ಅಥಣಿ: ಅಥಣಿ ಮುರುಘೇಂದ್ರ ಶಿವಯೋಗಿಗಳು ಬಸವತತ್ವವನ್ನ ಮೈಗೂಡಿಸಿಕೊಂಡು ನಾಡಿಗೆ ಬೆಳಕಾದವರು ಖಾವಿ ಕುಲಕ್ಕೆ ಘನತೆ ತಂದವರು ಜಗದ್ಗುರು ಪೀಠಕ್ಕೆ ಗುರುಪೀಠವಾಗಿರುವುದು ಅಥಣಿ ಗಚ್ಚಿನಮಠ ನಾಡಿನ ಅಸಂಖ್ಯಾತ ಭಕ್ತರನ್ನ ಹೊಂದಿರುವದು ಹೀಗಾಗಿ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಸಾಧಕರಂತೆ ಮತ್ತೆ ಈ ನಾಡಿನಲ್ಲಿ ಸಾಧಕರು ಬರಬೇಕು ನಾಡು ಕಲ್ಯಾಣ ರಾಜ್ಯವಾಗಿ ಕಂಗೊಳಿಸುತ್ತದೆ ಎಂದ ಅವರು ನಮ್ಮ ಧಾರ್ಮಿಕ ಆಚರಣೆಗಳು ನಮ್ಮ ಭಾವನೆ ಮತ್ತು ಮನಸ್ಸನ್ನ ಅರಳಿಸುತ್ತವೆ. ಸರ್ವಧರ್ಮಗಳ ಸಮನ್ವಯದ ಕೇಂದ್ರವಾಗಿರುವ ಅಥಣಿಯಲ್ಲಿ ಸರ್ವ ಜನರು ಶ್ರೀಮುರುಘೇಂದ್ರ ಶಿವಯೋಗಿಗಳ ಕೃಪಾ ಆಶಿರ್ವಾದಕ್ಕೆ ಪಾತ್ರರಾಗಿದ್ದಾರೆ ಏಕೆಂದರೆ ಇಲ್ಲಿಯ ಜನರು ಕಾಯಕಜೀವಿಗಳಾಗಿ ಬದುಕುತ್ತಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು
ಅಥಣಿಯ ಐತಿಹಾಸಿಕ ಗಚ್ಚಿನಮಠದ ೧೦೫ನೇ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಶ್ರೀ ಮುರುಘೇಂದ್ರ ಶಿವಯೋಗಿಗಳ ಭವ್ಯ ರಥೋತ್ಸವಕ್ಕೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು, ಗಚ್ಚಿನಮಠದ ಶಿವಬಸವ ಸ್ವಾಮೀಜಿಯವರು ವಿಜೃಂಭನೆಯ ಚಾಲನೆ ನೀಡಿದರು. ಗಚ್ಚಿನ ಮಠದಿಂದ ಪಟ್ಠಣದ ಪ್ರಮುಖ ಬಿದಿಗಳ ಮೂಲಕ ಶಿವಯೋಗಿಗಳ ತಪೋಭೂಮಿಯ ವರೆಗೆ ರಾತ್ರಿಯಿಡಿ ವಾದ್ಯ ಮೇಳಗಳೊಂದಿಗೆ ಭವ್ಯ ವಿದ್ಯುದೀಪಗಳಿಂದ ಅಲಂಕರಿಸಲ್ಪಟ್ಟ ಶ್ರೀ ಶಿವಯೋಗಿ ಮರುಘೇಂದ್ರ ಸ್ವಾಮೀಜಿಯವರ ಭಾವಚಿತ್ರವನ್ನಿಟ್ಟ ರಥೋತ್ಸವು ಹೂವಿನಿಂದ ಶೃಂಗಾರಗೊAಡು ಸಕಲ ವಾದ್ಯ ವೃಂದ ಮೂಲಕ ಶಿವಬಜನೆ, ವಚನಗೀತೆಗಳ ಗಾಯನದೊಂದಿಗೆ ಗವಿಮಠಕ್ಕೆ ಅಹೋರಾತ್ರಿಯವರೆಗೆ ರತೋತ್ಸವ ಜರುಗಿತು.
ಈ ವೇಳೆ ಗಚ್ಚಿನಮಠದ ಶಿವಬಸವ ಸ್ವಾಮಿಜಿ ಮಾತನಾಡಿ ಶಿವಯೋಗಿಗಳ ಜಾತ್ರಾ ಮಹೋತ್ಸವವು ತಾಲೂಕಿನಲ್ಲಿ ಹಬ್ಬದಂತೆ ಕಳೆಗಟ್ಟಿದೆ ಇದೊಂದು ಪರಂಪರೆ ಒಂದು ವಾರದ ಕಾಲ ಜನತೆಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾಭಾವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇಡಿ ನಾಡಿನಲ್ಲಿ ಒಂದು ವಾರದ ವರೆಗೆ ಪಲ್ಲಕ್ಕಿ ಉತ್ಸವವು ನಡೆಯುವುದಿಲ್ಲ ಆದರೆ ಅಥಣಿ ಗಚ್ಚಿನಮಠದ ಜಾತ್ರಾ ಮಹೋತ್ಸವದಲ್ಲಿ ಈ ಪರಂಪರೆ ಇದೆ. ಇಲ್ಲಿಯ ಭಕ್ತರ ಸೇವಾಭಾವ ಅಪರಮಿತವಾಗಿದೆ ಅವರ ಸಹಕಾರ, ಪ್ರೀತಿ, ವಿಶ್ವಾಸದಿಂದ ಎಲ್ಲ ಕಾರ್ಯಗಳು ಯಶಸ್ವಿಯಾಗಿವೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿ, ನದಿ ಇಂಗಳಗಾವಿಯ ಸಿದ್ದಲಿಂಗ ಸ್ವಾಮಿಜಿ, ಗುರುಸಿದ್ದ ಸ್ವಾಮಿಜಿ, ಮರುಳಸಿದ್ದ ಸ್ವಾಮಿಜಿ, ಬಸವಕಿರಣ ಸ್ವಾಮಿಜಿ, ಮಲ್ಲಿಕಾರ್ಜುನ ಸ್ವಾಮಿಜಿ, ವಿರೇಶ್ವರ ದೇವರು, ಬಾಬುರಾವ ಮಹಾರಾಜರು ಸೇರಿದಂತೆ ಅನೇಕ ಪೂಜ್ಯರು ಹಾಗೂ ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ, ಶಿವಾನಂದ ದಿವಾನಮಳ, ಕಲ್ಲಪ್ಪ ವನಜೋಳಪ್ರಕಾಶ ಮಹಾಜನ, ಮಹಾದೇವ ಹೊನ್ನಳಿ ಸೇರಿದಂತೆ ಮತ್ತಿತರರು ಇದ್ದರು.
ಮುರುಘೇಂದ್ರ ಶಿವಯೋಗಿಗಳು ಬಸವತತ್ವವನ್ನ ಮೈಗೂಡಿಸಿಕೊಂಡು ನಾಡಿಗೆ ಬೆಳಕಾದವರು ಖಾವಿ ಕುಲಕ್ಕೆ ಘನತೆ ತಂದವರು ಜಗದ್ಗುರು: ಡಾ. ಶಿವಮೂರ್ತಿ ಮುರುಘಾ ಶರಣರ ಅಭಿಮತ


