ಬೆಳಗಾವಿ : ಬಸರೀಕಟ್ಟಿ ಗ್ರಾಮದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್, ರಾಧಾ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಮೋಟಾರ್ ಸೈಕಲ್ ಮತ್ತು ಎಮ್ಮೆ ಓಡಿಸುವ ಭವ್ಯ ಓಪನ್ ಜಂಗೀ ಶರ್ಯತ್ ನ್ನು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಉದ್ಘಾಟಿಸಿದರು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಭಾನುವಾರ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಬಸವಣ್ಣಿ ಕೇದಾರಿ ಕೊಂಡಸಕೊಪ್ಪ, ಸಿದ್ದರಾಯಿ ನಾಗರೊಳಿ, ಹೊಳೆಪ್ಪ ಪೂಜೇರಿ, ದಿಲೀಪ್ ಕೊಂಡಸಕೊಪ್ಪ, ಪ್ರಶಾಂತ ಕಲ್ಲನಾಚೆ, ಅನಿಲ ತರಳೆ, ಸಂಜು ದೇಸಾಯಿ, ವಿಕ್ರಂ ದೇಸಾಯಿ, ರಾಜು ಹಿರೋಜಿ ಮುಂತಾದವರು ಉಪಸ್ಥಿತರಿದ್ದರು.


