ಬಿಜೆಪಿಯಿಂದ ಇಡಿ, ಸಿಬಿಐ ದುರ್ಬಳಕೆ: ಮೃಣಾಲ್ ಹೆಬ್ಬಾಳಕರ್ ಕಿಡಿ

Ravi Talawar
ಬಿಜೆಪಿಯಿಂದ ಇಡಿ, ಸಿಬಿಐ ದುರ್ಬಳಕೆ: ಮೃಣಾಲ್ ಹೆಬ್ಬಾಳಕರ್ ಕಿಡಿ
WhatsApp Group Join Now
Telegram Group Join Now
ಬೆಳಗಾವಿ: ಬಿಜೆಪಿಯವರು ಇಡಿ, ಸಿಬಿಐ, ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ಸಿನ ಕಟ್ಟಾ, ನಿಷ್ಠಾವಂತ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸು ದಾಖಲಿಸುತ್ತಿದ್ದು; ಇದು ಅವರಿಗೇ ತಿರುಗುಬಾಣವಾಗುತ್ತಿದೆ ಎಂದು ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳಕರ್ ಲೇವಡಿ ಮಾಡಿದ್ದಾರೆ.
ಹಿರೇಬಾಗೇವಾಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಚಾರದಲ್ಲೂ  ಇಡಿ, ಸಿಬಿಐಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಬಲಿಷ್ಠ ನಾಯಕರ್ಯಾರನ್ನೂ ಬಿಡುತ್ತಿಲ್ಲ. ಈ ಹಿಂದೆಯೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಮೇಲೂ ಇಡಿ, ಸಿಬಿಐ ದಾಳಿ ಮಾಡಿಸಲಾಗಿತ್ತು. ತಪ್ಪು ಮಾಡದಿದ್ದರೂ ಜೈಲಿಗೆ ಹೋಗುವಂತೆ, ಮಾನಸಿಕವಾಗಿ ತೊಂದರೆ ಕೊಟ್ಟರೆಂದು ಮೃಣಾಲ್ ಕಿಡಿಕಾರಿದರು.
*ಸುಭದ್ರ ಸರ್ಕಾರ ಅಭದ್ರತೆಗೊಳಿಸಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಇಡೀ ದೇಶದಲ್ಲೇ ದಕ್ಷ ಹಾಗೂ ಸುಭದ್ರ ಸರ್ಕಾರ.  ಆದರೆ, ನಮ್ಮ ಸುಭದ್ರ ಸರ್ಕಾರವನ್ನು ಅಭದ್ರಗೊಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯವರ ಕುತಂತ್ರ ನಡೆಯುವುದಿಲ್ಲ. ನಮ್ಮ ಸಿದ್ದರಾಮಯ್ಯನವರನ್ನು ಬಿಜೆಪಿಯವರು ಏನೂ ಮಾಡಲು ಕೂಡ ಆಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ; ಯಾರಲ್ಲೂ ಸಹಮತವಿಲ್ಲ; ಬಿಜೆಪಿಯವರೇ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತ ತಮ್ಮ ಪಕ್ಷದ ನಾಯಕರ ಮಾನಹಾನಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಎರಡ್ಮೂರು ಗುಂಪುಗಳಾಗಿದೆ. ಆದರೆ, ತಮ್ಮ ಪಕ್ಷದ ನಡೆಯ ಬಗ್ಗೆ ಗಮನಿಸದೆ ಬಿಜೆಪಿಯವರು, ಕಾಂಗ್ರೆಸ್ಸಿನ ನಾಯಕರ ನಡುವೆ ಒಡಕುಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಮೃಣಾಲ್ ಹೆಬ್ಬಾಳಕರ್ ಆರೋಪಿಸಿದರು.
WhatsApp Group Join Now
Telegram Group Join Now
Share This Article