ಬಳ್ಳಾರಿ,ಸೆ.೨೭: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ದುಶ್ಚಟಗಳಿಂದ ದೂರವಿರಲು ಯುವಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಶನಿವಾರದಂದು ಬಳ್ಳಾರಿ ನಗರದಲ್ಲಿ ನಮೋ ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಅಧಿದೇವತೆ ಶ್ರೀಕನಕದುರ್ಗಮ್ಮ ದೇವಸ್ಥಾನದಿಂದ ಬೆಳಿಗ್ಗೆ ೭.೩೦ಕ್ಕೆ ಪ್ರಾರಂಭವಾದ ಮ್ಯಾರಾಥಾನ್ ಡಬಲ್ ರಸ್ತೆ, ಗಡಿಗಿ ಚೆನ್ನಪ್ಪ ವೃತ್ತ, ರೈಲ್ವೇ ಸ್ಟೇಷನ್ ರಸ್ತೆ, ಮೋತಿ ಸರ್ಕಲ್‌ನ ಬುಡಾ ಕಾಂಪ್ಲೆಕ್ಸ್ವರೆಗೆ ತಲುಪಿತು.
ಬಿಜೆಪಿ ಬಳ್ಳಾರಿ ನಗರ ಘಟಕದಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಕೆಎಂಎಫ್ನ ಮಾಜಿ ರಾಜ್ಯಾಧ್ಯಕ್ಷ , ಬಳ್ಳಾರಿ ನಗರ ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ ಮಾತನಾಡಿ, ದುಷ್ಕರ್ಮಿಗಳಿಂದ ನಡೆಯುತ್ತಿರುವ ಮಾದಕ ವಸ್ತುÀಗಳ ವ್ಯಸನಿಗಳಾಗಿ ತಮ್ಮ ಓದನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಈ ಕೆಟ್ಟ ಪ್ರಪಂಚದಿAದ ಹೊರ ತರಬೇಕೆಂಬ ಬಗ್ಗೆ ಅರಿವು ಮೂಡಿಸುವುದೇ ಮ್ಯಾರಥಾನ್‌ನ ಉದ್ದೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದAತೆ ನಮ್ಮ ಯುವಜನತೆ ಅಭಿವೃದ್ಧಿ ಭಾರತದ ರೂವಾರಿಗಳಾಗಬೇಕು. ಅದಕ್ಕಾಗಿ ನಶೆ ಮುಕ್ತ ಭಾರತ ಮಂದಾಗೋಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ನಾಯ್ಡು ಮೋಕಾ, ಬಳ್ಳಾರಿ ಮಹಾನಗರ ಪಾಲಿಕೆಯ ೨೨ನೇ ವಾರ್ಡ್ನ ಸದಸ್ಯ ಕೆ.ಹನುಮಂತಪ್ಪ, ಬುಡಾದ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾxïರೆಡ್ಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಗರ‍್ರಂ ವೆಂಕಟರಮಣ, ಕಾರ್ಯದರ್ಶಿಗಳಾದ ಕೆಎಸ್ ದಿವಾಕರ್, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಗುರುಲಿಂಗನಗೌಡ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರುಗಳು, ಮಾಜಿ ನಿಗಮ ಮಂಡಳಿಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಸದಸ್ಯರುಗಳು, ಮಂಡಲ ಪದಾಧಿಕಾರಿಗಳು ಎಲ್ಲಾ ಪಕ್ಷದ ಮುಖಂಡರು, ಸುಮಾರು ೯ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಾಗೂ ಮುಖ್ಯವಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿದ್ದರು.


