ಚಿತ್ರದುರ್ಗ (ನ.29): ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಪಾಲಿಗೆ ಇಂದು ಬಿಗ್ ಡೇ ಆಗಿದೆ. ಶ್ರೀಗಳ ವಿರುದ್ಧದ ಫೋಕ್ಸೋ ಕೇಸ್ (pocso case) ಕುರಿತ ಇವತ್ತು ತೀರ್ಪು ಹೊರ ಬೀಳಲಿದೆ. ಚಿತ್ರದುರ್ಗ 2ನೇ ಅಪರ & ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಶೀಗಳು ಆಗಮಿಸಿದ್ದಾರೆ. ಮುರುಘಾ ಶ್ರೀಗಳು ದೋಷಿಯೋ? ನಿರ್ದೋಷಿಯೋ ಅನ್ನೋ ತೀರ್ಪು ಹೊರಬೀಳಲಿದೆ.
ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಅಪರಾಧಿಯೋ, ನಿರಾಪರಾಧಿಯೋ ಎನ್ನುವ ತೀರ್ಪು ಇಂದು ಹೊರ ಬೀಳಲಿದೆ. ಶ್ರೀಗಳ ಪರವಾಗಿ ಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಸ್ವಾಮೀಜಿ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ವಾದಿಸಿದ್ರು.


