ಡಾ.ಅಂಬರೀಷ್, ದೇವರಾಜ್, ಶಶಿಕುಮಾರ್, ಜಗ್ಗೇಶ್ ಮುಂತಾದ ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ತಂತ್ರಜ್ಞ ಜಿ.ಕೆ.ಮುದ್ದುರಾಜ್ ಗ್ಯಾಪ್ ನಂತರ ‘ಎಜುಕೇಟಡ್ ಬುಲ್ಸ್’ ಸಿನಿಮಾಕ್ಕೆ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಜೊತೆಗೆ ಎಂ.ಎಸ್.ಎಂಟರ್ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿರುವ ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಜಯರಾಮ್ ಸಿ.ಎ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮಂಜುನಾಥ್ಬಾಬು ಕ್ಯಾಮಾರ್ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಹಳ್ಳಿಯ ಪದವೀಧರನೊಬ್ಬ ಉದ್ಯೋಗದ ಸಲುವಾಗಿ ನಗರಕ್ಕೆ ಬರುತ್ತಾನೆ. ಈತನೊಂದಿಗೆ ಆಕೆಯು ಬರುತ್ತಾಳೆ. ಮುಂದೆ ವಿದ್ಯಾವಂತ ಯುವಕರ ಸ್ನೇಹವಾಗುತ್ತದೆ. ನಂತರ ಇಲ್ಲಿ ನಡೆಯುವ ಅನೇಕ ಘಟನೆಗಳು ಹಾಗೂ ಪ್ರೀತಿ ಬೆಸೆಯುವ ಸನ್ನಿವೇಶವು ಹಾಸ್ಯ ರೂಪದಲ್ಲಿ ಕಥೆ ಸಾಗುತ್ತದೆ.
ತಾರಾಗಣದಲ್ಲಿ ನೀರಜ್, ಅಜಯ್ಕುಮಾರ್, ತೇಜಸ್ಕುಮಾರ್, ರಾಕೇಶ್, ಪೂರ್ವಿಕಾ, ಮಾರುತಿರಾಜ್, ಚಿದಾನಂದ ಮುಂತಾದವರಿದ್ದಾರೆ. ಛಾಯಾಗ್ರಹಣ ಧನುಷ್ರಾಜಗೆರೆ, ಸಂಕಲನ ಸಂಜೀವರೆಡ್ಡಿ, ಕಥೆ ಎಂ.ಪಿ.ಅರುಣ್ಕುಮಾರ್, ಸಂಭಾಷಣೆ ಹರಿಣಿ, ಸಾಹಸ ಥ್ರಿಲ್ಲರ್ಮಂಜು, ಕಲೆ ಬಾಬು ಖಾನ್, ನಿರ್ಮಾಣ ನಿರ್ವಹಣೆ ಸಫೈರ್ರವಿ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೂಂಡಿದೆ.