ರಾಯಬಾಗ:25: ಮುಂದಿನ ದಿನಗಳಲ್ಲಿ ರಾಯಬಾಗ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಮಾಡಿ ನಿರುದ್ಯೋಗ ಜನರಿಗೆ ಉದ್ಯೋಗ ಕಲ್ಪಿಸುವುದು ನನ್ನ ಗುರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರೀಯಂಕಾ ಜಾರಕಿಹೊಳಿ ಭರವಸೆ ನೀಡಿದ್ದಾರೆ.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಯಬಾಗ ಕ್ಷೇತ್ರ ಸಂಪೂರ್ಣ ನೀರಾವರಿ ಮಾಡಲಾಗುವುದು. ಮೆಡಿಕಲ್ ಕಾಲೇಜು, ಎಂಜನೀಯರಿಂಗ್ ಕಾಲೇಜು ಹಾಗೂ ಉದ್ಯೋಗ ಸೃಷ್ಠಿ ಮಾಡುವುದು ಮತ್ತು ಸ್ಥಳೀಯರ ಸಹಕಾರದಿಂದ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ. ಇನ್ನೂ ಮಹಿಳೆಯರಿಗೆ ಸಣ್ಣ ಸಣ್ಣ ಉದ್ಯಮಗಳ ಸೃಷ್ಠಿಸುವ ಮೂಲಕ ಉದ್ಯೋಗ ಕಲ್ಪಿಸಿ ಆರ್ಥಿಕವಾಗಿ ಸಬಲರನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಮಾಜಿ ಜಿ ಪ ಸದಸ್ಯ ರೋಹಿನಿ ಪಾಟೀಲ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿದ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ. ಇಂತಹ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಕ್ಷೇತ್ರ ಅಭಿವೃದ್ಧಿ ಮಾಡಲು ಗೆಲ್ಲಿಸಿ. ಸಚಿವ ಸತೀಶ ಜಾರಕಿಹೊಳಿ ಅವರ ಗರಡಿಯಲ್ಲಿ ಬೆಳೆದಿದ್ದು ಅವರನ್ನು ಗೆಲ್ಲಿಸಿ ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕರಿಸಿ ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಜಿ ಇಲ್ಲ. ಪ್ರತಿಭಟನೆಗೆ ರೈತರು ಕುಳಿತುಕೊಂಡಾಗ ಸರ್ಕಾರ ಸ್ಪಂದಿಸಿಲ್ಲ. ಸಚಿವರಂತೂ ರೈತರ ಕಷ್ಟಗಳನ್ನು ಆಲಿಸಿಲ್ಲ. ಇಂತಹ ಪರಿಸ್ಥಿತಿ ಕೇಂದ್ರ ಸರ್ಕಾರದ್ದು. ಹಲವು ವೈಫಲ್ಯಗಳಿಂದ ಕೂಡಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವುದು ದೂರದ ಮಾತು ಎಂದು ದೂರಿದರು.
ಕಾರ್ಯಕ್ರಮದಲ್ಲಿ ಮಾಳು ನಿಪನಾಳ ಹಾಗೂ ಲಪಂಗ ರಾಜಾ ಬಾಗವಹಿಸಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಶಿವು ಪಾಟೀಲ್. ಅ ಪ್ಪಾಸಾಬ ಕುಲಗುಡೆ, ರೋಹಿಣಿ ಪಾಟೀಲ, ಸಿದ್ದು ಬಂಡಗರ, ಅರ್ಜುನ ನಾಯಕವಾಡಿ, ಯಾಸ್ಮಿನ ಮೊಮಿನ, ಹಾಜಿ ಮುಲ್ಲಾ, ದಿಲೀಪ ಜಮಾದಾರ, ರಾಜು ಶಿರಗಾವಿ. ಫಾರೂಕ್ ಮೊಮಿನ, ಸಂತೊಷ ಶೆಲಾರ,ಕಿರಣ ಕಾಂಬಳೆ, ಜ್ಯೋತಿ ಕೇಪಟಿ, ಮಕ್ತುಮ ಮೊಮೀನ, ಮಹೇಶ ಕೊರವಿ, ಯುನೂಸ ಅತ್ತಾರ, ಕಲ್ಪನಾ ಜೋಶಿ, ತಮ್ಮಣ್ಣ ನಿಂಗನೂರೆ, ಅಝರುದ್ದಿನ ಮುಲ್ಲಾ, ರಾಜು ಜಮಖಂಡಿಕರ ಸೇರಿ ನೂರಾರು ಕಾರ್ಯಕರ್ತರು ಇದ್ದರು.