ಬೆಂಗಳೂರು, (ಏಪ್ರಿಲ್ 05): ಕೇತಗಾಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಆರೋಪದಲ್ಲಿ ಸೈಲೆಂಟ್ ಆಗಿದ್ದ ಮಾಜಿ ಸಿಎಂ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ , ಇದೀಗ ಏಕಾಏಕಿ ಸಿಡಿದೆದ್ದಿದ್ದಾರೆ. ಈ ಸಂಬಂಧ ಇಂದು (ಏಪ್ರಿಲ್ 05) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ನನಗೆ ನೊಟೀಸ್ ಕೊಡುವುದು ಇರಲಿ. ಕೆಳಹಂತದ ಅಧಿಕಾರಿಗಳನ್ನ ನಾನು ಪ್ರಶ್ನೆ ಮಾಡಲ್ಲ. ಎಸ್ ಐಟಿ ತಂಡ ರಚಿಸಿ ತನಿಖೆ ಮಾಡಿಸಿದ್ದಾರೆ. ಇದು ಇತಿಹಾಸದಲ್ಲೇ ಪ್ರಥಮ . ಈ ಸರ್ಕಾರಕ್ಕೆ ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಇಂದಿನಿಂದ ರಾಜ್ಯ ಸರ್ಕಾರದ ವಿರುದ್ಧ ನನ್ನ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದೆ. ೪೦% ವರ್ಷಗಳಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ ಅಧಿಕಾರಿಗಳನ್ನ ದುರುಪಯೋಗ ಮೂಲಕ ರಾಜಕಾರಣ ನಡೆಯುತ್ತಿದೆ, ಸಿದ್ದರಾಮಯ್ಯ, ಡಿಕೆಶಿ ಅವರು ಇರಬಹುದು. ಇವತ್ತಿಂದ ನನ್ನ ಸರ್ಕಾರ ವಿರುದ್ಧ ವಾರ್ ಆರಂಭ ಮಾಡುತ್ತಿದ್ದೇನೆ. ಇದನ್ನು ನಾಡಿನ ಜನತೆಗೆ ಹೇಳುತ್ತಿದ್ದೇನೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬೇರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರು ಕರೆದುಕೊಂಡು ಬಂದಿದ್ದರು. ಮಾಜಿ ಪ್ರಧಾನಿ ಮಗ ನಾಲ್ಕು ಎಕರೆ ಒತ್ತುವರಿ ಮಾಡೋಕೆ ಆಗುತ್ತೆ. ಸಮಾಜ ಪರಿವರ್ತನೆ ಅಂತೆ. 70 ಎಕರೆ ಒತ್ತುವರಿ ಅಂತೆ ನನ್ನಲ್ಲಿ40 ಎಕರೆ ಮಾತ್ರ ಇದೆ. ಅತಿಕ್ರಮಣ, ಅಕ್ರಮ ಇದ್ರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ತಿಳಿಸಿದರು.