ಹುಕ್ಕೇರಿ.ಸಹಕಾರ ಇಲಾಖೆ ನಿಯಮಗಳನ್ನು ಪಾಲಿಸಿದರೆ ಮಾತ್ರ ಸಹಕಾರಿ ಸಂಘಗಳು ಪ್ರಗತಿ ಪಥದಲ್ಲಿ ಸಾಗುವವು ಎಂದು ಹುಕ್ಕೇರಿ ಸಹಕಾರ ಅಭಿವೃದ್ಧಿ ಇಲಾಖೆ ನಿರ್ಗಮಿತ ಅಧಿಕಾರಿ ಶ್ರೀಮತಿ ಶಶಿಕಲಾ ಪಾಟೀಲ ಹೇಳಿದರು.
ಇತ್ತಿಚಿಗೆ ಹುಕ್ಕೇರಿ ಯಿಂದ ವರ್ಗಾವಣೆ ಗೊಂಡ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಶೀಕಲಾ ಪಾಟೀಲ ಇವರನ್ನು ಹುಕ್ಕೇರಿ ತಾಲೂಕಿನ ವಿವಿಧ ಸಂಘ ಸಂಸ್ಥೆ ಪರವಾಗಿ ಬಿಳ್ಕೊಡುಗೆ ಮತ್ತು ನೂತನವಾಗಿ ನೇಮಕಗೊಂಡ ನವೀನ ಹುಲಕುಂದ ಇವರಿಗೆ ಸ್ವಾಗತ ಕಾರ್ಯಕ್ರಮವನ್ನು ನಗರದ ಅರ್ಬನ್ ಬ್ಯಾಂಕ ಸಭಾಂಗಣದಲ್ಲಿ ಜರುಗಿತು.
ಶ್ರೀಮತಿ ಉಷಾ ರವದಿ ನಿರ್ಗಮಿತ ಅಧಿಕಾರಿ ಶಶಿಕಲಾ ಇವರಿಗೆ ಸತ್ಕರಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ನಂತರ ವಿವಿಧ ಅರ್ಬನ್ ಬ್ಯಾಂಕಗಳ ವ್ಯವಸ್ಥಾಪಕರು,ಹಣಕಾಸು ಸಂಸ್ಥೆಗಳ ಕಾರ್ಯದರ್ಶಿಗಳು , ನೂತನ ಅಧಿಕಾರಿ ನವೀನ ಹುಲಕುಂದ ರವರಿಗೆ ಸನ್ಮಾನಿಸಿ ಬರಮಾಡಿಕೊಂಡು ನಿರ್ಗಮಿಸುವ ಅಧಿಕಾರಿಗೆ ಆತ್ಮಿಯವಾಗಿ ಸತ್ಕರಿಸಿದರು.
ನಂತರ ಮಾತನಾಡಿದ ಶಶಿಕಲಾ ಪಾಟೀಲ ಸಹಕಾರಿ ಸಂಘಗಳು ಉಳಿಯಬೇಕಾದರೆ ಇಲಾಖೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ ಮರು ಪಾವತಿಯಾಗುವ ಸದಸ್ಯರಿಗೆ ಮತ್ತು ಗ್ರಾಹಕರಿಗೆ ಸಾಲ ವಿತರಿಸಿದರೆ ಮಾತ್ರ ಸಹಕಾರಿ ಸಂಘಗಳು ಉಳಿಯಲು ಸಾಧ್ಯ . ನನ್ನ ಮೂರು ವರ್ಷಗಳ ಸೇವಾ ಅವಧಿಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಹುಕ್ಕೇರಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಶ್ರಮ ವಹಿಸಿದ್ದೆನೆ, ಅದೆ ರೀತಿ ಮುಂಬರುವ ಅಧಿಕಾರಿ ನವೀನ ಹುಲಕುಂದ ರವರಿಗೆ ಸ್ಪಂದನೆ ನೀಡಿ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹುಕ್ಕೇರಿ ಅರ್ಬನ್ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಕಾಡಪ್ಪಾ ಬಂದಾಯಿ, ಬೆಳಗಾವಿ ಸಹಕಾರಿ ಸಂಘಗಳ ಯೂನಿಯನ್ ಮುಖ್ಯಸ್ಥ ಮಿಥುನ, ನಿವೃತ್ತ ಲೆಕ್ಕ ಪರಿಶೋಧಕ ಎ ಬಿ ಬಿಳಿಕಿಚಡಿ, ರವಿಂದ್ರ ಪಟ್ಟಣಶೇಟ್ಟಿ, ರಮೇಶ ಬಡಿಗೇರ, ಶ್ರೀಶೈಲ ಸಂಬಾಳ, ರಮೇಶ ಚಿಗರಿ, ಆರ್ ಎ ಕುಗಟೋಳಿ ಸೇರಿದಂತೆ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಲಾಖೆ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸಲಿ – ಶ್ರೀಮತಿ ಶಶಿಕಲಾ ಪಾಟೀಲ.
