ಮೇ 19 ರಂದು ನಾದ ವೈಭವ ಕಾರ್ಯಕ್ರಮ

Ravi Talawar
ಮೇ 19 ರಂದು ನಾದ ವೈಭವ  ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ,17: ನಗರದ ಆದರ್ಶ ಸೆಂಟ್ರಲ್ ಹೋಟೆಲ್ ನಲ್ಲಿ ನಾದಾಂಜಲಿ ಸಂಗೀತ ಪ್ರತಿಷ್ಠಾನ ವತಿಯಿಂದ ಮೇ 19 ರಂದು ನಾದ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ.

ನಾದಾಂಜಲಿ ಗಾಯಕರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಉತ್ತರ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ರಾಜ್ಯ ಹಾಗೂ ಅಂತರಾಜ್ಯದಿಂದ ಹವ್ಯಾಸಿ ಹಾಡುಗಾರರಿಂದ ಸಂಗೀತ  ಪ್ರದರ್ಶನ ಕಾರ್ಯಕ್ರಮ ಜರುಗಲಿದೆ‌‌.ಮುಖ್ಯ ಅತಿಥಿಗಳಾಗಿ ಪೂನಂ ಗುಲ್ಬಾನಿ ಹಾಗೂ ಜ್ಯೋತಿ ಬದಾಮಿ ಆಗಮಿಸಲಿದ್ದಾರೆ.

ಆದರ್ಶ ಗುಲ್ಬಾನಿ ಕಾರ್ಯವನ್ನು  ಉದ್ಘಾಟಿಸಲಿದ್ದಾರೆ.‌ ಗೌರವ ಅತಿಥಿಗಳಾಗಿ ಅಂತರಾ ಕುಲಕರ್ಣಿ , ಸ್ವಾತಿ ಸುತಾರ ಆಗಮಿಸಲಿದ್ದಾರೆ. ನಾದಾಂಜಲಿಯ ಸಂಸ್ಥಾಪಕರಾದ ಡಾ. ಶೈಲಜಾ ಕುಲಕರ್ಣಿ ಸ್ವಾಗತಿವವರು ಎಂದು ನಾದಾಂಜಲಿ ಸಂಗೀತ ಪ್ರತಿಷ್ಠಾನ ಅದ್ಯಕ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article