ಯರಗಟ್ಟಿ: ಸಮೀಪದ ರೈನಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಅಡಿಯಲ್ಲಿ ಅಬಿವೃದ್ಧಿ ಪಡಿಸಿದ ನಮ್ಮೂರ ನಮ್ಮ ಕೆರೆ ಅಂಗಲದಲ್ಲಿ ಸಸಿ ನಡುವ ಕಾರ್ಯಕ್ರಮಕ್ಕೆ ಜಿಲ್ಲಾ ನಿರ್ದೇಶಕ ಲವಕುಮಾರ ಚಾಲನೆ ನೀಡಿದರು.
ತಾಲೂಕಿನಲ್ಲಿ ೭೫೬ ಕೆರೆಗಳನ್ನು ಪುನಶ್ಚೇತನಗೊಳಿಸಿ ಹಸ್ತಾಂತರಿಲಾಗಿದ ಕೆರೆಯನ್ನು ರಕ್ಷಣೆ ಮಾಡಿದರೆ ಪವಿತ್ರ ಗಂಗೆಯನ್ನು ರಕ್ಷಣೆ ಮಾಡಿದ? ಪುಣ್ಯ ಸಿಗುತ್ತದೆ. ಜಲ ಸಂರಕ್ಷಣೆ ಮತ್ತು ಸ್ವಚ್ಛ ಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕೆರೆಗಳಿಗೆ ಕಸ ಹಾಕಬಾರದು. ಆ ಉದ್ದೇಶದಿಂದ ನಮ್ಮೂರ ನಮ್ಮ ಕೆರೆ ಅಂಗಲದಲ್ಲಿ ಸಸಿ ನಡುವ ಮೂಲಕ ಸುತ್ತಲೂ ಹಣ್ಣುಗಳ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.
ಈ ವೇಳೆ ಗ್ರಾ. ಪಂ. ಅಧ್ಯಕ್ಷ ಸತ್ಯವ್ವ ಗೊರಗುದ್ದಿ, ತಾಲೂಕು ಯೋಜನಾಧಿಕಾರಿ ಶ್ರೀಕಾಂತ ಎಮ್, ಕೃಷಿ ಇಲಾಖೆಯ ಉಮೇಶ ಯರಗಟ್ಟಿ, ಗಸ್ತು ಅರಣ್ಯ ಪಾಲಕರಾದ ಎಸ್. ಎಂ. ರಾಯನಾಯ್ಕರ, ದುರ್ಗಪ್ಪ ಅರಟಗಲ್ಲ, ಮಾಜಿ ಸೈನಿಕ ಸೋಮಪ್ಪ ಕಳ್ಳಿಗುದ್ದಿ, ಮುದಕಪ್ಪ ತೋರಣಗಟ್ಟಿ ಒಕ್ಕೂಟದ ಅಧ್ಯಕ್ಷ ಲಲಿತಾ, ವಲಯ ಮೇಲ್ವಿಚಾರಕರಾದ ಮಂಜುಳಾ ಸೇರಿದಂತೆ ಗ್ರಾಮಸ್ಥರು ಅನೆಕರು ಇತರರು ಇದ್ದರು.