ನೈಜ್ ಫಲಾನುಭವಿಗಳ ಯಾದಿ ಸಡಿದ್ದ ಪಡಿಸಿ: ಶಾಸಕ ನಿಕಿಲ್ ಕತ್ತಿ

Ravi Talawar
ನೈಜ್ ಫಲಾನುಭವಿಗಳ ಯಾದಿ ಸಡಿದ್ದ ಪಡಿಸಿ: ಶಾಸಕ ನಿಕಿಲ್ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ ಕ್ಷೇತ್ರದ ಬಗರ ಹುಕುಂ ಸಮಿತಿ ಸಭೆ.
ಹುಕ್ಕೇರಿ: ಸರಕಾರದ ಮಾನದಂಡಗಳ ಅನ್ವಯ ಆಕ್ರಮ ಭೂ ಸಾಗುವಳಿ ಹಾಗೂ ಮನೆಗಳ ಅರ್ಹ ಫಲಾನುಭವಿಗಳ ಗುರುತಿಸಿ ಪಟ್ಟಿ ಸಿದ್ದ ಪಡಿಸಬೆಕೇಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಅವರು ಸ್ಥಳಿಯ ತಹಶಿಲ್ದಾರ ಕಛೇರಿಯಲ್ಲಿ ಜರುಗಿದ ಬಗರ ಹುಕುಂ ಸಾಗುವಳಿ ಸಕ್ರಮ ಸಮತಿ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿ ತಾಲೂಕಿನಲ್ಲಿ ಆಕ್ರಮ ಸಕ್ರಮಕ್ಕೆ ಸಲ್ಲಿಸಿರುವ ಆಯಾ ಗ್ರಾಮಗಳ ಜನರ ಅರ್ಜಿಗಳ , ಸರಕಾರಿ ಜಮೀನು, ಆಕ್ರಮ ಭೂ ಸಾಗುವಳಿ ಮತ್ತು ಮನೆ ನಿರ್ಮಾಣಗಳ ಅರ್ಜಿದಾರ ಯಾದಿ ತಯಾರಿಸಿ ಹಾಗೂ ಸರಕಾರ ನಿಗದಿಪಡಿಸಿದ ೨೦೦೫ ಸಾಲಿನ ಮುಂಚೆಯ ನಿಯಮಗಳ ಉಲ್ಘಂಘನೆಯಾದಂತೆ ನೋಡಿಕೊಂಡು ಕಂದಾಯ ಇಲಾಖೆಯ ಗ್ರಾಮಲೇಕ್ಕಾಧಿಕಾರಿಗಳು ಮತ್ತು ಸರ್ವೇ ಇಲಾಖೆಯವರು ಸ್ಥಾನಿಕ ಸ್ಥಳ ಪರೀಶಿಲಿಸಿ ಹಾಗೂ ಗ್ರಾಮಗಳ ಜಾನುವಾರ ಮತ್ತು ಕುರಿಗಳಿಗೆ ಮೀಸಲಿರಿಸಿದ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ಸ್ಥಳಗಳನ್ನು ಗುರುತಿಸಿ ವರದಿ ನೀಡಬೇಕು
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವ ಆಧಾರದಲ್ಲಿ ಮೇಲೆ ಸರಕಾರಿ ಸ್ಥಳಗಳ ಮನೆಗಳನ್ನು ನಿರ್ಮಿಸಲು ಅವಕಾಶ ನೀಡಿ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಿರುವ ಸಂಪೂರ್ಣ ಮಾಹಿತಿಗಳನ್ನು ನೀಡಬೇಕೆಂದು ತಾ.ಪಂ ಕಾರ್ಯನಿರ್ವಾಹಕಧಿಕಾರಿ ಅವರಿಗೆ ಸೂಚಿಸಿದರು.
ತಹಶಿಲ್ದಾರ ಮಂಜುಳಾ ನಾಯಕ ಮಾಹಿತಿ ನೀಡಿ ತಾಲೂಕಿನಲ್ಲಿ ೧೫೦೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದರೂ ಇನ್ನಿತರ ದಾಖಾಲಾತಿಗಳ ಕೊರತೆಯಿಂದ ಅರ್ಜಿಗಳು ಸರಕಾರದ ಹಂತದಲ್ಲಿ ತಿರಸ್ಕರತಗೊಂಡಿವೆಂದರು.
ಸಮಿತಿ ಸದಸ್ಯ ಕೆಂಪಣ್ಣ ಶಿರಹಟ್ಟಿ ಮಾತನಾಡಿ ಬಹಳ ವರ್ಷಗಳಿಂದ ಅರ್ಜಿದಾರರು ಭೂ ಸಾಗುವಳಿ ಹಾಗೂ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ ಅವರಿಗೆ ಅಧಿಕೃತವಾಗಿ ಸಕ್ರಮಗೊಳಿಸಬೇಕೆಂದು ಅಧ್ಯಕ್ಷರಿಗೆ ವಿನಂತಿಸಿಕೊಂಡರು.
ವರದಿಯ ತಯಾರಿಸಿದ ನಂತರ ಬಗರ ಹುಕ್ಕುಂ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ತಿರ್ಮಾನಿಸಲಾಯಿತು.
ತಹಶಿಲ್ದಾರ ಮಂಜುಳಾ ನಾಯಕ, ಇಓ ಟಿ ಆರ್ ಮಲ್ಲಾಡದ ಹುಕ್ಕೇರಿ ಮತ ಕ್ಷೇತ್ರ ಹಾಗೂ ಯಮಕನಮರಡಿ ಕ್ಷೇತ್ರದ ಬಗರಹುಕುಂ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ, ದ್ರಾಕ್ಷಾಯಣಿ ಏಶಿ, ಸದಾನಂದ ಗುಡಿಕಡೆ, ಶಿಕಂದರ ಸನದಿ, ಭಾರತಿ ಬೆಣ್ಣಿ, , ಗ್ರೇಡ್-೨ ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರರಾದ ಎನ್.ಆರ್.ಪಾಟೀಲ, ಕಂದಾಯ ನಿರೀಕ್ಷಕರಾದ ಎಂ.ಬಿ.ಸಾರಾಪೂರಿ, ಎ.ಎಂ.ಕಮತನೂರ, ಸಿ.ಕೆ.ಕಲಕಾಂಬಕರ, ಸವೇ ಇಲಾಖೆಯ ಸಹಾಯಕ ನಿರ್ದೇಶಕಿ ತನ್ವಿನ್ ಡಂಗೆ , ಅನಿತಾ ಏಶಿ, ಅಬ್ದುಲ್ ಸನದಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಸಂತೋಷ ನಾಯಕ, ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಶಿರ್ಷೀಕೆ ೭- ಹುಕ್ಕೇರಿ -೦೨.
ಹುಕ್ಕೇರಿ ತಹಶಿಲ್ದಾರ ಕಚೇರಿಯಲ್ಲಿ ಬಗರ ಹುಕುಂ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ , ತಹಶಿಲ್ದಾರ ಮಂಜುಳಾ ನಾಯಕ, ಇಓ ಟಿ.ಆರ ಮಲ್ಲಾಡದ ಹಾಗೂ ಸದಸ್ಯರು .

 

WhatsApp Group Join Now
Telegram Group Join Now
Share This Article