ಬಳ್ಳಾರಿ. ಡಿ. 25: ಆರ್ಯ ಈಡಿಗ ಗೌನ ಮಹಾಜನ ಸಂಘಕ್ಕೆ ಚುನಾವಣೆಯನ್ನು ನಡೆಸಿ ಪದಾಧಿಕಾರಿಗಳ ಆಯ್ಕೆ ನಡೆಸಬೇಕೆಂದು ಸಂಘದ ಅಜೀವ ಸದಸ್ಯರು ಹಾಗೂ ಮಾಜಿ ಕಾರ್ಯಕಾರ ಸಮಿತಿ ಸದಸ್ಯರಾದ ಮೂಲ ಸತೀಶ್ ಮತ್ತು ಇತರರು ಸಂಘ ಸಂಸ್ಥೆ ನೊಂದಣಿ ಇಲಾಖೆಯ ಉಪನಿಬಂಧಕರಿಗೆ ಒತ್ತಾಯಿಸಿದರು.
ಅವರು ಇಂದು ನಗರದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದಡಾ ಅವರು, ಹಾಲಿ ಇರುವ ಕಾರ್ಯಕಾರಿ ಸಮಿತಿ ಅವಧಿ ಇದೆ ಡಿಸೆಂಬರ್ 25ರಂದು ಮುಗಿಯಲಿದ್ದು, ಆದರೂ ಸಹ ಸಂಘದ ಕೆಲವು ಸದಸ್ಯರು 28ರಂದು ಸರ್ವ ಸದಸ್ಯರ ಸಭೆಯನ್ನು ನಡೆಸಲು ತಯಾರಿ ನಡೆಸಿದ್ದಾರೆ, ಸಂಘದ ಅವಧಿ ಮೂರು ವರ್ಷಗಳು ಮುಗಿದರು ಹೇಗೆ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ನಡೆಸಲು ಸಾಧ್ಯ ಕೂಡಲೇ ಸಂಘ ಸಂಸ್ಥೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಆ ಸಭೆಯನ್ನು ರದ್ದುಗೊಳಿಸಿ ಹೊಸದಾಗಿ ಚುನಾವಣೆಯ ಮೂಲಕ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಮೂಲ ಸತೀಶ್ ಮನವಿ ಮಾಡಿದರು.
ಬಳ್ಳಾರಿ ನಗರದ ಹಳೆಯ ಕೋರ್ಟ್ ರಸ್ತೆಯಲ್ಲಿರುವ ಆರ್ಯ ಈಡಿಗ ಗೌನ ಮಹಾಜನ ಸಂಘವು 1914ರಲ್ಲಿ ಸ್ಥಾಪನೆಗೊಂಡು ಸಂಘ ಸಂಸ್ಥೆ ಅಧಿನಿಯಮ 1860ರ ಪ್ರಕಾರ ನೋಂದಾಯಿತವಾಗಿದ್ದು,
( ಸಂಖ್ಯೆ 3/1927-28, ದಿನಾಂಕ 06-07-1927) ಆಗಿರುತ್ತದೆ, ಆರ್ಯ ಈಡಿಗ ಸಂಘ ಆರಂಭವಾಗಿ ಶತಮಾನ ಕಳೆದರೂ ಆ ಸಂಘಕ್ಕೆ ಪದಾಧಿಕಾರಿಗಳ ಚುನಾವಣೆ ಇಲ್ಲಿಯವರೆಗೂ ನಡೆದಿಲ್ಲ ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ನಂತರ ದಿನಾಂಕ 20-08-2004 ರಂದು ಕರ್ನಾಟಕ ಸಂಘಗಳ ಅಧಿನಿಯಮ 1960ರ ಕಲಂ 9 ಮತ್ತು 10ರ ಅಡಿಯಲ್ಲಿ ಬೈಲಾಗಳ ತಿದ್ದುಪಡಿಯೊಂದಿಗೆ ಪುನರ್ನೋಂದಣಿ ಮಾಡಿಸಲಾಯಿತು, ಅಂದಿನಿಂದ ಇಂದಿನವರೆಗೆ ನಾವುಗಳು ಸದರಿ ಸಂಘದ ಆಜೀವ ಸದಸ್ಯರಾಗಿದ್ದು, ನಮ್ಮಲ್ಲಿ ಕೆಲವರು ಈ ಹಿಂದೆ ಕಾರ್ಯಕಾರಿ ಸಮಿತಿ ಸದಸ್ಯರು, ಖಜಾಂಚಿಗಳು ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದೇವೆ. ಸಂಘದ ಬೈಲಾ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ವಾರ್ಷಿಕ ಮಹಾಜನ ಸಭೆ ಕರೆದು, ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಬೇಕು. ಆದರೆ ಕಳೆದ 5–6 ವರ್ಷಗಳಿಂದ ಈ ನಿಯಮಗಳನ್ನು ನಿರ್ಲಕ್ಷಿಸಿ, ಹಾಲಿ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ಜಿ ಮಂಜುನಾಥ್ ಮತ್ತು ಇ ಸಿ ಮೆಂಬರ್ ನರಸಿಂಹ ಮತ್ತು ಕೆಲವು ಸದಸ್ಯರು ತಮ್ಮ ಸ್ವ ಹಿತಾಸಕ್ತಿ ಮತ್ತು ತಮ್ಮ ಇಚ್ಛೆಯಂತೆ ಸದಸ್ಯರನ್ನು ಆಯ್ಕೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಅವರು ಪದಾಧಿಕಾರಿಗಳ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸುಮಾರು 2160 ಜನ ಆಜೀವ ಸದಸ್ಯರನ್ನು ಹೊಂದಿರುವ ಆರ್ಯ ಈಡಿಗ ಸಂಘಕ್ಕೆ ಚುನಾವಣೆಯ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಸ್ಥಳೀಯ ಡಿಆರ್ ಕಚೇರಿಗೆ ಮನವಿಪತ್ರ ಸಲ್ಲಿಸಿದರು ಸಹ ಅವರು ಯಾವುದೇ ಕ್ರಮ ಕೈಗೊಳ್ಳದೆ ಹಾರಿಕೆ ರೀತಿಯಲ್ಲಿ ಮಾತನಾಡಿರುತ್ತಾರೆ ಈ ಕುರಿತು ನಾವುಗಳು ದಿನಾಂಕ 08-12-2025ರಂದು ಸರ್ಕಾರದ ಮುಖ್ಯಮಂತ್ರಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಿಬಂಧಕರು, ಜಂಟಿ ನಿಬಂಧಕರು, ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಕೊಂಡಿರುತ್ತೇವೆ. ಇಲ್ಲಿವರೆಗೂ ಸಹಕಾರ ಇಲಾಖೆಯಿಂದ ಯಾವುದೇ ರೀತಿಯ ಕ್ರಮ ಜರುಗಿಸಿರುವುದಿಲ್ಲ. ಇದರಿಂದಾಗಿ ಸಂಘದ ಪದಾಧಿಕಾರಿಗಳು ಅವರಿಗೆ ಸಂಘ ಸಂಸ್ಥೆ ಅಧಿನಿಯಮದ ಪ್ರಕಾರ ಸಂಘದ ಮೇಲೆ ಯಾವುದೇ ಹಕ್ಕು ಇಲ್ಲದಿದ್ದರೂ ಕೆಲವೊಂದು ಜನ ಪಟ್ಟ ಭದ್ರ ಹಿತಾಸಕ್ತಿಗಳು ಸೇರಿಕೊಂಡು ಸಂಘವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ತಮಗೆ ಇಷ್ಟ ಬಂದಂತೆ ಸಂಘವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಕಾಟಾಚಾರಕ್ಕೆ ಎಂಬಂತೆ ಸಭೆಯನ್ನು ಕರೆದು ನಡಾವಳಿ ಪುಸ್ತಕದಲ್ಲಿ ಯಾವುದೇ ವಿಷಯಗಳನ್ನು ಬರೆಯದೆ ಖಾಲಿ ಜಾಗ ಬಿಟ್ಟು ಕೆಳಗೆ ತಮ್ಮ ಅನುಕೂಲಕ್ಕೆ ತಕ್ಕ ಸದಸ್ಯರಿಂದ ಸಹಿ ಮಾಡಿಸಿಕೊಂಡು ಇದೇ ನಿಜವಾದ ನಡವಳಿ ಎಂದು ಡಿಆರ್ ಕಚೇರಿಗೆ ಸಲ್ಲಿಸುತ್ತಾರೆ ಇದು ಸಂಪೂರ್ಣವಾಗಿ ಅಕ್ರಮವಾಗಿರುತ್ತದೆ ಎಂದ ಅವರು ದಿ 22-09-2024 ರಂದು ಸಂಘದ ಕಾರ್ಯಕಾರಿ ಸಮಿತಿಯ ಅವಧಿ ಮುಕ್ತಾಯಗೊಂಡಿರುತ್ತದೆ, ಹಾಲಿ ಇರುವ ಸಮಿತಿಯ ಅವಧಿ ಮುಗಿದಿದ್ದು ಈಗಿರುವ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಬದಲಿಗೆ, ಬೈಲಾ ನಿಯಮದಂತೆ ಚುನಾವಣೆಯನ್ನು ನಡೆಸಬೇಕೆಂದು ಎಂದು ಈ ಸಂದರ್ಭದಲ್ಲಿ ಸಂಘ ಸಂಸ್ಥೆ ನೊಂದಣಿ ಕಚೇರಿಯ ಉಪನಿಬಂಧಕರಲ್ಲಿ ಆಗ್ರಹಿಸಿದರು. ಒಂದು ವೇಳೆ ಹಾಲಿ ಇರುವ ಸಂಘದ ಪದಾಧಿಕಾರಿಗಳು ತಮ್ಮ ಮೊಂಡುತನದಿಂದ ಅದೇ ಸಮಿತಿಯನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಿದಲ್ಲಿ ಸರ್ಕಾರವು ಸಹಕಾರ ಇಲಾಖೆಯ ವತಿಯಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, ನ್ಯಾಯಸಮ್ಮತ ಚುನಾವಣೆಯನ್ನು ಜರುಗಿಸಬೇಕೆಂದೂ ಮನವಿ ಮಾಡಿದರು.
ಅಷ್ಟೇ ಅಲ್ಲದೆ ದಿನಾಂಕ 28-12-2025 ರಂದು ವಾರ್ಷಿಕ ಮಹಾಜನ ಸಭೆಯನ್ನು ಸಹಕರಿದಿರುತ್ತಾರೆ ಇದು ಕಾನೂನು ಬಾಹಿರವಾದ ನಡೆ ಆಗಿರುತ್ತದೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಹೊರಗಿನ ವ್ಯಕ್ತಿಗಳನ್ನು ಕರೆತಂದು ಗಲಾಟೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ ಎಂದು
ಗಂಭೀರ ಆರೋಪ ಮಾಡಿದರು.
ಸಂಘದ ಆಡಿ ವರದಿಯನ್ನು ಇಷ್ಟು ದಿನಗಳ ಕಾಲ ನಗರದ ಒಬ್ಬ ಆಡಿಟರ್ ಅವರಿಂದ ನಡೆಸಲಾಗುತ್ತಿತ್ತು ಆದರೆ ಕಳೆದ ಎರಡು ಮೂರು ವರ್ಷಗಳಿಂದ ಹೈದರಾಬಾದ್ ಆಡಿಟ್ ಕಂಪನಿಯಿಂದ ಕಂಪನಿಗೆ ಸಂಘದ ಆಡಿಟ್ ಮಾಡಿಸಿರುತ್ತಾರೆ ಇದು ನಮಗೆ ಸಂಘದಲ್ಲಿ ಹಣಕಾಸಿನ ದುರುಪಯೋಗ ವಾಗಿರುತ್ತದೆ ಎಂಬ ಅನುಮಾನವನ್ನು ಮೂಡಿಸುತ್ತದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಲ ಸತೀಶ್, ಡಿ. ಮೋಹನ್, ಭಾಸ್ಕರ್, ವೀರನಗೌಡ, ಡಾ. ರಾಮರಾಜ್, ನಾರಾಯಣಸ್ವಾಮಿ, ಸುರೇಂಧರ್, ಶ್ರೀನಿವಾಸ್, ನರಸಪ್ಪ, ಮೂರ್ತಿ, ನಾಗೇಶ್, ಗಾಳೆಪ್ಪ, ವಸಂತ್ ಹಾಗೂ ಕುಮಾರ್ ಸೇರಿದಂತೆ ಇತರರಿದ್ದರು.


