ನೇಸರಗಿ.ಸಮಿಪದ ಸವದತ್ತಿ ತಾಲೂಕಿನ ಮುತವಾಡ ಗ್ರಾಮದಲ್ಲಿ ಗುರುವಾರ ದಿ. 27-6- 2024 ರಂದು ನೂತನವಾಗಿ ಪ್ರತಿಷ್ಠಾಪಿತಲಾಗಿರುವ ಮೂರ್ತಿಗಳನ್ನು ಸಕಲ ಮಂಗಳ ವಾದ್ಯಮೆಳಗಳೊಂದಿಗೆ ಗ್ರಾಮದೇವತೆಯರನ್ನು ಕುಂಬಮೆಳಗಳ ಮುಖಾಂತರ ರಾಜಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಬರಮಾಡಿಕೊಳ್ಳುವದು ಮದ್ಯಾಹ್ನ ಮಹಾ ಪ್ರಸಾದ ಜರುಗುವದು .
ಶುಕ್ರವಾರ ದಿ. 28 ರಂದು ಬ್ರಾಹ್ಮಿ ಮುಹರ್ತದಲ್ಲಿ ಮುತೈದಯರು ಗಂಗಾ ಕಲಸದೊಂದಿಗೆ ದೇವಸ್ಥಾನ ಪ್ರವೇಶ, ಮಹಾಸಂಕಲ್ಪ,ಮಹಾಗಣಪತಿ ಪೂಜೆ, ಉಮಾಮಹೇಶ್ವರಿ ಮಹಾಮೃತ್ಯಂಜಯ ಪೂಜೆ, ಸಪ್ತ ಸಭಾದೇವತೆಗಳ ಪೂಜೆ, ನವದುರ್ಗಿಯರ ಪೂಜೆ ಅಷ್ಠದಿಕ್ಪಾಲಕರ ಪೂಜೆ, ಎಕದಶ ಚಂಡಿಕಾಹೊಮ, ಜಯಾದಿಹೊಮ ಪೂಜೆಗಳು ನಡಯುವವು ಸಕಲ ಪೂಜಾ ವಿದಿವಿಧಗಳೊಂದಿಗೆ ಹೋಮ ಹವನದೊಂದಿಗೆ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವದು ದಿ 29 ರಂದು ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾ ಪ್ರಸಾದಸೇವೆ ಜರುಗುವದು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ ಬ್ರೋ ಬಸವಲಿಂಗ ಶಿವಾಚಾರ್ಯರು ಮುರಗೊಡ ( ಹಣಬರಟ್ಟಿ) ಪೂರೊಹಿತರು ವೇದ ಭ್ರಹ್ಮ ವಿಶ್ವನಾಥ ಶಾಸ್ತ್ರೀಗಳು ಚರಂತಿಮಠ ನೇಸರಗಿ ಇವರಿಂದ ನೇರವೇರುವದು ಎಂದು ಮುತವಾಡ ಗ್ರಾಮದ ಗ್ರಾಮದೇವಿ ಜಾತ್ರಾ ಕಮಿಟಿ ಸದಸ್ಯರು ಪ್ರಕಟನೆಯಲಿ ತಿಳಿಸಿದ್ದಾರೆ.