ಶಿಕ್ಷಣ ಗುಣಮಟ್ಟ ಸುಧಾರಣಗೆ ನನ್ನ ಮೊದಲ ಆದ್ಯತೆ ಬಾಬಾಸಾಹೇಬ ಪಾಟೀಲ 

Ravi Talawar
ಶಿಕ್ಷಣ ಗುಣಮಟ್ಟ ಸುಧಾರಣಗೆ ನನ್ನ ಮೊದಲ ಆದ್ಯತೆ ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ಎಮ್ ಕೆ ಹುಬ್ಬಳ್ಳಿ.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ  ಶಿಕ್ಷಣದಿಂದ ಬಡ  ವಿದ್ಯಾರ್ಥಿಗಳ ಬೆಳವಣಿಗೆಗೆ ಅನುಕೂಲ ಆಗುವ ದೃಷ್ಟಿಯಿಂದ  ಚನ್ನಮ್ಮನ  ಕಿತ್ತೂರು ಕ್ಷೇತ್ರದ ಶಾಲಾ, ಕಾಲೇಜುಗಳಿಗೆ ಉತ್ತಮ ಕಟ್ಟಡ, ಕ್ರೀಡಾ ಸಾಮಗ್ರಿ, ಪ್ರಯೋಗಾಲಯ, ಆಟದ ಮೈದಾನ, ಉತ್ತಮ ಶಿಕ್ಷಕರು, ಶಿಕ್ಷಣಕ್ಕೆ ಉತ್ತಮ ಸಂಯೋಜನೆ, ಕಾರ್ಯಕ್ರಮ ವೇದಿಕೆ ಇನ್ನೂ ಅನೇಕ ಶಿಕ್ಷಣಕ್ಕೆ ಸಂಬಂದಿಸಿದ ಯೋಜನೆಗಳನ್ನು ಒದಗಿಸುವದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
 ಅವರು ಸಮೀಪದ ಹೊಳಿಹೊಸೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.
 ಈ ಸಂದರ್ಭದಲ್ಲಿ ಡಯಟ್ ಮಣ್ಣೂರ ಉಪ ನಿರ್ದೇಶಕರು, ಪ್ರಾಚಾರ್ಯರಾದ ಬಿ ಎನ್. ನಾಲತವಾಡಿ, ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎನ್ ಪ್ಯಾಟಿ, ಬಿ ಆರ್ ಸಿ ಸಂಯೋಜಕರಾದ ಬಿ ಎನ್ ಕಸಾಳೆ, ಶಿಕ್ಷಣ ಸಂಯೋಜಕರಾದ ಮಹೇಶ ಯರಗಟ್ಟಿ , ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಬಸವರಾಜ ಬೆನಕಟ್ಟಿ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರವೀಣ ಪಾಟೀಲ, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article