ಅಥಣಿ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಳ ಮಿಸಲಾತಿ ಏಕ ಸದಸ್ಯ ವಿಚಾರಣ ಆಯೋಗವು ದಿ. 04/08/2025 ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲವೇ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದಲ್ಲದೇ ಜಾತಿಯೇ ಅಲ್ಲದ ಆದಿ ಕರ್ನಾಟಕ. ಆದಿ ದ್ರಾವಿಡ. ಆದಿ ಆಂದ. ಸಮೂಹಕ್ಕೆ ಶೇ 1 ರಷ್ಟು ಮೀಸಲಾತಿ ನಿಗಡಿಪಡಿಸಿರುವುದನ್ನು ರದ್ದು ಪಡಿಸಿ ಸದರಿ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಅಥಣಿ ತಾಲೂಕಾ ಘಟಕದ ಅಧ್ಯಕ್ಷ ಅಪ್ಪಾಸಾಬ ಘಟಕಾಂಬಳೆ ಇವರ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಅಥಣಿ ತಾಲೂಕಾ ಘಟಕದ ಅಧ್ಯಕ್ಷ ಅಪ್ಪಾಸಾಬ ಘಟಕಾಂಬಳೆ ಮಾತನಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ, ಕರ್ನಾಟಕ ರಾಜ್ಯ ಛಲವಾದಿ ಮಹಾ ಸಭಾವು ಸಿದ್ದಯ್ಯ, ಐ.ಎ.ಎಸ್ (ನಿವೃತ್ತ) ರವರ ಅಧ್ಯಕ್ಷತೆಯಲ್ಲಿ ಹಲವಾರು ಮನವಿಗಳನ್ನು ಸಲ್ಲಿಸಿ ಈ ಕೆಳಕಂಡ ಅಂಶಗಳ ಬಗ್ಗೆ ಕ್ರಮವಹಿಸಲು ಕೋರಲಾಗಿತ್ತು. ಆದರೂ ಏಕ ಪಕ್ಷಿಯವಾಗಿ ಒಂದು ಸಮುದಾಯವನ್ನು ಒಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ವರದಿ ಸಲ್ಲಿಸಿದ್ದು, ಸದರಿ ಒಳ ಮೀಸಲಾತಿ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುತ್ತದೆ. ಆದರೆ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಯಾವುದೇ ಸಂಘಟನೆಯ ಮನವಿಗಳನ್ನು ಪುರಸ್ಕರಿಸದ ಉದೇಶ ಪೂರ್ವಕವಾಗಿ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುವ ದುರುದ್ದೇಶದಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸದೆ ಸರ್ಕಾರಕ್ಕೆ, ವರದಿ ಸಲ್ಲಿಸಿರುವುದು ಅಕ್ರಮ, ಅನ್ಯಾಯ, ಕಾನೂನು ಭಾಹಿರ ಕ್ರಮವಾಗಿರುತ್ತದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸರ್ಕಾರಕ್ಕೆ ಸಲ್ಲಿಸಿರುವ ಏಕ ಪಕ್ಷಿಯವಾದ ಪಕ್ಷಪಾತದಿಂದ ಕೂಡಿರುವ ವರದಿಯನ್ನು ರಾಜ್ಯ ಸರ್ಕಾರವು ಯಥಾವತ್ತಾಗಿ ಒಪ್ಪಿಕೊಳ್ಳದೆ, ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ ಒಳ ಮೀಸಲಾತಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ. ಛಲವಾದಿ, ಬಲಗೈ, ಹೊಲೆಯ ಸಮುದಾಯವು ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಜು ಕಾಂಬಳೆ, ಮಹಾಂತೇಶ ಬಾಡಗಿ, ಮಂಜು ನೂಲಿ, ರಾಕೇಶ ಪಟ್ಟಣ, ಸುಕಮಾರ ಕಾಂಬಳೆ, ಮುರುಗೇಶ ಪಟ್ಟಣ, ವಿಜಯ ಬಡಚ್ಚಿ, ಶಶಿ ನಿಡೋಣಿ, ಮಂಜು ಪಟ್ಟಣ, ಅಮೀತ ಕಾಂಬಳೆ, ಶಾಂತೇಶ ತೆರದಾಳ, ಅಪ್ಪು ಬೆಳ್ಳಂಕಿ, ಅಭಿಷೇಕ ಬನಸೊಡೆ, ಸಂದೀಪ್ ಘಟಕಾಂಬಳೆ, ಮಾರುತಿ ಘಟಕಾಂಬಳೆ, ಸುರೇಶ ಬೆಳ್ಳಂಕ್ಕಿ, ರಾಘವೇಂದ್ರ ಪಟ್ಟಣ, ರಾಘವೇಂದ್ರ ಪೊತಿ, ಸಚಿನ್ ಗನಚ್ಚಾರಿ, ಇನೂ ಹಲವರು ಮುಖಂಡರು ಉಪಸ್ಥಿತರಿದ್ದರು.