ಬಳ್ಳಾರಿ,ನ.೨೪: ನಗರದ ಮೋತಿವೃತ್ತದ ಬಳಿಯi ಇರುವ ಬುಡಾ ಕಾಂಪ್ಲೆಕ್ಸ್ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ತನಿಖಾ ತಂಡವು ಎಲ್ಲ ಸಾಕ್ಷ÷್ಯ, ದಾಖಲೆಗಳನ್ನು ಪರಿಶೀಲಿಸಿ ಆರೋಪಿಯ ವಿರುದ್ಧ ಸ್ಪಷ್ಟ ಮಾಹಿತಿಯನ್ನು ಸಂಗ್ರಹಿಸಿದೆ. ಆಂದ್ರಾಳ್ ಮೂಲದ ಮೃತ ವ್ಯಕ್ತಿ ಶಿವು ಮತ್ತು ರಾಂಪುರದ ಆರೋಪಿಯು ಸ್ನೇಹಿತರಾಗಿದ್ದರು. ಇಬ್ಬರೂ ಸೇರಿ ಬುಡಾ ಕಾಂಪ್ಲೆಕ್ಸ್ನ ನಾಲ್ಕನೇ ಮಹಡಿಯಲ್ಲಿ ಕಳ್ಳತನ ನಡೆಸಿದ್ದು, ನಂತರ ಕದ್ದ ಹಣ ಹಂಚಿಕೆಯಲ್ಲಿ ತಾರತಮ್ಯವಾದ ವಿಚಾರಕ್ಕೆ ಇಬ್ಬರಲ್ಲೂ ತಕರಾರು ತೀವ್ರಗೊಂಡು, ಕುಡಿದ ಅಮಲಿನಲ್ಲಿದ್ದ ಆರೋಪಿಯು ಬೀರ್ ಬಾಟಲಿಯಿಂದ ಸ್ನೇಹಿತನ ತಲೆಗೆ ಹೊಡೆದು, ಬಳಿಕ ಕಟ್ಟಡದ ಮೇಲ್ಮಹಡಿಯಿಂದ ಕೆಳಗೆ ದಬ್ಬಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ಖಚಿತವಾಗಿದೆ.
ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಫೋರೆನ್ಸಿಕ್ ವರದಿ ಸೇರಿ ಎಲ್ಲಾ ತಾಂತ್ರಿಕ ಸಾಕ್ಷ÷್ಯಗಳ ಆz¬sÁರದಲ್ಲಿ ಪ್ರಕರಣಕ್ಕೆ ಸಂಬAಧಿಸಿದ ತನಿಖೆಯನ್ನು ಪೊಲೀಸರು ಅಧಿಕೃತವಾಗಿ ಪೂರ್ಣಗೊಳಿಸಿದ್ದಾರೆ. ಆರೋಪಿಯ ಮೇಲೆ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಚಾರ್ಜ್ಶೀಟ್ ಸಲ್ಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


