ಮೈಸೂರು: ದೇಶದ ಅತ್ಯಂತ ಕಟ್ಟಕಡೆಯ ಸ್ಥಳಗಳಿಗೂ ಮೂಲ ಸೌಕರ್ಯ ನಿರ್ಮಾಣ ಮಾಡಲಾಗುತ್ತಿದೆ, ಆದರೆ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿರುವ ಬುಡಕಟ್ಟು ಕುಗ್ರಾಮಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಳೂರು ಗಿರಿಜನರ ಕುಗ್ರಾಮದಲ್ಲಿ ಅಳವಡಿಸಿರುವ ಸೋಲಾರ್ ದೀಪಗಳು ಹಾಳಾಗಿದ್ದು, ಇಡೀ ಪ್ರದೇಶವೇ ಕತ್ತಲಲ್ಲಿ ಮುಳುಗಿದೆ. ಕತ್ತಲೆಯಿಂದಾಗಿ ಗಿರಿಜನರು ಈಗ ಕಾಡುಪ್ರಾಣಿಗಳ ದಾಳಿಯ ಭಯದಲ್ಲಿ ಬದುಕುತ್ತಿದ್ದಾರೆ.
ಅಂಗನವಾಡಿ ಸೇರಿದಂತೆ ಗ್ರಾಮದಲ್ಲಿ ಅಗತ್ಯ ಸೇವೆಗಳು ನಿಯಮಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ಈ ಕುಗ್ರಾಮಗಳಲ್ಲಿನ ಮನೆಗಳು ದೋಷಪೂರಿತ ಸೋಲಾರ್ ದೀಪಗಳಿಂದ ಕತ್ತಲೆಯಲ್ಲಿ ಮುಳುಗಿವೆ. ಮುಂಗಾರು ಮಳೆಗೂ ಮುಂಚಿತವಾಗಿಯೇ ಈ ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಇಲ್ಲಿನ ನಿವಾಸಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ.