ಲಕ್ನೋ, ಮಾರ್ಚ್ 26: ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆಂದು ಮುಸ್ಲಿಮರು ಕೂಡ ಸುರಕ್ಷಿತವಾಗಿದ್ದಾರೆಂದರ್ಥ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಎಎನ್ಐ ಪಾಡ್ಕಾಸ್ಟ್ನಲ್ಲಿ ಅವರು ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಯೋಗಿ ಬಳಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು.
ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಂರೂ ಸುರಕ್ಷಿತ: ಯೋಗಿ

ಅದಕ್ಕೆ ಉತ್ತರಿಸಿದ ಯೋಗಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರು ಸಹ ಸುರಕ್ಷಿತರು ಎಂದಿದ್ದಾರೆ. 2017 ರಲ್ಲಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೋಮು ಹಿಂಸಾಚಾರ ನಿಂತಿದೆ ಎಂದು ಅವರು ಹೇಳಿದರು. ವಕ್ಫ್ ಮಂಡಳಿ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಜೆಪಿಸಿ ಶಿಫಾರಸುಗಳ ಕುರಿತು ಸಿಎಂ ಮಾತನಾಡಿದರು. ವಕ್ಫ್ ಹೆಸರಿನಲ್ಲಿ ಯಾವುದೇ ಕಲ್ಯಾಣ ಕಾರ್ಯಗಳನ್ನು ಮಾಡಲಾಗಿದೆಯೇ ಎಂದು ಅವರು ಕೇಳಿದರು.