿ ಮೈದಾನದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.55ಕ್ಕೆ ಬೆಳಗಾವಿ ಹೆಲಿಪ್ಯಾಡ್ನಿಂದ ಶಿರಸಿಗೆ ಪ್ರಯಾಣಿಸಿ 12.55ಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಲಿದ್ದಾರೆ.
ಬಳಿಕ ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಶಿರಸಿ ಹೆಲಿಪ್ಯಾಡ್ನಿಂದ 2.50ಕ್ಕೆ ದಾವಣಗೆರೆಗೆ ಆಗಮಿಸಲಿದ್ದು, ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸಿ, ನಂತರ ಸಂಜೆ 4.50ಕ್ಕೆ ಹೊಸಪೇಟೆ ತಲುಪಲಿದ್ದಾರೆ. ಅಲ್ಲಿ 5 ಗಂಟೆಗೆ ಹೊಸಪೇಟೆ ಸಮಾವೇಶದಲ್ಲಿ ಭಾಗವಹಿಸಿ ರಾತ್ರಿ ಹೊಸಪೇಟೆಯಲ್ಲಿ ಮೋದಿ ವಾಸ್ತವ್ಯ ಮಾಡಲಿದ್ದಾರೆ.
ಏಪ್ರಿಲ್ 29ರ ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಿಂದ ಮಧ್ಯಾಹ್ನ 12.05ಕ್ಕೆ ಬಾಗಲಕೋಟೆಗೆ ತಲುಪಿ ಮಧ್ಯಾಹ್ನ 12.15ಕ್ಕೆ ಬಾಗಲಕೋಟೆಯ ತೋಟಗಾರಿಕೆ ವಿವಿ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 1.05ಕ್ಕೆ ಬಾಗಲಕೋಟೆಯಿಂದ ಸೊಲ್ಲಾಪುರಕ್ಕೆ ಮೋದಿ ಪ್ರಯಾಣಿಸಲಿದ್ದಾರೆ.